ಆರ್.ಬಿ.ತಿಮ್ಮಾಪುರಗೆ ಉಪಮುಖ್ಯಮಂತ್ರಿ, ಸ್ಥಾನ ಕೆ.ಹೆಚ್.ಮುನಿಯಪ್ಪರವರ ಜೊತೆಗೆ ಹೆಚ್. ಆಂಜನೇಯಗೆ ಸಚಿವ ಸ್ಥಾನ ನೀಡುವಂತೆ ಅಗ್ರಹ
ಮಾದಿಗ ಜನಾಂಗ ರಾಜ್ಯದಲ್ಲಿ ಅತಿ ದೊಡ್ಡ ದಲಿತ ಸಮು ದಾಯವಾಗಿದ್ದು, ಸಾಮಾಜಿಕ ನ್ಯಾಯ, ಕಾಂಗ್ರೆಸ್ ಪಕ್ಷದ ಬಲವರ್ಧನೆ ಹಾಗೂ ಜನಪರ ಹೋರಾಟ ಗಳಲ್ಲಿ ನಿರಂತರವಾಗಿ ಪ್ರಮುಖ ಪಾತ್ರವಹಿಸಿದೆ. ಆದಾಗ್ಯೂ, ಸಮುದಾಯಕ್ಕೆ ಸರ್ಕಾರದಲ್ಲಿ ತಕ್ಕ ಮಟ್ಟಿನ ರಾಜಕೀಯ ಸ್ಥಾನಮಾನ ಸಿಗದಿರುವುದು ಬೇಸರದ ಸಂಗತಿಯಾಗಿದೆ
-
ಬೆಂಗಳೂರು: ರಾಜ್ಯದ ಅತಿ ದೊಡ್ಡ ಮಾದಿಗ ಸಮಾಜಕ್ಕೆ ಸಚಿವ ಸಂಪುಟದಲ್ಲಿ ಇನ್ನಷ್ಟು ಬಲಿಷ್ಠ ಹಾಗೂ ನ್ಯಾಯಯುತ ರಾಜಕೀಯ ಪ್ರಾತಿನಿಧ್ಯ ಒದಗಿಸಬೇಕು. ಆರ್.ಬಿ.ತಿಮ್ಮಾಪುರಗೆ ಉಪ ಮುಖ್ಯಮಂತ್ರಿ, ಕೆ.ಹೆಚ್.ಮುನಿಯಪ್ಪರವರ ಜೊತೆಗೆ ಹೆಚ್. ಆಂಜನೇಯ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ ಡಾ.ಎಸ್.ಸಂಗಮೇಶ್ ಆಗ್ರಹಿಸಿದ್ದಾರೆ.
ರಾಜ್ಯದ ಎಲ್ಲಾ ಮಾದಿಗ ಸಂಘಟನೆಗಳು, ಮಠಾಧೀಶರು, ಬುದ್ಧಿಜೀವಿಗಳು, ಯುವ ಸಂಘಟನೆಗಳು, ನಿವೃತ್ತ ಅಧಿಕಾರಿಗಳು ಹಾಗೂ ಪ್ರಗತಿಪರ ಶಕ್ತಿಗಳು ಒಂದೇ ವೇದಿಕೆಯಲ್ಲಿ ನಿಂತು ಈ ನ್ಯಾಯಯುತ ಪ್ರಾತಿನಿಧ್ಯದ ಬೇಡಿಕೆಗೆ ಬೆಂಬಲ ನೀಡಬೇಕೆಂದು ಹೇಳಿದ್ದಾರೆ.
ಇದನ್ನೂ ಓದಿ: Bangalore News: ಬೂಸ್ಟ್, ಐಐಎಸ್‌ಸಿಯಲ್ಲಿ 'ವಾಧ್ವಾನಿ ಇನ್ನೋವೇಶನ್ ಸೆಂಟರ್' ಆರಂಭ
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾದಿಗ ಜನಾಂಗ ರಾಜ್ಯದಲ್ಲಿ ಅತಿ ದೊಡ್ಡ ದಲಿತ ಸಮು ದಾಯವಾಗಿದ್ದು, ಸಾಮಾಜಿಕ ನ್ಯಾಯ, ಕಾಂಗ್ರೆಸ್ ಪಕ್ಷದ ಬಲವರ್ಧನೆ ಹಾಗೂ ಜನಪರ ಹೋರಾಟ ಗಳಲ್ಲಿ ನಿರಂತರವಾಗಿ ಪ್ರಮುಖ ಪಾತ್ರವಹಿಸಿದೆ. ಆದಾಗ್ಯೂ, ಸಮುದಾಯಕ್ಕೆ ಸರ್ಕಾರದಲ್ಲಿ ತಕ್ಕ ಮಟ್ಟಿನ ರಾಜಕೀಯ ಸ್ಥಾನಮಾನ ಸಿಗದಿರುವುದು ಬೇಸರದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಅತಿ ದೊಡ್ಡ ದಲಿತ ಸಮುದಾಯದ ಜನಸಂಖ್ಯೆ, ರಾಜಕೀಯ ಶಕ್ತಿ ಹಾಗೂ ಸಾಮಾಜಿಕ ಕೊಡುಗೆಯನ್ನು ಪರಿಗಣಿಸಿದರೆ ಸಮರ್ಪಕ ಪ್ರಾತಿನಿಧ್ಯ ದೊರೆತಿಲ್ಲ. ರಾಜಕೀಯ ಪ್ರಾತಿನಿಧ್ಯ ಕೇವಲ ಹುದ್ದೆಯ ಪ್ರಶ್ನೆಯಲ್ಲ; ಅದು ಸಮುದಾಯದ ಗೌರವ, ಹಕ್ಕು. ಆಡಳಿತದಲ್ಲಿ ಪಾಲು ದಾರಿಕೆಯ ಸಂಕೇತವಾಗಿದೆ. ಸಮುದಾಯದ ಭಾವನೆಗಳನ್ನು ಗೌರವಿಸಿ ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದಿದ್ದಾರೆ.