ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಕೆ.ಹೆಚ್.ಮುನಿಯಪ್ಪರನ್ನು ಉಪಮುಖ್ಯಮಂತ್ರಿ ಮಾಡಿ : ಮಾದಾರ ಮಹಾಸಭಾ ಆಗ್ರಹ

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯವು 101 ಪರಿಶಿಷ್ಟ ಜಾತಿಗಳಲ್ಲೇ ಅತ್ಯಂತ ಶೋಷಣೆಗೆ ಒಳಗಾದ ಎಲ್ಲಾ ಅವಕಾಶಗಳಿಂದ ಸಮುದಾಯವಾಗಿದೆ. ಹಿಂದೆ ಬಿಜೆಪಿ ಸರಕಾರದಲ್ಲಿ ನಮ್ಮ ಸಮುದಾಯದ ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿ ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಲಾಗಿತ್ತು.

ಕೆ.ಹೆಚ್.ಮುನಿಯಪ್ಪರನ್ನು ಉಪಮುಖ್ಯಮಂತ್ರಿ ಮಾಡಿ

ಕೆ.ಹೆಚ್.ಮುನಿಯಪ್ಪ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಮಾದಾರ ಮಹಾಸಭಾ ಆಗ್ರಹಿಸಿತು -

Profile
Ashok Nayak May 29, 2026 11:40 PM

ಚಿಕ್ಕಬಳ್ಳಾಪುರ: ಮಾದಿಗ ಸಮುದಾಯದ ಹಿರಿಯ ಮುಖಂಡರು ಮುಖ್ಯಮಂತ್ರಿ ಸಿದ್ಧರಾಮಯ್ಯ(Chief Minister Siddaramaiah) ಕ್ಯಾಬಿನೆಟ್‌ನಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾಗಿ ಉತ್ತಮವಾಗಿ ಕೆಲಸ ಮಾಡಿದ್ದ ಕೆ.ಹೆಚ್.ಮುನಿಯಪ್ಪ(K H Muniyappa) ಅವರನ್ನು ಹೊಸ ಸರಕಾರದಲ್ಲಿ ಉಪಮುಖ್ಯಮಂತ್ರಿ ಮಾಡುವ ಮೂಲಕ ಸಮುದಾಯಕ್ಕೆ ಶಕ್ತಿ ತುಂಬಬೇಕಿದೆ ಎಂದು ಮಾದಾರ ಮಹಾಸಭಾದ ಜಿಲ್ಲಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ(RandeepSingh Surjewala)ರನ್ನು ಒತ್ತಾಯಿಸಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೋಂಬತ್ತಿ ಬೆಳಗಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ರಸಗೊಬ್ಬರ, ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಗೆ ಆಗ್ರಹಿಸಿ ಪುಟ್ಟಣ್ಣಯ್ಯ ಬಣದ ರೈತ ಸಂಘ ಪ್ರತಿಭಟನೆ
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯವು 101 ಪರಿಶಿಷ್ಟ ಜಾತಿಗಳಲ್ಲೇ ಅತ್ಯಂತ ಶೋಷಣೆಗೆ ಒಳಗಾದ ಎಲ್ಲಾ ಅವಕಾಶಗಳಿಂದ ಸಮುದಾಯವಾಗಿದೆ. ಹಿಂದೆ ಬಿಜೆಪಿ ಸರಕಾರದಲ್ಲಿ ನಮ್ಮ ಸಮುದಾಯದ ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿ ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಲಾಗಿತ್ತು. ಅಂತೆಯೇ ಕಾಂಗ್ರೆಸ್ ಪಕ್ಷವೂ ಕೂಡ ಮಾದಿಗ ಸಮುದಾಯದ ಕೆಹೆಚ್. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಮಾಡುವ ಅವರ ಅಪಾರ ಅನುಭವ ಸಮುದಾಯಕ್ಕೆ ಮತ್ತು ಸರಕಾರಕ್ಕೆ ದಕ್ಕುವಂತೆ ಮಾಡಬೇಕು ಎಂದರು.
ಕೆ.ಹೆಚ್. ಮುನಿಯಪ್ಪ ಅವರು ಮಾದಿಗ ಸಮುದಾಯದ ಅಗ್ರಗಣ್ಯ ನಾಯಕರಾಗಿದ್ದಾರೆ. ಕೇಂದ್ರ ಸಚಿವರಾಗಿ, ರಾಜ್ಯದಲ್ಲಿ ಸಚಿವರಾಗಿ, ಸಂಸದರಾಗಿ ಪಕ್ಷ ನಿಷ್ಟ ಶಿಸ್ತಿನ ಸಿಪಾಯಿಯಾಗಿ ಹೆಸರು ಗಳಿಸಿದ್ದಾರೆ. ಹೀಗಾಗಿ ಮಾದಾರ ಮಹಾಸಭಾ ಇವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತದೆ ಎಂದರು.
ಈ ವೇಳೆ ಮಾದಾರ ಮಹಾಸಭಾ ಜಿಲ್ಲಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣ, ತಾಲೂಕು ಅಧ್ಯಕ್ಷ ಕೊತ್ತನೂರು ಮುನಿಯಪ್ಪ, ಪಿಎಲ್‌ಡಿ ಬ್ಯಾಂಕ್ ಉಪಧ್ಯಕ್ಷ ತಿರುಮಳಪ್ಪ, ಗೌರಿಬಿದನುರು ತಾಲೂಕು ಅಧ್ಯಕ್ಷ ನಾಗಾರ್ಜುನ್, ಬಾಗೇಪಲ್ಲಿ ಅಧ್ಯಕ್ಷ ಅ.ನ.ಮೂರ್ತಿ, ಶಿಡ್ಲಘಟ್ಟ ನಗರದ ಕಾರ್ಯಕಾರಿ ಸಮಿತಿ ಸದಸ್ಯ ನರಸಿಂಹಯಪ್ಪ, ಎಸ್‌ಟಿಡಿ ವೆಂಕಟೇಶ್,ಜಿಲ್ಲಾ ಉಪಾಧ್ಯಕ್ಷ ಗೌರಿಬಿದನೂರು ಮುನಿಯಪ್ಪ, ಸಿಎನ್‌ಮುರಳಿ ಮೋಹನ್,ಮಂಚನಬಲೆ ಪ್ರಕಾಶ್, ದಿಬ್ಬೂರು ಶ್ರೀನಿವಾಸ್, ವೇಣು, ಮಂಜುನಾಥ್ ಮತ್ತಿತರರು ಇದ್ದರು.