ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜ್ಯದ 101 ತಾಲೂಕುಗಳಲ್ಲಿ ಬರ

ದಕ್ಷಿಣ ಒಳನಾಡಿನಲ್ಲಿ ಶೇ.41 ಕಡಿಮೆಯಾಗಿದೆ. ಮಳೆನಾಡಿನಲ್ಲಿ ಶೇ.35, ಕರಾವಳಿ ಪ್ರದೇಶದಲ್ಲಿ ಶೇ.24 ಮಳೆ ಕೊರತೆಯಾಗಿದೆ. 29 ಜಿಲ್ಲೆಗಳ ಪೈಕಿ 190 ತಾಲೂಕಿನಲ್ಲಿ ಮಳೆ ಕೊರತೆಯಾಗಿದೆ. 13 ತಾಲೂಕು ಗಳಲ್ಲಿ ತೀವ್ರ ಕೊರತೆಯಾಗಿದೆ ಎಂದು ತಿಳಿಸಿದರು. ಬರಪೀಡಿತ ಪ್ರದೇಶ ಅಂತ ಘೋಷಣೆ ಮಾಡಲು ಮಾನದಂಡವಿದೆ. ಈ ಸಂಬಂಧ 2020ರಲ್ಲಿ ಕೇಂದ್ರ ಕಾರ್ಯಸೂಚಿ ಬಿಡುಗಡೆ ಮಾಡಿದ್ದಾರೆ.

ರಾಜ್ಯದ 101 ತಾಲೂಕುಗಳಲ್ಲಿ ಬರ

-

Profile
Ashok Nayak Aug 28, 2026 9:22 AM

ಡಿಸಿಎಂ ಪರಮೇಶ್ವರ್ ಘೋಷಣೆ, ತಿಂಗಳಾಂತ್ಯಕ್ಕೆ ಮೋದಿಗೆ ವರದಿ 89 ತಾಲೂಕುಗಳಲ್ಲಿ ತೀವ, 12 ತಾಲೂಕುಗಳಲ್ಲಿ ಸಾಧಾರಣ ಸ್ಥಿತಿ

ಬೆಂಗಳೂರು: ರಾಜ್ಯದ 101 ತಾಲೂ ಕುಗಳು ತೀವ್ರ ಬರಪೀಡಿತ ಎಂದು ಸರಕಾರ ಘೋಷಿಸಿ ಅಧಿಸೂಚನೆ ಹೊರಡಿಸಿದೆ. ಇನ್ನೂ 32 ತಾಲೂಕುಗಳ ವಿಚಾರದಲ್ಲಿ ಕೇಂದ್ರದ ಮಾನದಂಡದಂತೆ ಬರ ಘೋಷಣೆ ಮಾಡಲು ನಿರ್ಧರಿಸಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಡಿಸಿಎಂ ಡಾ.ಜಿ.ಪರಮೇಶ್ವರ್, ಜೂನ್ 1ರಿಂದ ಆಗಸ್ಟ್ 12ರವರೆಗಿನ ಅವಧಿಯ ಮಳೆ ಕೊರತೆಯ ಅವಲೋಕನ ಮಾಡಲಾಗಿದೆ.

ಈ ವೇಳೆ 134 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಇದ್ದು, ಅವುಗಳನ್ನು ಬರ ಪೀಡಿತ ಎಂದು ಘೋಷಿಸಬಹುದು ಎಂದು ಅಂದಾಜಿಸಿದ್ದೆವು. ಅದನ್ನು ದೃಢಪಡಿಸಲು ಪಕ್ಕಾ ಪರಿಶೀಲನೆ ಮಾಡಲಾಗಿದೆ. ಅದರಲ್ಲಿ 101 ತಾಲೂಕುಗಳು ಬರ ಎಂದು ಘೋಷಿಸಲು ಅರ್ಹವಾಗಿವೆ. 101ರ ತಾಲೂಕುಗಳ ಪೈಕಿ 89 ತಾಲೂಕುಗಳಲ್ಲಿ ತೀವ್ರ ಬರವಿದೆ. 12 ತಾಲೂಕುಗಳಲ್ಲಿ ಸಾಧಾರಣ ಬರ ಇದೆ ಎಂದರು.

ಈ ತಿಂಗಳ ಕೊನೆಗೆ ಪ್ರಧಾನಿ ನರೇಂದ್ರ ಮೋದಿಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಕೃಷಿ ಸಚಿವರಿಗೆ ಬರ ವರದಿ ಸಲ್ಲಿಸಲಿದ್ದೇವೆ. ಕಳೆದ ಬಾರಿ ಕೇಂದ್ರ ಸರಕಾರ ರಾಜ್ಯಕ್ಕೆ ಪರಿಹಾರವಾಗಿ 3500 ಕೋಟಿ ರು. ಹಣ ನೀಡಿದ್ದರು ಎಂದು ಹೇಳಿದ್ದಾರೆ. ಮುಂದಿನ ಹಂತದಲ್ಲಿ ಮತ್ತೆ ಬರ ಸಂಬಂಧ ಪರಿಶೀಲನೆ ಮಾಡುತ್ತೇವೆ.

ಇದನ್ನೂ ಓದಿ: Bangalore University: ಕಳೆದ ಆರು ತಿಂಗಳಿಂದ ಮುಂದೂಡಿಕೆಯಾಗಿದ್ದ ಬೆಂಗಳೂರು ವಿವಿ ಪಿಎಚ್.ಡಿ ಪ್ರವೇಶ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ; ಆಗಸ್ಟ್ 3, 4ರಂದು ಸಂದರ್ಶನ

ಪ್ರತಿ 15 ದಿನಕ್ಕೊಮ್ಮೆ ಪರಿಶೀಲನೆ ಮಾಡಿ ಮಾನದಂಡದ ಪ್ರಕಾರ ಬರ ಘೋಷಣೆ ಮಾಡಲಾ ಗುವುದು. 1976ರ ಬಳಿಕ ಜೂನ್ ತಿಂಗಳ ಸರಾಸರಿ ನೋಡಿದರೆ ಇಷ್ಟು ಕಡಿಮೆ ಮಳೆ ಆಗಿರಲಿಲ್ಲ. ಜೂ.1-ಆ.26 ರವರೆಗೆ 666 ಮಿ.ಮೀ. ಮಳೆ ಆಗಬೇಕಿತ್ತು. ಆದರೆ ನಮಗೆ ಮಳೆ ಆಗಿದ್ದು ಕೇವಲ 465 ಮಿ.ಮೀ. ಮಾತ್ರ. ಒಳನಾಡು ಕರ್ನಾಟಕದಲ್ಲಿ 31% ಮಳೆ ಕೊರತೆಯಾಗಿದೆ.

ದಕ್ಷಿಣ ಒಳನಾಡಿನಲ್ಲಿ ಶೇ.41 ಕಡಿಮೆಯಾಗಿದೆ. ಮಳೆನಾಡಿನಲ್ಲಿ ಶೇ.35, ಕರಾವಳಿ ಪ್ರದೇಶದಲ್ಲಿ ಶೇ.24 ಮಳೆ ಕೊರತೆಯಾಗಿದೆ. 29 ಜಿಲ್ಲೆಗಳ ಪೈಕಿ 190 ತಾಲೂಕಿನಲ್ಲಿ ಮಳೆ ಕೊರತೆಯಾಗಿದೆ. 13 ತಾಲೂಕುಗಳಲ್ಲಿ ತೀವ್ರ ಕೊರತೆಯಾಗಿದೆ ಎಂದು ತಿಳಿಸಿದರು. ಬರಪೀಡಿತ ಪ್ರದೇಶ ಅಂತ ಘೋಷಣೆ ಮಾಡಲು ಮಾನದಂಡವಿದೆ. ಈ ಸಂಬಂಧ 2020ರಲ್ಲಿ ಕೇಂದ್ರ ಕಾರ್ಯಸೂಚಿ ಬಿಡುಗಡೆ ಮಾಡಿದ್ದಾರೆ.

ಟ್ರಿಗರ್ 1ರಲ್ಲಿ ಕನಿಷ್ಠ ಮೂರು ವಾರ ಡ್ರೈ ಸ್ಪೆಲ್ ಇರಬೇಕು. ಟ್ರಿಗರ್ 2ನಲ್ಲಿ ಬಿತ್ತನೆ ಪ್ರಮಾಣ ಶೇಕಡಾವಾರು, ಬೆಳೆಗಳ ಸ್ಥಿತಿಗತಿ, ಮಣ್ಣಿನ ತೇವಾಂಶ, ಅಂತರ್ಜಲದ ಪ್ರಮಾಣ, ಕೆರೆ ಕಟ್ಟೆಗಳಲ್ಲಿ, ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ನೋಡಿ ಬರ ಪೀಡಿತ ಎಂದು ಘೋಷಿಸಬಹುದಾಗಿದೆ. ಅದರಂತೆ ಹೋಬಳಿವಾರು ಗ್ರೌಂಡ್ ಟ್ರೂತ್ ಮಾಡಲಾಗಿದೆ. ಆ ಡೇಟಾ ಸಿಕ್ಕಿದ ಮೇಲೆ ಪರಿಶೀಲಿಸಿ ಬರ ಘೋಷಣೆ ಮಾಡಲಾಗಿದೆ ಎಂದರು.

image

ಕುಡಿಯುವ ನೀರಿಗೆ ಭಾರೀ ಸಮಸ್ಯೆ ಆಗಿದೆ. ಕೊಳವೆ ಬಾವಿ ನೀರು ಬರಿದಾಗುತ್ತಿದೆ. 758 ಗ್ರಾಮಗಳಲ್ಲಿ 190 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. 18 ಸ್ಥಳೀಯ ಸಂಸ್ಥೆಗಳ 114 ವಾರ್ಡ್‌ನಲ್ಲಿ 48 ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

-ಡಾ.ಜಿ.ಪರಮೇಶ್ವರ್, ಡಿಸಿಎಂ