ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ 10 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ; ಕೇರಳ ಮೂಲದ ಇಬ್ಬರ ಬಂಧನ
Drugs seized in Bengaluru: ಬೆಂಗಳೂರು ಹೊರವಲಯದ ಬಾಗಲೂರಿನ ಪ್ರೆಸ್ಟೀಜ್ ಫೈನ್ ಬೇಕರಿ ಪಾರ್ಕ್‌ನ ಫ್ಲ್ಯಾಟ್‌ವೊಂದರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದು, ಕೇರಳ ಮೂಲದ ಇಬ್ಬರನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಸಿಸಿಬಿ ನಾರ್ಕೊಟಿಕ್ಸ್ ವಿಭಾಗದಿಂದ ನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಪಾರ್ಟ್‌ಮೆಂಟ್‌ವೊಂದರಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಾಗಲೂರಿನ ಪ್ರೆಸ್ಟೀಜ್ ಫೈನ್ ಬೇಕರಿ ಪಾರ್ಕ್‌ನ ಫ್ಲ್ಯಾಟ್‌ವೊಂದರಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್ (ಎಲ್‌ಎಸ್‌ಡಿ , ಹೈಡ್ರೋ ಗಾಂಜಾ, ಚರಸ್) ಜಪ್ತಿ ಮಾಡಿದ್ದು, ಕೇರಳ ಮೂಲದ ಇಬ್ಬರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಅಶ್ವಿನ್ (27), ಮೊಬಿನಾ (25) ಬಂಧಿತ ಆರೋಪಿಗಳು. ಈ ಆರೋಪಿಗಳಿಗೆ ಥೈಲ್ಯಾಂಡ್ ಮೂಲದ ವಿನ್ಸೆಟ್ ಆಗಾಗ್ಗೆ ಫ್ಲೈಟ್‌ನಲ್ಲಿ ಡ್ರಗ್ಸ್ ಕಳುಹಿಸುತ್ತಿದ್ದ. ವಿನ್ಸೆಂಟ್ ಸೂಚಿಸುತ್ತಿದ್ದ ಜಾಗದಲ್ಲಿ ಅಶ್ವಿನ್ ಮತ್ತು ಮೊಬಿನಾ ಡ್ರಗ್ಸ್ ಕೊಟ್ಟು ಬರುತ್ತಿದ್ದರು. ಇದೀಗ ಹೀಗೆ ಮಾದಕ ವಸ್ತುಗಳ ಸಾಗಣೆ ಮಾಡೋದನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದವರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ಮೊದಲ ಬಾರಿ 8,335 ಎಲ್‌ಎಸ್‌ಡಿ ಸ್ಟ್ರಿಪ್ಸ್ ವಶಕ್ಕೆ
ಇನ್ನು ಈ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ 8,335 ಎಲ್‌ಎಸ್‌ಡಿ ಸ್ಟ್ರಿಪ್ಸ್ ಪತ್ತೆಯಾಗಿದ್ದು, ಸಿಸಿಬಿ ಪೊಲೀಸರ ತಂಡ ಜಪ್ತಿ ಮಾಡಿದೆ. 1 ಎಲ್‌ಎಸ್‌ಡಿ ಸ್ಟ್ರಿಪ್ 6,000 ರೂ. ಬೆಲೆ ಬಾಳುತ್ತೆ. ಪೆಡ್ಲರ್‌ಗಳು ದೇವರ ಚಿತ್ರ ಸೇರಿ ವಿವಿಧ ಚಿತ್ರಕಲಾ ರೂಪದಲ್ಲಿ ಎಲ್‌ಎಸ್‌ಡಿ ಸ್ಟ್ರಿಪ್‌ಗಳನ್ನು ಮಾರಾಟ ಮಾಡುತ್ತಿದ್ದರು. ಇದರೊಂದಿಗೆ 534 ಗ್ರಾಂ ಚರಸ್, 5 ಕೆಜಿ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Murder Case: ನಿಧಾನವಾಗಿ ಓಡಿಸು ಎಂದು ತಿಳಿಹೇಳಿದವನ ಮೇಲೆ ಕಾರು ಓಡಿಸಿ ಹತ್ಯೆ
ಸದ್ಯ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ, ಫ್ಲ್ಯಾಟ್ ಮಾಲೀಕರ ಪಾತ್ರದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ.