ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫೋರ್ಟಿಸ್ ಆಸ್ಪತ್ರೆಯಿಂದ ವಿಶೇಷ ಅತ್ಯಾಧುನಿಕ ಐಎಲ್‌ಡಿ ಮತ್ತು ಲಂಗ್ ಫೇಲ್ಯೂರ್ ಕ್ಲಿನಿಕ್ ಉದ್ಘಾಟನೆ

ಉಲ್ಬಣಗೊಳ್ಳುವ ಶ್ವಾಸಕೋಶ(Lungs)ದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಮೌಲ್ಯಮಾಪನ ಮತ್ತು ನಿರ್ವಹಣೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯು ವಿಶೇಷ ಇಂಟರ್‌ ಸ್ಟೀಷಿಯಲ್ ಲಂಗ್ ಡಿಸೀಸ್ (ಐಎಲ್‌ಡಿ) ಮತ್ತು ಲಂಗ್ ಫೇಲ್ಯೂರ್ ಕ್ಲಿನಿಕ್ ಅನ್ನು ಹೊಸದಾಗಿ ಉದ್ಘಾಟಿಸಿದೆ.

ವಿಶೇಷ ಅತ್ಯಾಧುನಿಕ ಐಎಲ್‌ಡಿ ಮತ್ತು ಲಂಗ್ ಫೇಲ್ಯೂರ್ ಕ್ಲಿನಿಕ್ ಉದ್ಘಾಟನೆ

-

Profile
Ashok Nayak Nov 23, 2026 10:27 PM

ಬೆಂಗಳೂರು: ಉಲ್ಬಣಗೊಳ್ಳುವ ಶ್ವಾಸಕೋಶ(Lungs)ದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಮೌಲ್ಯಮಾಪನ ಮತ್ತು ನಿರ್ವಹಣೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯು ವಿಶೇಷ ಇಂಟರ್‌ ಸ್ಟೀಷಿಯಲ್ ಲಂಗ್ ಡಿಸೀಸ್ (ಐಎಲ್‌ಡಿ) ಮತ್ತು ಲಂಗ್ ಫೇಲ್ಯೂರ್ ಕ್ಲಿನಿಕ್ ಅನ್ನು ಹೊಸದಾಗಿ ಉದ್ಘಾಟಿಸಿದೆ.

ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳ ಇಂಟರ್ವೆನ್ಷನಲ್ ಪಲ್ಮನಾಲಜಿ ಮತ್ತು ಲಂಗ್ ಟ್ರಾನ್ಸ್‌ ಪ್ಲಾಂಟೇಶನ್ ವಿಭಾಗದ ನಿರ್ದೇಶಕರಾದ ಡಾ. ಶ್ರೀವತ್ಸ ಲೋಕೇಶ್ವರನ್ ಅವರ ನೇತೃತ್ವದಲ್ಲಿ, ಈ ಕ್ಲಿನಿಕ್ ಐಎಲ್‌ಡಿ ಪಲ್ಮನಾಲಜಿ, ಥೊರಾಸಿಕ್ ರೇಡಿಯಾಲಜಿ, ರುಮಟಾಲಜಿ, ಪ್ಯಾಥಾಲಜಿ, ಕಸಿ ಔಷಧ ಮತ್ತು ಶಸ್ತ್ರಚಿಕಿತ್ಸೆ, ಪುನರ್ವಸತಿ, ಪೋಷಣೆ ಮತ್ತು ಬೆಂಬಲಿತ ಆರೈಕೆಯನ್ನು ಒಳಗೊಂಡ ಬಹು-ಶಿಸ್ತೀಯ ವಿಧಾನದ ಮೂಲಕ ಸಮನ್ವಯಿತ ವೈದ್ಯಕೀಯ ಮೌಲ್ಯಮಾಪನ ಮತ್ತು ರೋಗದ ನಿರ್ವಹಣೆಯನ್ನು ಸುಗಮಗೊಳಿಸುತ್ತದೆ.

ಇಂಟರ್‌ ಸ್ಟೀಷಿಯಲ್ ಲಂಗ್ ಡಿಸೀಸ್ (ಐಎಲ್‌ಡಿ) ಎನ್ನುವುದು ಶ್ವಾಸಕೋಶದ ಅಂಗಾಂಶಗಳ ಉರಿಯೂತ ಮತ್ತು ಗಾಯಕ್ಕೆ ಕಾರಣವಾಗುವ ವಿವಿಧ ಪರಿಸ್ಥಿತಿಗಳ ಒಂದು ಗುಂಪಾಗಿದ್ದು, ಇದು ಶ್ವಾಸಕೋಶದ ಕಾರ್ಯನಿರ್ವಹಣೆ ಮತ್ತು ಉಸಿರಾಟದ ಪ್ರಕ್ರಿಯೆಯ ಮೇಲೆ ತೀವ್ರವಾದ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಉಲ್ಬಣಗೊಳ್ಳುವ ಶ್ವಾಸಕೋಶದ ಕಾಯಿಲೆ ಗಳಿರುವ ರೋಗಿಗಳಿಗೆ, ಸಕಾಲಿಕವಾಗಿ ರೋಗನಿರ್ಣಯ ಮಾಡುವುದು, ನಿಯಮಿತವಾದ ಮೇಲ್ವಿಚಾರಣೆ ಮತ್ತು ಸೂಕ್ತವಾದ ಚಿಕಿತ್ಸೆಯನ್ನು ನೀಡುವುದು ರೋಗ ನಿರ್ವಹಿಸಲು ಹಾಗೂ ರೋಗದ ಪ್ರಗತಿಯನ್ನು ನಿರ್ಣಯಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ಇದನ್ನೂ ಓದಿ: Health Tips: ಮಹಿಳೆಯರಿಗೆ ಫ್ರೊಟೀನ್ ಆಹಾರ ಏಕೆ ಅಗತ್ಯ!

ಈ ಕ್ಲಿನಿಕ್ ರೋಗಿಗಳಿಗೆ ವೈಯಕ್ತೀಕರಿಸಿದ ಚಿಕಿತ್ಸಾ ಯೋಜನೆಗಳು, ಪುನರ್ವಸತಿ ಸೌಲಭ್ಯ, ದೀರ್ಘಕಾಲೀನ ರೋಗ ನಿರ್ವಹಣಾ ವಿಧಾನಗಳು ಮತ್ತು ನಿಯಮಿತವಾದ ವೈದ್ಯಕೀಯ ಮೌಲ್ಯಮಾಪನದ ಮೂಲಕ ನಿರಂತರವಾಗಿ ಬೆಂಬಲವನ್ನು ನೀಡುತ್ತದೆ. ಇದು ಚಿಕಿತ್ಸೆ ನೀಡುವ ವೈದ್ಯರ ತಂಡಕ್ಕೆ ರೋಗದ ಪ್ರಗತಿಯನ್ನು ನಿಖರವಾಗಿ ಮೌಲ್ಯಮಾಪನ ಮಾಡಲು ಮತ್ತು ಯಾವ ರೀತಿಯ ಸೂಕ್ತವಾದ ಆರೈಕೆಯ ಕ್ರಮವನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುವಂತೆ ಮಾಡುತ್ತದೆ.

ಶ್ವಾಸಕೋಶದ ಕಸಿಯ ಅಗತ್ಯವಿರುವ ರೋಗಿಗಳ ಮೌಲ್ಯಮಾಪನ ಮಾಡುವುದರ ಮೇಲೆ ಈ ಹೊಸ ಕ್ಲಿನಿಕ್‌ ನ ಹೆಚ್ಚಿನ ಗಮನವಿರುತ್ತದೆ. ಇದು ರೋಗದ ಸೂಕ್ತವಾದ ಹಂತದಲ್ಲಿಯೇ ಮೌಲ್ಯ ಮಾಪನ ಪ್ರಕ್ರಿಯೆ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ರೋಗಲಕ್ಷಣಗಳು, ಶ್ವಾಸಕೋಶದ ಕಾರ್ಯನಿರ್ವಹಣೆಯ ಮಟ್ಟ, ವ್ಯಾಯಾಮ ಮಾಡುವ ಸಾಮರ್ಥ್ಯ, ಆಮ್ಲಜನಕದ ಅವಶ್ಯಕತೆಗಳು ಮತ್ತು ಇಮೇಜಿಂಗ್‌ ತಂತ್ರಜ್ಞಾನಗಳ ನಿಯಮಿತವಾದ ಮೌಲ್ಯಮಾಪನವು, ಚಿಕಿತ್ಸೆ ನೀಡುವ ವೈದ್ಯರ ತಂಡಕ್ಕೆ ರೋಗದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಮುಂದಿನ ಹಂತದ ಕಸಿ ಮೌಲ್ಯಮಾಪನವು ಯಾವಾಗ ಸೂಕ್ತವಾಗಿರುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ಸಹಾಯ ಮಾಡುತ್ತದೆ. ಅಗತ್ಯವಿದ್ದಲ್ಲಿ ಮತ್ತು ವೈದ್ಯಕೀಯವಾಗಿ ಸೂಚಿಸಲಾದ ಸಂದರ್ಭಗಳಲ್ಲಿ ರೋಗಿಗಳು ಶ್ವಾಸಕೋಶದ ಕಸಿಗೆ ಮುಂಚಿತವಾಗಿ ವೈದ್ಯಕೀಯ ತಪಾಸಣೆ ಮತ್ತು ಸಿದ್ಧತೆಗಳನ್ನು ಕೈಗೊಳ್ಳಲು ಇಂತಹ ಮುಂಚಿನ ಮೌಲ್ಯಮಾಪನವು ರೋಗಿಗಳಿಗೆ ಹೆಚ್ಚು ಅನುಕೂಲವನ್ನು ಮಾಡಿಕೊಡುತ್ತದೆ.

ತೀವ್ರವಾದ ಉಸಿರಾಟದ ಕ್ಷೀಣತೆಯನ್ನು ಹೊಂದಿರುವ ಎಚ್ಚರಿಕೆಯಿಂದ ಆಯ್ಕೆಮಾಡಲ್ಪಟ್ಟ ರೋಗಿಗಳಿಗೆ, ಎಕ್ಸ್‌ ಟ್ರಾಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಷನ್ (ಇಸಿಎಂಒ) ಅನ್ನು ಕಸಿಗೆ ಮುಂಚಿನ ಸೇತುವೆಯಾಗಿ ಬಳಸುವುದನ್ನು ಪರಿಗಣಿಸಬಹುದು. ರೋಗಿಯ ಪ್ರಸ್ತುತ ವೈದ್ಯಕೀಯ ಸ್ಥಿತಿ ಮತ್ತು ಚಿಕಿತ್ಸೆ ನೀಡುವ ವೈದ್ಯಕೀಯ ತಂಡದ ಮೌಲ್ಯಮಾಪನದ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಇಸಿಎಂಒ ಎಂಬುದು ತಾತ್ಕಾಲಿಕವಾಗಿ ಹೃದಯ ಮತ್ತು ಶ್ವಾಸಕೋಶದ ಕಾರ್ಯವನ್ನು ಬೆಂಬಲಿಸುವ ಒಂದು ರೀತಿಯ ಸುಧಾರಿತ ಜೀವರಕ್ಷಕ ಬೆಂಬಲ ವ್ಯವಸ್ಥೆಯಾಗಿದೆ.

ಹೊಸ ಕ್ಲಿನಿಕ್‌ನ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ, ಫೋರ್ಟಿಸ್ ಆಸ್ಪತ್ರೆಗಳ ಇಂಟರ್ವೆನ್ಷನಲ್ ಪಲ್ಮನಾಲಜಿ ಮತ್ತು ಲಂಗ್ ಟ್ರಾನ್ಸ್‌ಪ್ಲಾಂಟೇಶನ್ ವಿಭಾಗದ ನಿರ್ದೇಶಕರಾದ ಡಾ. ಶ್ರೀವತ್ಸ ಲೋಕೇಶ್ವರನ್ ಮಾತನಾಡಿ, "ಉಲ್ಬಣಗೊಳ್ಳುವ ಶ್ವಾಸಕೋಶದ ಕಾಯಿಲೆಗಳಿರುವ ರೋಗಿಗಳಿಗೆ ಅವರ ಸ್ಥಿತಿಯ ಸ್ವರೂಪ ಮತ್ತು ಹಂತವನ್ನು ಅವಲಂಬಿಸಿ ವಿವಿಧ ರೂಪಗಳ ವೈದ್ಯಕೀಯ ಮೌಲ್ಯಮಾಪನ ಮತ್ತು ನಿರ್ವಹಣೆಯ ಅಗತ್ಯವಿರುತ್ತದೆ. ಐಎಲ್‌ಡಿ ಮತ್ತು ಲಂಗ್ ಫೇಲ್ಯೂರ್ ಕ್ಲಿನಿಕ್ ಬಹು-ಶಿಸ್ತೀಯ ಮೌಲ್ಯಮಾಪನ, ರೋಗದ ಪ್ರಗತಿಯ ನಿಯಮಿತ ಮೇಲ್ವಿಚಾರಣೆ ಮತ್ತು ಪ್ರತಿಯೊಬ್ಬರಿಗೂ ವೈಯಕ್ತೀಕರಿಸಿದ ಚಿಕಿತ್ಸಾ ಯೋಜನೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಶ್ವಾಸಕೋಶದ ಕಸಿಯ ಅಗತ್ಯವಿರುವ ರೋಗಿಗಳಿಗೆ, ಮುಂಚಿನ ಮೌಲ್ಯಮಾಪನವು ಅವರ ಸೂಕ್ತತೆಯನ್ನು ಮತ್ತು ಮುಂದಿನ ಮೌಲ್ಯಮಾಪನಕ್ಕಾಗಿ ಸರಿಯಾದ ಸಮಯವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಇದು ಚಿಕಿತ್ಸೆ ನೀಡುವ ವೈದ್ಯರ ತಂಡಕ್ಕೆ ಅವರ ವೈದ್ಯಕೀಯ ಸ್ಥಿತಿಯನ್ನು ನಿರ್ಣಯಿಸಲು ಮತ್ತು ನಿರ್ವಹಣೆಯಲ್ಲಿ ಮುಂದಿನ ಹಂತಗಳನ್ನು ಯೋಜಿಸಲು ಕೂಡ ಅನುಮತಿಸುತ್ತದೆ" ಎಂದು ಹೇಳಿದರು.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಗೌತಮ್ ಸಿ. ಬಿ. ಅವರು ಮಾತನಾಡಿ, "ಉಲ್ಬಣಗೊಳ್ಳುವ ಶ್ವಾಸಕೋಶದ ಕಾಯಿಲೆಗಳಿಗೆ ಸಾಮಾನ್ಯವಾಗಿ ವಿವಿಧ ವೈದ್ಯಕೀಯ ವಿಶೇಷತೆಗಳಾದ್ಯಂತ ನಿರಂತರವಾದ ವೈದ್ಯಕೀಯ ಮೌಲ್ಯ ಮಾಪನ ಮತ್ತು ಸಮನ್ವಯದ ಅಗತ್ಯವಿರುತ್ತದೆ. ಐಎಲ್‌ಡಿ ಮತ್ತು ಲಂಗ್ ಫೇಲ್ಯೂರ್ ಕ್ಲಿನಿಕ್‌ನ ಈ ಪರಿಚಯವು ಇಂತಹ ಪರಿಸ್ಥಿತಿಗಳನ್ನು ಹೊಂದಿರುವ ರೋಗಿಗಳಿಗೆ ಸಮನ್ವಯಿತ ವೈದ್ಯಕೀಯ ಸೇವೆಗಳ ಲಭ್ಯತೆಯನ್ನು ಸುಗಮಗೊಳಿಸುವ ನಮ್ಮ ಪ್ರಮುಖ ಗಮನವನ್ನು ಪ್ರತಿಬಿಂಬಿಸುತ್ತದೆ. ಈ ಯೋಜನೆ ಮೂಲಕ, ರೋಗಿಗಳಿಗೆ ಅವರ ವೈದ್ಯಕೀಯ ಅವಶ್ಯಕತೆಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲು, ಮೇಲ್ವಿಚಾರಣೆ ನಡೆಸಲು ಮತ್ತು ಲಭ್ಯವಿರುವ ಚಿಕಿತ್ಸಾ ಆಯ್ಕೆಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಲು ಒಂದು ವ್ಯವಸ್ಥಿತವಾದ ಪ್ರವೇಶ ಬಿಂದುವನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ" ಎಂದರು.

ಡಾ. ಶ್ರೀವತ್ಸ ಲೋಕೇಶ್ವರನ್

ಎಂಬಿಬಿಎಸ್, ಎಂಡಿ (ಪಲ್ಮನರಿ ಮೆಡಿಸಿನ್), ಫೆಲೋಶಿಪ್ ಇನ್ ರೆಸ್ಪಿರೇಟರಿ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್ (ಎನ್‌ಯುಹೆಚ್-ಸಿಂಗಾಪುರ), ಫೆಲೋಶಿಪ್ ಇನ್ ರೆಸ್ಪಿರೇಟರಿ ಎಂಡೋಸ್ಕೋಪಿ (ಎನ್‌ಸಿಸಿ-ಜಪಾನ್), ಎಂಎಬಿಐಪಿ.