ED Raid: ಹ್ಯಾರಿಸ್- ನಲಪಾಡ್ ಮೇಲಿನ ಇಡಿ ದಾಳಿಗೆ ಮೃತ ಸಿಜೆ ರಾಯ್ ಜೊತೆಗಿನ ನಂಟು ಕಾರಣ?
ಸಿ.ಜೆ ಯ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವ್ಯವಹಾರಿಕ ನಷ್ಟ, ತೆರಿಗೆ ವಂಚನೆ ಸೇರಿ ಹಲವು ವಿಷಯಗಳು ಚರ್ಚೆಗೆ ಬಂದಿದ್ದವು. ಈ ರಾಯ್ ಜೊತೆಗೆ ಹ್ಯಾರಿಸ್ ನಲಪಾಡ್ ಕುಟುಂಬ ವ್ಯವಹಾರಿಕ ಸಂಬಂಧ ಇರಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲೂ ಇ.ಡಿ. ಅಧಿಕಾರಿಗಳು ದಾಳಿ ನಡೆಸಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ನಲಪಾಡ್, ಹ್ಯಾರಿಸ್ -
ಬೆಂಗಳೂರು, ಏ. 21: ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಖ್ಯಾತ ಉದ್ಯಮಿ ಸಿ.ಜೆ ರಾಯ್ (CJ Roy) ಜೊತೆಗೆ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ (NA Haris) ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ (mohammad nalapad) ವ್ಯವಹಾರಿಕ ಸಂಬಂಧ ಹೊಂದಿದ್ದರು. ಈ ಹಿನ್ನೆಲೆಯಲ್ಲಿಯೂ ಇಡಿ ಅಧಿಕಾರಿಗಳು ಈ ಇಬ್ಬರ ಮೇಲೆ ದಾಳಿ (ED raid) ನಡೆಸಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ರಾಯ್ ಅವರು ಕರ್ನಾಟಕ, ಕೇರಳ, ದುಬೈ ಸೇರಿ ಹಲವು ಕಡೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದರು. ಹಣಕಾಸು ವ್ಯವಹಾರ ಸಂಬಂಧ ಕೇರಳ ಐಟಿ ಅಧಿಕಾರಿಗಳು ರಾಯ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆಯೇ ರಾಯ್ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಿ.ಜೆ ಯ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವ್ಯವಹಾರಿಕ ನಷ್ಟ, ತೆರಿಗೆ ವಂಚನೆ ಸೇರಿ ಹಲವು ವಿಷಯಗಳು ಚರ್ಚೆಗೆ ಬಂದಿದ್ದವು. ಈ ರಾಯ್ ಜೊತೆಗೆ ಹ್ಯಾರಿಸ್ ನಲಪಾಡ್ ಕುಟುಂಬ ವ್ಯವಹಾರಿಕ ಸಂಬಂಧ ಇರಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲೂ ಇ.ಡಿ. ಅಧಿಕಾರಿಗಳು ದಾಳಿ ನಡೆಸಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಶಾಸಕ ಹ್ಯಾರಿಸ್, ಪುತ್ರ ನಲಪಾಡ್ ನಿವಾಸದ ಮೇಲೆ ಇಡಿ ದಾಳಿ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
10 ಲಕ್ಷದ ನಂಟು?
2020ರಲ್ಲಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಯಶೋಧಾ ದೇವಿ ಎಂಬುವವರು ನೀಡಿದ ದೂರು ಇಡೀ ಪ್ರಕರಣಕ್ಕೆ ನಾಂದಿ ಹಾಡಿತ್ತು. ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ, ರಾಬಿನ್ ಖಂಡೇಲ್ವಾಲ ಮತ್ತು ಅಜಿತ್ ಖಂಡೇಲ್ವಾಲ ಎಂಬುವವರು 28 ಲಕ್ಷ ರೂಪಾಯಿಗಳನ್ನು ಬಿಟ್ ಕಾಯಿನ್‌ನಲ್ಲಿ ಹೂಡಿಕೆ ಮಾಡಿದರೆ 45 ಲಕ್ಷ ರೂಪಾಯಿ ನೀಡುವುದಾಗಿ ನಂಬಿಸಿ ವಂಚಿಸಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಲಭ್ಯವಾದ ಮನಿ ಟ್ರೇಲ್‌ನಲ್ಲಿ ನಲಪಾಡ್ ಹೆಸರು ಕೇಳಿಬಂದಿದೆ.
ವರದಿಗಳ ಪ್ರಕಾರ, ಶ್ರೀಕಿ ಬಿಟ್ ಕಾಯಿನ್ ಹ್ಯಾಕ್ ಮಾಡಿ ಬಂದ ಹಣವನ್ನು ಮುಂಬೈ ಮೂಲದ ವ್ಯಕ್ತಿಯೊಬ್ಬನಿಗೆ ಕಳುಹಿಸಿದ್ದ. ಆ ಮುಂಬೈ ಮೂಲದ ವ್ಯಕ್ತಿಯು ನಲಪಾಡ್ ಅವರ ಬ್ಯಾಂಕ್ ಖಾತೆಗೆ 10 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದ ಎನ್ನಲಾಗಿದೆ. ಈ ಆರ್ಥಿಕ ವ್ಯವಹಾರವೇ ಈಗ ನಲಪಾಡ್ ಪಾಲಿಗೆ ಕುತ್ತಾಗಿ ಪರಿಣಮಿಸಿದೆ.
ಹ್ಯಾಕರ್ ಶ್ರೀಕಿ ಮತ್ತು ನಲಪಾಡ್ ಕುಟುಂಬಕ್ಕೆ ಹಳೆಯ ಪರಿಚಯವಿದೆ. ನಲಪಾಡ್ ಸಹೋದರ ಓಮರ್ ನಲಪಾಡ್ ಮತ್ತು ಶ್ರೀಕಿ ಸಹಪಾಠಿಗಳಾಗಿದ್ದರು (Classmates). ಇದೇ ಕಾರಣಕ್ಕೆ ಶ್ರೀಕಿ ನಲಪಾಡ್ ಅವರಿಗೂ ಹತ್ತಿರವಾಗಿದ್ದ ಎನ್ನಲಾಗಿದೆ. ಈ ಸ್ನೇಹದ ಹಿನ್ನೆಲೆಯಲ್ಲೇ ವ್ಯವಸ್ಥಿತವಾಗಿ ಬಿಟ್ ಕಾಯಿನ್ ಹ್ಯಾಕಿಂಗ್ ಮತ್ತು ಹಣದ ವರ್ಗಾವಣೆ ನಡೆದಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.
ED raid: ಕಾಂಗ್ರೆಸ್ ಶಾಸಕ ಹ್ಯಾರಿಸ್, ಪುತ್ರ ನಲಪಾಡ್ ನಿವಾಸಗಳ ಮೇಲೆ ಇಡಿ ದಾಳಿ