ಪಾಕ್ ಲೀಗ್‌ನಿಂದ ಹಿಂದೆ ಸರಿದ ದಾಸುನ್ ಶನಕಗೆ ಒಂದು ವರ್ಷದ ನಿಷೇಧ
Dasun Shanaka: ಈ ಋತುವಿನ ಐಪಿಎಲ್‌ನಲ್ಲಿ ರಾಜಸ್ಥಾನ ಪರ ಇನ್ನೂ ಕಾಣಿಸಿಕೊಳ್ಳದ ಶನಕ, ಪಿಎಸ್‌ಎಲ್‌ನಿಂದ ಹಿಂದೆ ಸರಿದ ನಿರ್ಧಾರಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಬೇರೆ ಯಾವುದೇ ಪಂದ್ಯಾವಳಿಗೆ ಸೇರುವ ಉದ್ದೇಶವಿರಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Dasun Shanaka -
ಲಾಹೋರ್, ಎ.21: ಈ ವರ್ಷದ ಪಾಕಿಸ್ತಾನ ಸೂಪರ್ ಲೀಗ್(PSL 2026)ನಿಂದ ಹಿಂದೆ ಸರಿದು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ ರಾಯಲ್ಸ್ ಸೇರಿದ ಶ್ರೀಲಂಕಾದ ಆಲ್‌ರೌಂಡರ್ ದಾಸುನ್ ಶನಕ(Dasun Shanaka) ಅವರನ್ನು ಮುಂದಿನ ಆವೃತ್ತಿಯ ಪಿಎಸ್‌ಎಲ್‌ನಿಂದ ನಿಷೇಧಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ ಜಿಂಬಾಬ್ವೆಯ ಬ್ಲೆಸಿಂಗ್ ಮುಜರಬಾನಿ ಎರಡು ವರ್ಷಗಳ ನಿಷೇಧಕ್ಕೆ ಒಳಗಾದ ನಂತರ, ಶನಕ ಅವರು ಒಂದು ವರ್ಷದ ನಿಷೇಧ ಶಿಕ್ಷೆಗೆ ಒಳಗಾದರು. ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡದ ನಾಯಕರಾಗಿದ್ದ 34 ವರ್ಷದ ಶನಕ ಕಳೆದ ತಿಂಗಳು ಪಿಎಸ್‌ಎಲ್‌ನಿಂದ ಏಕಪಕ್ಷೀಯವಾಗಿ ಹಿಂದೆ ಸರಿದಿದ್ದಾರೆ ಎಂದು ಪಾಕಿಸ್ತಾನ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಋತುವಿನ ಐಪಿಎಲ್‌ನಲ್ಲಿ ರಾಜಸ್ಥಾನ ಪರ ಇನ್ನೂ ಕಾಣಿಸಿಕೊಳ್ಳದ ಶನಕ, ಪಿಎಸ್‌ಎಲ್‌ನಿಂದ ಹಿಂದೆ ಸರಿದ ನಿರ್ಧಾರಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಬೇರೆ ಯಾವುದೇ ಪಂದ್ಯಾವಳಿಗೆ ಸೇರುವ ಉದ್ದೇಶವಿರಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಭವಿಷ್ಯದಲ್ಲಿ ಅಭಿಮಾನಿಗಳ ನಂಬಿಕೆ ಮತ್ತು ಹೊಸ ಸಮರ್ಪಣೆಯೊಂದಿಗೆ ಪಿಎಸ್‌ಎಲ್‌ಗೆ ಮರಳುವ ಭರವಸೆ ನನಗಿದೆ" ಎಂದು ಶನಕ ಹೇಳಿದರು.
ಪಾಕಿಸ್ಥಾನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಶನಕ ಅವರನ್ನು ಲಾಹೋರ್ ಖಲಂದರ್ಸ್ ತಂಡ 75 ಲಕ್ಷಕ್ಕೆ ಆಯ್ಕೆ ಖರೀದಿ ಮಾಡಿತ್ತು. ಆದರೆ ಈಗ ಇಂಡಿಯನ್ ಪ್ರೀಮಿಯರ್ ಲೀಗ್‌ನ ಭಾಗವಾಗಲು ಪಾಕಿಸ್ತಾನಿ ಲೀಗ್‌ನಿಂದ ಹಿಂದೆ ಸರಿದರು. ತೊಡೆಸಂದು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಸ್ಯಾಮ್ ಕರನ್ ಬದಲಿಗೆ ಶನಕ ಇಂಡಿಯನ್ ಪ್ರೀಮಿಯರ್ ಲೀಗ್‌ನೊಂದಿಗೆ ಸಹಿ ಹಾಕಿದರು.
GT vs MI: ಬುಮ್ರಾ ವಿಕೆಟ್ ಬರಗಾಲ ನನ್ನ ಸಮಸ್ಯೆಯಲ್ಲ ಎಂದ ಹಾರ್ದಿಕ್ ಪಾಂಡ್ಯ
ಶನಕ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಏಳು ಪಂದ್ಯಗಳಲ್ಲಿ, 34 ವರ್ಷದ ಅವರು 187.50 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 165 ರನ್ ಗಳಿಸಿದ್ದರು. ಬೌಲಿಂಗ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಐಪಿಎಲ್‌ನಲ್ಲಿ ಕೇಲವ ಮೂರು ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ ಹಾಲಿ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು ಆಡಿದ 6 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 8 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ.