ಕೇಂದ್ರ ಸರ್ಕಾರ ಕೊಡದೆ ಇದ್ದರೂ ನಾವು ಕೊಡುತ್ತೇವೆ; ಬರಪರಿಹಾರ ಕುರಿತು ಆತಂಕ ಪಡಬೇಕಿಲ್ಲ ಎಂದ ಸಿಎಂ
ಬರಗಾಲ ಪೀಡಿತ ಜಿಲ್ಲೆಗಳಲ್ಲಿ 1 ಎಕರೆಗೆ 5 ಸಾವಿರ ಪರಿಹಾರ ನೀಡೋದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಘೋಷಣೆ ಮಾಡಿದ್ದರು. ಆದರೆ ಕೆಲವೆಡೆ ಪರಿಹಾರ ಮೊತ್ತದಲ್ಲಿ ವ್ಯತ್ಯಾಸವಾಗಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಈ ಕುರಿತು ಮಾತನಾಡಿದ್ದು, 'ರಾಜ್ಯದ ರೈತ ಬಾಂಧವರಿಗೆ ಬರ ಪರಿಹಾರದ ಕುರಿತು ಯಾವುದೇ ರೀತಿಯ ಗೊಂದಲ ಬೇಡ.
ಸಂಗ್ರಹ ಚಿತ್ರ -
ಬೆಂಗಳೂರು: ಬರಗಾಲ ಪೀಡಿತ ಜಿಲ್ಲೆಗಳಲ್ಲಿ 1 ಎಕರೆಗೆ 5 ಸಾವಿರ ಪರಿಹಾರ (Drought relief) ನೀಡೋದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (CM DK Shivakumar) ಅವರು ಘೋಷಣೆ ಮಾಡಿದ್ದರು. ಆದರೆ ಕೆಲವೆಡೆ ಪರಿಹಾರ ಮೊತ್ತದಲ್ಲಿ ವ್ಯತ್ಯಾಸವಾಗಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಈ ಕುರಿತು ಮಾತನಾಡಿದ್ದು, 'ರಾಜ್ಯದ ರೈತ ಬಾಂಧವರಿಗೆ ಬರ ಪರಿಹಾರದ ಕುರಿತು ಯಾವುದೇ ರೀತಿಯ ಗೊಂದಲ ಬೇಡ. ಪ್ರತಿಯೊಬ್ಬ ಅರ್ಹ ರೈತನಿಗೂ ನಮ್ಮ ಸರ್ಕಾರ ಎರಡು ಕಂತಿನಲ್ಲಿ 5,000 ರೂ. ಬಿಡುಗಡೆ ಮಾಡುತ್ತದೆ. ಮೊದಲನೆ ಕಂತಿನ ಹಣ ಈಗಾಗಲೇ ಅನೇಕ ರೈತರನ್ನು ತಲುಪಿದೆ. ಪ್ರತಿ ರೈತರಿಗೆ ಹಣ ತಲುಪಿಸಲು ಸೂತ್ರ ರಚಿಸಿದೆ' ಎಂದು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ 'ಪ್ರತಿ ರೈತರಿಗೂ ಒಂದು ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಲಾಗಿದೆ. ಸರಿಯಾದ ಖಾತೆಗಳಿಗೆ ಹಣ ತಲುಪಿದೆ. ಆದರೆ ಹಣ ತಲುಪದ ರೈತರ ಖಾತೆಯಲ್ಲಿ ಇರುವ ಅಡತಡೆ ನಿವಾರಿಸಿ ಪಾವತಿಸಲಾಗುವುದು. ಹೀಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ' ಎಂದು ಸ್ಪಷ್ಟನೆ ನೀಡಿದರು.
ಕೇಂದ್ರ ಸರ್ಕಾರ ಕೊಡದೆ ಇದ್ದರೂ ನುಡಿದಂತೆ ನಾವು ಕೊಡುತ್ತೇವೆ
'ಒಂದು ಪಕ್ಷ ರೈತರಿಗೆ ತಲುಪಬೇಕಾದ ಮೊತ್ತದಲ್ಲಿ ಹೆಚ್ಚು-ಕಮ್ಮಿಯಾಗಿದ್ದರೆ ಅದನ್ನು ಸರಿಪಡಿಸಲಾಗುವುದು. ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡದೇ ಇದ್ದರೂ ನಮ್ಮ ಸರ್ಕಾರ ರೈತರಿಗೆ ನುಡಿದಂತೆ ಎರಡು ಕಂತುಗಳಲ್ಲಿ 5 ಸಾವಿರ ರೂ. ಪರಿಹಾರ ಪಾವತಿ ಮಾಡುತ್ತದೆ' ಎಂದು ಭರವಸೆ ನೀಡಿದರು. ಒಂದೇ ಬಟನ್ ಮೂಲಕ ಎಲ್ಲಾ ರೈತರ ಖಾತೆಗೂ ಹಣ ವರ್ಗಾವಣೆಯಾಗುತ್ತಿದೆ. ಆದರೆ ಕೆಲವು ಬ್ಯಾಂಕ್ ಖಾತೆಗಳು ಸರಿಯಯಾಗಿಲ್ಲ ಹಾಗೂ ಸಾಲದ ಬಾಬತ್ತಿಗೆ ಲಿಂಕ್ ಆಗಿದೆ. ಎಲ್ಲದರ ದಾಖಲೆಗಳನ್ನು ಪರಿಶೀಲಿಸಿ ಪರಿಹಾರ ಮೊತ್ತ ಶೀಘ್ರ ಪಾವತಿಸಲಾಗುವುದು' ಎಂದು ಸಿಎಂ ತಿಳಿಸಿದ್ದಾರೆ.