ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಟಾಕಿ ಸಿಡಿಸುವಿಕೆಯಿಂದ ಕಣ್ಣಿನ ಗಾಯ: 12 ಪ್ರಕರಣಗಳಿಗೆ ಚಿಕಿತ್ಸೆ, ಆರು ರೋಗಿಗಳು ಅಪ್ರಾಪ್ತರು

ನೇತ್ರಧಾಮ ಆಸ್ಪತ್ರೆಯಲ್ಲಿ ಪಟಾಕಿ ಸಿಡಿಸುವಿಕೆಯಿಂದ ಉಂಟಾದ ಕಣ್ಣಿನ ಗಾಯ ಗಳಿಗೆ ಸಂಬಂಧಿಸಿ ಒಟ್ಟು 12 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಈ ಪೈಕಿ 8 ಪ್ರಕರಣಗಳು ಮಂಗಳವಾರ ವರದಿಯಾಗಿವೆ. 12 ಪ್ರಕರಣಗಳಲ್ಲಿ ಆರು ರೋಗಿಗಳು ಅಪ್ರಾಪ್ತ ವಯಸ್ಕರಾಗಿದ್ದು, ಅವರಲ್ಲಿ ಐದು ವರ್ಷದ ಬಾಲಕಿ ಅತ್ಯಂತ ಕಡಿಮೆ ವಯಸ್ಸಿನವರಾಗಿದ್ದಾರೆ.

ಪಟಾಕಿ ಸಿಡಿಸುವಿಕೆಯಿಂದ ಕಣ್ಣಿನ ಗಾಯ: ಆರು ರೋಗಿಗಳು ಅಪ್ರಾಪ್ತರು

-

Profile
Ashok Nayak Nov 11, 2026 6:47 PM

ಬೆಂಗಳೂರು: ನೇತ್ರಧಾಮ ಆಸ್ಪತ್ರೆಯಲ್ಲಿ ಪಟಾಕಿ ಸಿಡಿಸುವಿಕೆಯಿಂದ ಉಂಟಾದ ಕಣ್ಣಿನ ಗಾಯ ಗಳಿಗೆ ಸಂಬಂಧಿಸಿ ಒಟ್ಟು 12 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಈ ಪೈಕಿ 8 ಪ್ರಕರಣಗಳು ಮಂಗಳವಾರ ವರದಿಯಾಗಿವೆ. 12 ಪ್ರಕರಣಗಳಲ್ಲಿ ಆರು ರೋಗಿಗಳು ಅಪ್ರಾಪ್ತ ವಯಸ್ಕರಾಗಿದ್ದು, ಅವರಲ್ಲಿ ಐದು ವರ್ಷದ ಬಾಲಕಿ ಅತ್ಯಂತ ಕಡಿಮೆ ವಯಸ್ಸಿನವರಾಗಿದ್ದಾರೆ.

ವಾರಾಂತ್ಯದಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡ ಒಂಬತ್ತು ವರ್ಷದ ಬಾಲಕನಿಗೆ ನೇತ್ರಧಾಮ ದಲ್ಲಿ ತುರ್ತು ಚಿಕಿತ್ಸೆ ನೀಡಲಾಗಿದೆ. ಉದ್ಯಾನವನದಲ್ಲಿ ನಿಂತಿದ್ದಾಗ ಸಮೀಪದಲ್ಲೇ ಪಟಾಕಿ ಸಿಡಿದ ಪರಿಣಾಮ ಬಾಲಕನ ಬಲಗಣ್ಣಿಗೆ ಗಂಭೀರ ಗಾಯವಾಗಿತ್ತು.

ಘಟನೆ ನಡೆದ ಕೇವಲ 10–15 ನಿಮಿಷಗಳಲ್ಲಿ ಆತನನ್ನು ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಗೆ, ಇಂದಿರಾನಗರ ಶಾಖೆಗೆ ಕರೆತರಲಾಯಿತು. ಆಸ್ಪತ್ರೆಗೆ ಬಂದಾಗ ಆತನ ದೃಷ್ಟಿ ತೀವ್ರವಾಗಿ ಕುಂಠಿತಗೊಂಡಿದ್ದು, ಕೈಗಳ ಚಲನವಲನವನ್ನು ಮಾತ್ರ ಗುರುತಿಸುವ ಸ್ಥಿತಿಯಲ್ಲಿದ್ದನು. ಪರೀಕ್ಷಿಸಿ ದಾಗ ಕಣ್ಣಿನ ಒಳಭಾಗದಲ್ಲಿ ರಕ್ತಸ್ರಾವ (ಹೈಫೀಮಾ) ಹಾಗೂ ಕಣ್ಣಿನ ಒಳ ಒತ್ತಡ ಹೆಚ್ಚಾಗಿರುವುದು ಕಂಡುಬಂದಿತು.

ಇದನ್ನೂ ಓದಿ: Factory caught fire: ಮಸ್ತೇನಹಳ್ಳಿಯ ಗರುಡ ಮಾರ್ಟ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ರೂ. ನಷ್ಟ

“ನಾವು ತಕ್ಷಣವೇ ರಕ್ತಸ್ರಾವ ನಿಯಂತ್ರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಚಿಕಿತ್ಸೆಯನ್ನು ಪ್ರಾರಂಭಿಸಿದೆವು. ಈ ಪ್ರಕರಣದಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಅತ್ಯಂತ ನಿರ್ಣಾಯಕವಾಗಿತ್ತು. ಚಿಕಿತ್ಸೆ ವಿಳಂಬವಾಗಿದ್ದರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವ ಅಪಾಯವಿತ್ತು. ಪ್ರಸ್ತುತ ಬಾಲಕನ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದ್ದು, ಮುಂದಿನ ಚಿಕಿತ್ಸೆಯನ್ನು ಮುಂದುವರಿಸಲು ಸಲಹೆ ನೀಡಲಾಗಿದೆ” ಎಂದು ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಕಣ್ಣಿನ ಪೊರೆ ಮತ್ತು ಗ್ಲಾಕೋಮಾ ತಜ್ಞ ಶಸ್ತ್ರಚಿಕಿತ್ಸಕರಾದ ಡಾ. ರಕ್ಷಾ ಜಗದೀಶಪ್ರಸಾದ್ ವೈಷ್ಣವ್ ತಿಳಿಸಿದ್ದಾರೆ.

“ಈ ಘಟನೆ ಪಟಾಕಿ ಸಂಬಂಧಿತ ಕಣ್ಣಿನ ಗಾಯಗಳು ಪಟಾಕಿ ಸಿಡಿಸುವವರಿಗಷ್ಟೇ ಅಲ್ಲದೆ, ಸಮೀಪದಲ್ಲಿರುವವರಿಗೂ ಸಂಭವಿಸಬಹುದು ಎಂಬುದನ್ನು ನೆನಪಿಸುತ್ತದೆ. ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಪಟಾಕಿಗಳನ್ನು ಜವಾಬ್ದಾರಿಯುತವಾಗಿ ಬಳಸುವುದು, ಮಕ್ಕಳ ಮೇಲೆ ಸೂಕ್ತ ನಿಗಾ ವಹಿಸುವುದು, ಅವರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸಿಕೊಡುವುದು ಹಾಗೂ ಸಾಧ್ಯವಾದಷ್ಟು ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸುವುದು ಅತ್ಯಂತ ಮುಖ್ಯ. ಪಟಾಕಿ ಸಿಡಿತದಿಂದ ಕಣ್ಣಿಗೆ ಯಾವುದೇ ಗಾಯವಾದಲ್ಲಿ ತಕ್ಷಣವೇ ವೈದ್ಯಕೀಯ ನೆರವು ಪಡೆಯುವಂತೆ ನಾವು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇವೆ. ಏಕೆಂದರೆ, ಸಮಯೋಚಿತ ಚಿಕಿತ್ಸೆಯು ಚಿಕಿತ್ಸೆಯ ಫಲಿತಾಂಶದಲ್ಲಿ ಮಹತ್ವದ ಬದಲಾವಣೆ ತರಬಲ್ಲದು” ಎಂದು ಡಾ. ರಕ್ಷಾ ಅವರು ಮತ್ತಷ್ಟು ತಿಳಿಸಿದ್ದಾರೆ.