ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Senior Actor Dr Srinath: ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ಅತ್ಯಂತ ಅಗತ್ಯ: ನಟ ಶ್ರೀನಾಥ್

ಎಪಿಎಸ್ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೆ ಸದಾ ಬೆಂಬಲವಾಗಿ ನಿಂತಿತ್ತು. ಇದರ ಪರಿಣಾಮ ಸೂಪರ್ ಸ್ಟಾರ್ ರಜನಿಕಾಂತ್, ಉಪೇಂದ್ರ, ಕಲ್ಯಾಣ್ ಕುಮಾರ್, ಟೆನಿಸ್ ಕೃಷ್ಣ, ಸಿ. ಅಶ್ವತ್ಥ್ ಸೇರಿದಂತೆ ಇನ್ನೂ ಅನೇಕ ಪ್ರತಿಭೆಗಳು ಬೆಳಗಲು ಸಾಧ್ಯ ವಾಯಿತು. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಅತ್ಯಂತ ಅಗತ್ಯ ಎಂದರು.

ಎಪಿಎಸ್ ಪಿಯು ಕಾಲೇಜು ನಲ್ಲಿ ಪ್ರತಿಭಾ ದಿನಾಚರಣೆ

-

Profile
Ashok Nayak Sep 2, 2026 9:17 PM

ಬೆಂಗಳೂರು: ಎಪಿಎಸ್ ಪಿಯು ಕಾಲೇಜು ಆಫ್ ಆರ್ಟ್ಸ್, ಸೈನ್ಸ್ ಅಂಡ್ ಕಾಮರ್ಸ್ನ ಜ್ಞಾನ ದೇಗುಲ ಕ್ಯಾಂಪಸ್ ನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಹಿರಿಯ ನಟ ಹಾಗೂ ಎಪಿಎಸ್ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿ ಪ್ರಣಯರಾಜ ಡಾ.ಶ್ರೀನಾಥ್(Senior Actor Dr Srinath) ಪ್ರತಿಭಾ ದಿನಾಚರಣೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಇದನ್ನೂ ಓದಿ: Film Actor Srinath: ವೆಂಕಟ್ ಸೆಂಟರ್ ಫಾರ್ ಏಸ್ಥೆಟಿಕ್ ಹೆಲ್ತ್‌ʼನಲ್ಲಿ ಆಧುನಿಕ ದೇಹ ಪರಿವರ್ತನಾ ಮತ್ತು ಸೌಂದರ್ಯ ವರ್ಧಕ ಕೇಂದ್ರ ಪ್ರಾರಂಭ

ನಂತರ ಮಾತನಾಡಿ, ಎಪಿಎಸ್ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೆ ಸದಾ ಬೆಂಬಲವಾಗಿ ನಿಂತಿತ್ತು. ಇದರ ಪರಿಣಾಮ ಸೂಪರ್ ಸ್ಟಾರ್ ರಜನಿಕಾಂತ್, ಉಪೇಂದ್ರ, ಕಲ್ಯಾಣ್ ಕುಮಾರ್, ಟೆನಿಸ್ ಕೃಷ್ಣ, ಸಿ. ಅಶ್ವತ್ಥ್ ಸೇರಿದಂತೆ ಇನ್ನೂ ಅನೇಕ ಪ್ರತಿಭೆಗಳು ಬೆಳಗಲು ಸಾಧ್ಯ ವಾಯಿತು. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಅತ್ಯಂತ ಅಗತ್ಯ ಎಂದರು.

Srinath 2

ಸಂಸ್ಥೆಯ ಅಧ್ಯಕ್ಷರಾದ ಸಿಎ ಡಾ. ವಿಷ್ಣು ಭರತ್ ಆಲಂಪಲ್ಲಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಯೂ ತನ್ನ ಸಾಮರ್ಥ್ಯವನ್ನು ಗುರುತಿಸಿಕೊಂಡು, ತನ್ನಲ್ಲಿರುವ ಪ್ರತಿಭೆಯನ್ನು ಬೆಳೆಸಿಕೊಂಡು, ಜವಾಬ್ದಾರಿಯುತ ನಾಗರಿಕನಾಗಿ ಹಾಗೂ ದೇಶದ ಆಸ್ತಿಯಾಗಿ ರೂಪುಗೊಳ್ಳಲು ಅತ್ಯುತ್ತಮ ಪ್ರಯತ್ನ ಮಾಡಬೇಕು. ಆತ್ಮವಿಶ್ವಾಸದಿಂದ ಶಿಸ್ತು ಮೈಗೂಡಿಸಿಕೊಂಡು ಉತ್ತಮ ಚಾರಿತ್ರ್ಯ ಹೊಂದ ಬೇಕು ಎಂದರು.

Srinath 3

ಕಾಲೇಜಿನ ಅಧ್ಯಕ್ಷರಾದ ಟಿ.ವಿ. ಪ್ರಭು, ಪ್ರಧಾನ ಕಾರ್ಯದರ್ಶಿ ಎ.ಪ್ರಕಾಶ್ ಹಾಗೂ ಪ್ರಾಂಶುಪಾಲ ರಾದ ನಾಗರಾಜ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.