ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru Traffic Alert: ಬೆಂಗಳೂರಿನ ಈ ಫ್ಲೈಓವರ್‌ಗಳ ಮೇಲೆ ಇಂದಿನಿಂದಲೇ ದ್ವಿಚಕ್ರ ವಾಹನ, ಆಟೋಗಳ ಸಂಚಾರಕ್ಕೆ ನಿರ್ಬಂಧ!

Vehicle Restrictions on flyovers in Bengaluru: ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರ ಪೊಲೀಸ್ ವಿಭಾಗದೊಂದಿಗೆ ಕೈಗೊಂಡಿರುವ ಈ ಉಪಕ್ರಮವು ಸಿ.ಸಿ.ಟಿ.ವಿ. ಕಣ್ಣಾವಲಿನಲ್ಲಿ ಇರಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸ್‌ ವಿಭಾಗ ಕೋರಿದೆ.

ಇಂದಿನಿಂದ ಈ ಫ್ಲೈಓವರ್‌ಗಳ ಮೇಲೆ ಬೈಕ್, ಆಟೋಗಳ ಸಂಚಾರಕ್ಕೆ ನಿರ್ಬಂಧ!

ಬೆಂಗಳೂರಿನ ರಾಗಿಗುಡ್ಡ ಡಬಲ್‌ ಡೆಕ್ಕರ್‌ ಫ್ಲೈಓವರ್‌. -

Prabhakara R
Prabhakara R Sep 4, 2026 4:08 PM

ಬೆಂಗಳೂರು: ಸಾರ್ವಜನಿಕರ ಸುಗಮ ಸಂಚಾರ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಸಂಚಾರ ಪೊಲೀಸ್‌ ವಿಭಾಗದಿಂದ ಇಂದಿನಿಂದ (ಸೆ.4) ಜಾರಿಗೆ ಬರುವಂತೆ ನಗರದ ಪ್ರಮುಖ ಫ್ಲೈಓವರ್‌ಗಳ ಮೇಲೆ ದ್ವಿಚಕ್ರ ವಾಹನ ಹಾಗೂ ಗೂಡ್ಸ್‌ ವಾಹನಗಳಿಗೆ ನಿರ್ಬಂಧ (Bengaluru Traffic Alert) ವಿಧಿಸಲಾಗಿದೆ. ಯಾವ ಮೇಲ್ಸೇತುವೆ ಮೇಲೆ ಯಾವ ವಾಹನಗಳಿಗೆ ನಿಷೇಧವಿದೆ ಎಂಬ ಮಾಹಿತಿ ಇಲ್ಲಿದೆ.

1.ಬಿಜಿಎಸ್ ಫ್ಲೈಓವರ್, ಮೈಸೂರು ರಸ್ತೆ:

  • ದಿನದ 24 ಗಂಟೆ ಭಾರಿ ಸರಕು ಸಾಗಾಣಿಕೆ ವಾಹನಗಳಿಗೆ ನಿರ್ಬಂಧ.
  • ಬೆಳಗ್ಗೆ 7ರಿಂದ 11 ಗಂಟೆ ಹಾಗೂ ಸಂಜೆ 4ರಿಂದ ರಾತ್ರಿ 10ಗಂಟೆವರೆಗೆ ಮೂರು ಚಕ್ರದ ಗೂಡ್ಸ್ ಆಟೋ ಸೇರಿ ಎಲ್ಲಾ ಸರಕು ಸಾಗಣೆ ವಾಹನಗಳಿಗೆ ನಿರ್ಬಂಧ.

2.ಪೀಣ್ಯ ಎಲಿವೇಟೆಡ್ ಕಾರಿಡಾರ್:

  • ದಿನದ 24 ಗಂಟೆ ಪ್ರಯಾಣಿಕರ ಆಟೋರಿಕ್ಷಾ ಹಾಗೂ ತ್ರಿಚಕ್ರ ಗೂಡ್ಸ್ ಆಟೋಗಳಿಗೆ ನಿರ್ಬಂಧ.
  • ಬೆಳಗ್ಗೆ 7 ರಿಂದ 11 ಗಂಟೆ ಹಾಗೂ ಸಂಜೆ 4ರಿಂದ 10 ಗಂಟೆಯವರೆಗೆ ಭಾರಿ ಮತ್ತು ಮಧ್ಯಮ ಸರಕು ಸಾಗಣೆ ವಾಹನಳಿಗೆ ನಿರ್ಬಂಧ.

3.ಡಬಲ್ ಡೆಕ್ಕರ್ ಫ್ಲೈಓವರ್ (ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗೆ):

  • ದಿನದ 24 ಗಂಟೆ ಭಾರಿ ಸರಕು ಸಾಗಾಣಿಕೆ ವಾಹನಗಳು

4.ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್:

(ಸಂಜೀವ ನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್‌ನ್‌ವರೆಗೆ)

  • ದಿನದ 24 ಗಂಟೆ ದ್ವಿಚಕ್ರವಾಹನ, ಆಟೋರಿಕ್ಷಾಗಳಿಗೆ ನಿರ್ಬಂಧ.
  • ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಎಲ್ಲಾ ವಿಧದ ಸರಕು ಸಾಗಾಣಿಕೆ ವಾಹನಗಳಿಗೆ ನಿರ್ಬಂಧ

5.ಎಲೆಕ್ಟ್ರಾನಿಕ್‌ ಸಿಟಿ ಎಲಿವೇಟೆಡ್ ಕಾರಿಡಾರ್ (ಸೆ.11ರಿಂದ ಜಾರಿ)

  • ದಿನದ 24 ಗಂಟೆ ದ್ವಿಚಕ್ರವಾಹನ, ಪ್ರಯಾಣಿಕರ ಆಟೋರಿಕ್ಷಾ ಹಾಗೂ ತ್ರಿಚಕ್ರ ಗೂಡ್ಸ್ ಆಟೋಗಳಿಗೆ ನಿರ್ಬಂಧ.
  • ಇನ್ನು ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಎಲ್ಲಾ ಮಾದರಿಯ ಸರಕು ಸಾಗಾಣಿಕೆ ವಾಹನಗಳಿಗೆ (ಭಾರಿ, ಮದ್ಯಮ ಹಾಗೂ ಲಘು ಸರಕು ಸಾಗಾಣಿಕೆ ವಾಹನಗಳು) ನಿರ್ಬಂಧ.

ಬಿಜಿಎಸ್ ಫ್ಲೈಓವರ್, ಪೀಣ್ಯ ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್ ಫ್ಲೈಓವರ್, ವಿಮಾನ ನಿಲ್ದಾಣ ರಸ್ತೆ ಸೇರಿ ನಾಲ್ಕು ಫ್ಲೈಓವರ್‌ಗಳಿಗೆ ಸಂಬಂಧಿಸಿದ ನಿರ್ಬಂಧಗಳು ಇಂದಿನಿಂಲೇ ಜಾರಿಯಾಗಲಿದ್ದು, ಎಲೆಕ್ಟ್ರಾನಿಕ್‌ ಸಿಟಿ ಎಲಿವೇಟೆಡ್ ಕಾರಿಡಾರ್ ನಿರ್ಬಂಧಗಳು ಸೆ.11ರಿಂದ ಜಾರಿಯಾಗಲಿವೆ.

ಉದ್ಯಾನಗಳ ಶೇ.5 ಜಾಗ ಅನ್ಯ ಉದ್ದೇಶಕೆ ಬಳಸಲು ವಿರೋಧ: ವಿಧೇಯಕ ಹಿಂಪಡೆಯಲು ನಿರ್ಧಾರ, ಶೀಘ್ರ ತಿದ್ದುಪಡಿ ಮಂಡನೆ

ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರ ಪೊಲೀಸ್ ವಿಭಾಗದೊಂದಿಗೆ ಕೈಗೊಂಡಿರುವ ಈ ಉಪಕ್ರಮವು ಸಿ.ಸಿ.ಟಿ.ವಿ. ಕಣ್ಣಾವಲಿನಲ್ಲಿ ಇರಲಿದ್ದು, ಸಾರ್ವಜನಿಕರು ಈ ಉಪಕ್ರಮಕ್ಕೆ ಕೈಜೋಡಿಸಿ, ತಮ್ಮ ಸಹಕಾರವನ್ನು ಒದಗಿಸಲು ಬೆಂಗಳೂರು ಸಂಚಾರ ಪೊಲೀಸ್‌ ವಿಭಾಗ ಕೋರಿದೆ.