ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru Parking Rules 2026: ಬೆಂಗಳೂರಿನ ವಾಹನ ಸವಾರರಿಗೆ ಜಿಬಿಎ ಶಾಕ್; ಮನೆ ಮುಂದೆ ಗಾಡಿ ನಿಲ್ಲಿಸೋದಕ್ಕೂ ಕಟ್ಟಬೇಕು ಪಾರ್ಕಿಂಗ್‌ ಫೀಸ್‌!

Parking fees in Bengaluru: ಬೆಂಗಳೂರಿನ ವಸತಿ ಪ್ರದೇಶಗಳಲ್ಲಿ ಪಾರ್ಕಿಂಗ್ ಪರ್ಮಿಟ್ ಪಡೆಯಲು ಕಾರಿನ ಮಾದರಿಯನ್ನು ಆಧರಿಸಿ ವರ್ಷಕ್ಕೆ 15,000 ದಿಂದ 25,000 ರೂ.ವರೆಗೆ ವೆಚ್ಚವಾಗಬಹುದು. ರಸ್ತೆ ಬದಿಯ ಪಾರ್ಕಿಂಗ್‌ಗೆ ಹೋಲಿಸಿದರೆ ಆಫ್-ಸ್ಟ್ರೀಟ್ (ನಿಗದಿತ ಪಾರ್ಕಿಂಗ್ ಸಂಕೀರ್ಣ/ಸ್ಥಳಗಳು) ಪಾರ್ಕಿಂಗ್‌ ದರಗಳು ಅಗ್ಗವಾಗಿರಲಿವೆ.

ಇನ್ಮುಂದೆ ಮನೆ ಮುಂದೆ ಗಾಡಿ ನಿಲ್ಲಿಸೋದಕ್ಕೂ ಕಟ್ಟಬೇಕು ಪಾರ್ಕಿಂಗ್‌ ಫೀಸ್‌!

ಸಾಂದರ್ಭಿಕ ಚಿತ್ರ. -

Prabhakara R
Prabhakara R Aug 13, 2026 5:54 PM

ಬೆಂಗಳೂರು: ರಾಜಧಾನಿಯ ನಿವಾಸಿಗಳು ಇನ್ಮುಂದೆ ತಮ್ಮ ವಾಹನಗಳನ್ನು ವಸತಿ ಹಾಗೂ ವಸತಿಯೇತರ ಪ್ರದೇಶದ ರಸ್ತೆಗಳಲ್ಲಿ ಪಾರ್ಕ್ ಮಾಡಲು (parking fees) ಭಾರಿ ಮೊತ್ತದ ಹಣ ತೆರಬೇಕಾಗಬಹುದು. ಈ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊಸ ಪಾರ್ಕಿಂಗ್ ನೀತಿ (Bengaluru Parking Rules 2026) ಜಾರಿಗಾಗಿ ಕರಡು ಅಧಿಸೂಚನೆ ಪ್ರಕಟಿಸಿದೆ.

ಪ್ರಸ್ತಾವಿತ ಬೃಹತ್ ಬೆಂಗಳೂರು ಪ್ರದೇಶ (ಪಾರ್ಕಿಂಗ್) ನಿಯಮಗಳು, 2026 ರ ಪ್ರಕಾರ, ವಸತಿ ಪ್ರದೇಶಗಳಲ್ಲಿ ಪಾರ್ಕಿಂಗ್ ಪರ್ಮಿಟ್ ಪಡೆಯಲು ಕಾರಿನ ಮಾದರಿಯನ್ನು ಆಧರಿಸಿ ವರ್ಷಕ್ಕೆ 15,000 ದಿಂದ 25,000 ರೂ.ವರೆಗೆ ವೆಚ್ಚವಾಗಬಹುದು. ರಸ್ತೆ ಬದಿಯ ಪಾರ್ಕಿಂಗ್‌ಗೆ ಹೋಲಿಸಿದರೆ ಆಫ್-ಸ್ಟ್ರೀಟ್ (ನಿಗದಿತ ಪಾರ್ಕಿಂಗ್ ಸಂಕೀರ್ಣಗಳು/ಸ್ಥಳಗಳು) ಪಾರ್ಕಿಂಗ್‌ ದರಗಳು ಅಗ್ಗವಾಗಿರಲಿವೆ.

ಇನ್ನು ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಆಫ್-ಸ್ಟ್ರೀಟ್ ಪಾರ್ಕಿಂಗ್ ಮಾಡುವವರಿಗೆ ಮಾಸಿಕ ದರದಲ್ಲಿ 50% ರಿಯಾಯಿತಿ ಸಿಗಲಿದೆ. ಯಾವ ವಾಹನಗಳಿಗೆ ಎಷ್ಟು ಪಾರ್ಕಿಂಗ್ ಶುಲ್ಕ ವಿಧಿಸಬೇಕು ಎಂಬುದರ ಕುರಿತು ಕರಡು ಅಧಿಸೂಚನೆಯಲ್ಲಿ ವಿವರಿಸಲಾಗಿದ್ದು, ಈ ಕುರಿತ ಮಾಹಿತಿ ಇಲ್ಲಿದೆ.

ಆನ್ ಸ್ಟ್ರೀಟ್ ಪಾರ್ಕಿಂಗ್ ದರ ಎಷ್ಟು?
(ಪ್ರತಿ ಗಂಟೆಗೆ ಶುಲ್ಕ)

ಸಿ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 20 ರೂ., ಲಘುವಾಹನ– 60-40 ರೂ.
ಬಿ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 30 ರೂ., ಲಘುವಾಹನ – 60 ರೂ.
ಎ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 40 ರೂ., ಲಘುವಾಹನ – 80 ರೂ.

ಆಫ್ ಸ್ಟ್ರೀಟ್ ಪಾರ್ಕಿಂಗ್ ದರ ಎಷ್ಟು ?

ಸಿ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 10 ರೂ., ಲಘುವಾಹನ – 20 ರೂ.
ಬಿ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 15 ರೂ., ಲಘುವಾಹನ– 30 ರೂ.
ಎ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 20 ರೂ., ಲಘುವಾಹನ– 40 ರೂ.

ಮಾಸಿಕ ಆಫ್ ಸ್ಟ್ರೀಟ್ ಪಾರ್ಕಿಂಗ್ ದರ ಎಷ್ಟು ? (ಮಾಸಿಕ ಪಾಸ್)

ಸಿ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 1,000 ರೂ., ಲಘುವಾಹನ 2000 ರೂ.
ಬಿ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 1,500 ರೂ., ಲಘುವಾಹನ – 3,000 ರೂ.
ಎ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 2,000 ರೂ., ಲಘುವಾಹನ – 4,000 ರೂ.

ದೀರ್ಘಾವಧಿ ಪಾರ್ಕಿಂಗ್‌ಗೆ ನಿರ್ಬಂಧ:

ರಸ್ತೆಗಳಲ್ಲಿ ದೀರ್ಘಕಾಲ ವಾಹನಗಳನ್ನು ನಿಲ್ಲಿಸುವುದನ್ನು ತಡೆಯಲು, 2 ಗಂಟೆಗಿಂತ ಹೆಚ್ಚು ಸಮಯ ಪಾರ್ಕ್ ಮಾಡಿದರೆ ಶುಲ್ಕವನ್ನು ಹೆಚ್ಚಿಸಲಾಗುತ್ತದೆ. ಪಾರ್ಕಿಂಗ್‌ ಶುಲ್ಕದ ಕುರಿತು ನಗರಾಭಿವೃದ್ಧಿ ಇಲಾಖೆಯು ಆಗಸ್ಟ್ 11 ರಂದು ಈ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಗೆಜೆಟ್‌ನಲ್ಲಿ ಪ್ರಕಟಗೊಂಡ 30 ದಿನಗಳ ಒಳಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

Gutkha, Pan masala Ban: ಗುಟ್ಕಾ ನಿಷೇಧದಿಂದ ರಾಜ್ಯದ ಅಡಿಕೆ ಬೆಳೆಗಾರರಿಗೆ ತೀವ್ರ ಸಂಕಷ್ಟ; ಆದೇಶ ಹಿಂಪಡೆಯಲು ಶಾಸಕ ಆರಗ ಜ್ಞಾನೇಂದ್ರ ಆಗ್ರಹ

ಬೆಂಗಳೂರಿನ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತರುವುದು, ಸಾರ್ವಜನಿಕ ಜಾಗ ಬಳಕೆಗೆ ಶುಲ್ಕ ವಿಧಿಸುವ ಹಾಗೂ ಜನರನ್ನು ಸುಸಜ್ಜಿತ ಆಫ್-ಸ್ಟ್ರೀಟ್ ಪಾರ್ಕಿಂಗ್ ಸಂಕೀರ್ಣಗಳನ್ನು ಬಳಸುವಂತೆ ಉತ್ತೇಜಿಸುವುದು ಈ ಹೊಸ ಪಾರ್ಕಿಂಗ್‌ ನೀತಿಯ ಉದ್ದೇಶವಾಗಿದೆ.