ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗದ್ದಲದಲ್ಲೇ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ತೆರೆ; 19 ಮಸೂದೆಗಳಿಗೆ ಅಂಗೀಕಾರ

Monsoon Session comes to a close: ಸಂಸತ್ತಿನ 25 ದಿನಗಳ ಮಳೆಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ವಿಪಕ್ಷಗಳ ಗದ್ದಲದ ನಡುವೆ ಲೋಕಸಭೆಯಲ್ಲಿ ಒಂದೇ ಒಂದು ದಿನವೂ ಪ್ರಶ್ನೋತ್ತರ ವೇಳೆಯನ್ನು ಸಂಪೂರ್ಣವಾಗಿ ನಡೆಸಲು ಸಾಧ್ಯವಾಗಲಿಲ್ಲ. ರಾಜ್ಯಸಭೆಯನ್ನು ಸಹ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಗದ್ದಲದಲ್ಲೇ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನ

ಸಾಂದರ್ಭಿಕ ಚಿತ್ರ -

Priyanka P
Priyanka P Aug 13, 2026 6:54 PM

ನವದೆಹಲಿ, ಆ. 13: ಸಂಸತ್ತಿನ 25 ದಿನಗಳ ಮಳೆಗಾಲದ ಅಧಿವೇಶನ (Parliament's Monsoon Session) ಗದ್ದಲದಲ್ಲಿ ಕೊನೆಗೊಂಡಿತು. ಎರಡೂ ಸದನಗಳಲ್ಲಿ ವಿಪಕ್ಷಗಳು ಪ್ರತಿದಿನವೂ ಕಲಾಪಕ್ಕೆ ಅಡ್ಡಿಪಡಿಸಿದ ನಂತರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಲೋಕಸಭೆಯಲ್ಲಿ ಒಂದೇ ಒಂದು ದಿನವೂ ಪ್ರಶ್ನೋತ್ತರ ವೇಳೆಯನ್ನು ಸಂಪೂರ್ಣವಾಗಿ ನಡೆಸಲು ಸಾಧ್ಯವಾಗಲಿಲ್ಲ. ಅದಾಗ್ಯೂ 19 ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ.

ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾಯಿತು. ಬಳಿಕ ವಿರೋಧ ಪಕ್ಷವು ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಈ ಬಗ್ಗೆ ವಿವರಣೆ ನೀಡಬೇಕೆಂದು ಕೋರಿತ್ತು. ಜತೆಗೆ ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ದೇಣಿಗೆ ಕಳವು ಪ್ರಕರಣವನ್ನು ಮುಂದಿಟ್ಟು ವಿಪಕ್ಷ ನಾಯಕರು ಗದ್ದಲ ಎಬ್ಬಿಸಿದರು.

ಗುರುವಾರ (ಆಗಸ್ಟ್‌ 13) ಸಭೆ ಸೇರಿದ ಕೂಡಲೇ ಲೋಕಸಭೆಯಲ್ಲಿ ರಾಷ್ಟ್ರೀಯ ಗೀತೆ ʼವಂದೇ ಮಾತರಂʼನ ಎಲ್ಲ ಆರು ಚರಣಗಳನ್ನು ಹಾಡಲಾಯಿತು. ಸಾಮಾನ್ಯವಾಗಿ ಅಧಿವೇಶನದ ಕೊನೆಯ ದಿನ ಪ್ರಧಾನಿ ಸಮಾರೋಪ ಭಾಷಣ ನಡೆಸುವುದು ವಾಡಿಕೆ. ಆದರೆ ಈ ಬಾರಿ ಮಾರೋಪ ಭಾಷಣ ನಡೆಯಲಿಲ್ಲ. ಸಭೆಯನ್ನು ಕಾಂಗ್ರೆಸ್, ಸಮಾಜವಾದಿ ಪಕ್ಷ (SP) ಮತ್ತು ತೃಣಮೂಲ ಕಾಂಗ್ರೆಸ್ (TMC) ಬಹಿಷ್ಕರಿಸಿದವು.

ರಾಜ್ಯಸಭೆಯನ್ನು ಸಹ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಇದರಿಂದಾಗಿ ಅಧಿವೇಶನ ಕೊನೆಗೊಂಡಿತು. ಕಲಾಪಕ್ಕೆ ಪದೇ ಪದೆ ಅಡ್ಡಿಯಾಗಿದ್ದರಿಂದ ಸದನದ ಕಾರ್ಯಕಲಾಪಗಳು ಹಳಿ ತಪ್ಪಿದೆ ಎಂದು ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ತೀವ್ರ ಕಳವಳ ವ್ಯಕ್ತಪಡಿಸಿದರು. ಒಟ್ಟಾರೆಯಾಗಿ, ಲೋಕಸಭೆ 17.5 ಗಂಟೆಗಳ ಕಾಲ ಕಾರ್ಯನಿರ್ವಹಿಸಿದರೆ, ರಾಜ್ಯಸಭೆ 37.4 ಗಂಟೆಗಳ ಕಾಲ ಕಾರ್ಯನಿರ್ವಹಿಸಿತು.

ಅಧಿವೇಶನದಲ್ಲಿ ಪ್ರತಿಧ್ವನಿಸಿದ ಜಂತರ್-ಮಂತರ್ ಗದ್ದಲ

ಕಳೆದ ತಿಂಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದಬ್ಬಾಳಿಕೆಗೆ ಸಂಬಂಧಿಸಿದಂತೆ ಅಮಿತ್‌ ಶಾ ಅವರ ಹೇಳಿಕೆ ಮತ್ತು ಚರ್ಚೆಗೆ ಆಗ್ರಹಿಸಿ ವಿಪಕ್ಷಗಳು ಮತ್ತು ಕೇಂದ್ರದ ನಡುವೆ ವಾಗ್ವಾದ ನಡೆಯಿತು.

ಅಧಿವೇಶನದ ಕೊನೆಯ ದಿನದ ಹಿಂದಿನ ದಿನವಾದ ಬುದವಾರ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಮಾಡಿದ ಪ್ರಯತ್ನ ವಿಫಲವಾಯಿತು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ಇತರ ವಿಷಯಗಳ ಕುರಿತು ಎರಡು ದಿನಗಳ ಚರ್ಚೆ ನಡೆಸಿ, ಬಳಿಕ ಗೃಹ ಸಚಿವ ಅಮಿತ್ ಶಾ ಉತ್ತರ ನೀಡುವ ಪ್ರಸ್ತಾವನೆಯನ್ನು ವಿಪಕ್ಷಗಳು ತಿರಸ್ಕರಿಸಿದವು.

ಆ.13ರಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ ಆರಂಭ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

“ಕೇಂದ್ರ ಸರ್ಕಾರ ಚರ್ಚೆಗೆ ಸಿದ್ಧವಿದೆ. ಸದನದ ಕಲಾಪ ನಡೆಯಲು ಅವಕಾಶ ನೀಡಬೇಕು” ಎಂದು ಶಾ ತಿಳಿಸಿದ್ದರು. ಚರ್ಚೆಯಲ್ಲಿ ಭಾಗವಹಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರವನ್ನೂ ಬರೆದಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದನ್ನು ಕೊನೆಯ ಕ್ಷಣದ ಪ್ರಯತ್ನ ಎಂದು ಕರೆದಿದ್ದು, ಅಮಿತ್ ಶಾ ಅವರ ಉಪದೇಶವನ್ನು ಕೇಳಲು ವಿಪಕ್ಷಗಳಿಗೆ ಆಸಕ್ತಿ ಇಲ್ಲ ಎಂದು ಹೇಳಿದ್ದರು.

ಇನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ಪದೇ ಪದೆ ಅಡ್ಡಿ ಮತ್ತು ಪ್ರತಿಭಟನೆಗಳು ನಡೆದಿದ್ದರೂ, ಎರಡೂ ಸದನಗಳು ಹಲವು ಮಸೂದೆಗಳನ್ನು ಅಂಗೀಕರಿಸಿದವು.