ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಿಇ ಏರೋಸ್ಪೇಸ್‌ ನ ಪುಣೆ ಉತ್ಪಾದನಾ ಘಟಕಕ್ಕೆ ದಶಮಾನೋತ್ಸವ ಸಂಭ್ರಮ

ಪುಣೆ ಕೇಂದ್ರವು ಸಿಎಫ್ಎಂ*ನ ಲೀಪ್, ಜಿಇಎನ್ಎಕ್ಸ್ ಮತ್ತು ಜಿಇ9ಎಕ್ಸ್ ಎಂಜಿನ್‌ ಗಳಿಗೆ ಘಟಕಗಳನ್ನು ತಯಾರಿಸುತ್ತಿದ್ದು, ಇವುಗಳನ್ನು ವಿಶ್ವಾದ್ಯಂತ ಇರುವ ಕಾರ್ಖಾನೆಗಳಲ್ಲಿ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಬಳಸಲಾಗುತ್ತದೆ. ಅತ್ಯುತ್ತಮ ಸುರಕ್ಷತೆ, ಗುಣಮಟ್ಟ ಮತ್ತು ದಕ್ಷತೆ ಒದಗಿಸುವ ಜಿಇ ಏರೋಸ್ಪೇಸ್‌ ನ ಸ್ವಂತ ಸ್ವಾಮ್ಯದ ಲೀನ್ ಆಪರೇಷನ್ಸ್ ಮಾದರಿಯಾದ ಫ್ಲೈಟ್ ಡೆಕ್ ಈ ಘಟಕದ ಯಶಸ್ಸಿಗೆ ಕಾರಣವಾಗಿದೆ.

ಜಿಇ ಏರೋಸ್ಪೇಸ್‌ ನ ಪುಣೆ ಉತ್ಪಾದನಾ ಘಟಕಕ್ಕೆ ದಶಮಾನೋತ್ಸವ ಸಂಭ್ರಮ

-

Ashok Nayak Ashok Nayak Oct 14, 2025 4:43 PM

ಈ ಘಟಕವು 5,000ಕ್ಕೂ ಹೆಚ್ಚು ಉತ್ಪಾದನಾ ವಿಭಾಗದ ಸಿಬ್ಬಂದಿಗೆ ಅತ್ಯುತ್ಕೃಷ್ಟ ಉತ್ಪಾದನಾ ಕೌಶಲ್ಯ ತರಬೇತಿ ನೀಡಿದ್ದು, ಈ ಮೂಲಕ ಪ್ರಾದೇಶಿಕ ಪ್ರತಿಭೆಗಳಿಗೆ ನೆರವು ಒದಗಿಸಲಾಗಿದೆ

ಬೆಂಗಳೂರು: ಜಿಇ ಏರೋಸ್ಪೇಸ್‌ ಸಂಸ್ಥೆಯ ಪುಣೆ ಉತ್ಪಾದನಾ ಘಟಕವು ಇಂದು ತನ್ನ ಹತ್ತನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿದೆ. ಭಾರತದ ವಿಮಾನಯಾನ ಉದ್ಯಮದಲ್ಲಿನ ಕಂಪನಿಯ ನಾಲ್ಕು ದಶಕಗಳ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ.

ಕಳೆದೊಂದು ದಶಕದಲ್ಲಿ ಪುಣೆಯು ವಾಣಿಜ್ಯ ಜೆಟ್ ಎಂಜಿನ್ ಘಟಕಗಳ ಉತ್ಪಾದನೆ ಮತ್ತು ಅತ್ಯಾ ಧುನಿಕ ಉತ್ಪಾದನಾ ಕೌಶಲ್ಯಾಭಿವೃದ್ಧಿ ಕೇಂದ್ರವಾಗಿ ಮಾರ್ಪಟ್ಟಿದ್ದು, ಸಂಸ್ಥೆಯು ಈ ಅವಧಿಯಲ್ಲಿ ತನ್ನ ಅಪ್ರೆಂಟಿಸ್ ಮತ್ತು ಇತರ ಯೋಜನೆಗಳ ಮೂಲಕ 5,000ಕ್ಕೂ ಹೆಚ್ಚು ಉತ್ಪಾದನಾ ವಿಭಾಗದ ಸಿಬ್ಬಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿದೆ.

ಈ ಕುರಿತು ಮಾತನಾಡಿರುವ ಜಿಇ ಏರೋಸ್ಪೇಸ್‌ ನ ಗ್ಲೋಬಲ್ ಮ್ಯಾನುಫ್ಯಾಕ್ಚರಿಂಗ್ ಆಪರೇಷನ್ಸ್ ಆಂಡ್ ಸಪ್ಲೈ ಚೈನ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಮೋಲ್ ನಾಗರ್ ಅವರು , “ನಾವು ಪುಣೆಯಲ್ಲಿ ಈ ಕಾರ್ಖಾನೆಯನ್ನು ಆರಂಭಿಸಿದಾಗ ಇಲ್ಲಿ ಏರೋ-ಎಂಜಿನ್ ಪರಿಸರ ವ್ಯವಸ್ಥೆಯೇ ಇರಲಿಲ್ಲ. ಈ ಹತ್ತು ವರ್ಷಗಳಲ್ಲಿ ನಾವು ವಿಶ್ವದರ್ಜೆಯ ಉತ್ಪಾದನಾ ಘಟಕವನ್ನು ರೂಪಿಸಿರುವುದು ಮಾತ್ರವಲ್ಲ, ಜೊತೆಗೆ ಏರೋಸ್ಪೇಸ್ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದೇವೆ. ಮಹಾರಾಷ್ಟ್ರದಲ್ಲಿ ಉನ್ನತ ಮೌಲ್ಯದ ಉತ್ಪಾದನಾ ಮತ್ತು ಕೌಶಲ್ಯಾಭಿವೃದ್ಧಿ ಘಟಕವನ್ನು ಅಭಿವೃದ್ಧಿಪಡಿಸಿರುವುದರ ಕುರಿತು ನನಗೆ ಹೆಮ್ಮೆ ಇದೆ” ಎಂದು ಹೇಳಿದರು.

ಇದನ್ನೂ ಓದಿ: Bangalore News: ಹಾಸನ ಕುರುಬರ ಸಂಘದ ಮಾಜಿ ಅಧ್ಯಕ್ಷ ಪಟೇಲ್ ಶಿವಪ್ಪರನ್ನು ಹುಡಾ ಅಧ್ಯಕ್ಷ ಹುದ್ದೆಗೆ ನೇಮಿಸಬಾರದು: ಡಾ. ಶ್ರೀನಾಥ್ ಚೌಡಪ್ಪ ಒತ್ತಾಯ

ಪುಣೆ ಕೇಂದ್ರವು ಸಿಎಫ್ಎಂ*ನ ಲೀಪ್, ಜಿಇಎನ್ಎಕ್ಸ್ ಮತ್ತು ಜಿಇ9ಎಕ್ಸ್ ಎಂಜಿನ್‌ ಗಳಿಗೆ ಘಟಕ ಗಳನ್ನು ತಯಾರಿಸುತ್ತಿದ್ದು, ಇವುಗಳನ್ನು ವಿಶ್ವಾದ್ಯಂತ ಇರುವ ಕಾರ್ಖಾನೆಗಳಲ್ಲಿ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಬಳಸಲಾಗುತ್ತದೆ. ಅತ್ಯುತ್ತಮ ಸುರಕ್ಷತೆ, ಗುಣಮಟ್ಟ ಮತ್ತು ದಕ್ಷತೆ ಒದಗಿಸುವ ಜಿಇ ಏರೋಸ್ಪೇಸ್‌ ನ ಸ್ವಂತ ಸ್ವಾಮ್ಯದ ಲೀನ್ ಆಪರೇಷನ್ಸ್ ಮಾದರಿಯಾದ ಫ್ಲೈಟ್ ಡೆಕ್ ಈ ಘಟಕದ ಯಶಸ್ಸಿಗೆ ಕಾರಣವಾಗಿದೆ.

ಫ್ಲೈಟ್ ಡೆಕ್ ಅನ್ನು ಬಳಸಿಕೊಂಡು ಮತ್ತು ಶಾಪ್ ಫ್ಲೋರ್ ನಲ್ಲಿರುವ 1,000ಕ್ಕೂ ಹೆಚ್ಚು ಕಾರ್ಖಾನೆ ಯ ಸಿಬ್ಬಂದಿಗಳು ನೀಡಿರುವ ಶಿಫಾರಸುಗಳನ್ನು ಬಳಸಿಕೊಂಡು ಕಾರ್ಯ ನಿರ್ವಹಿಸಿರುವ ಈ ಘಟಕವು ತ್ಯಾಜ್ಯವನ್ನು ಬಹಳಷ್ಟು ಕಡಿಮೆ ಮಾಡಿದೆ, ಪ್ರಕ್ರಿಯೆಯ ದಕ್ಷತೆಯನ್ನು ಹೆಚ್ಚಿಸಿದೆ, ಉತ್ಪಾದನೆಯನ್ನು ಹೆಚ್ಚಿಸಿದೆ ಮತ್ತು ಕಾರ್ಖಾನೆಯ ಸುರಕ್ಷತೆಯನ್ನು ಉತ್ತಮಗೊಳಿಸಿದೆ. ಒಂದು ಮಹತ್ವದ ಬಿಡಿ ಭಾಗಗಳ ಉತ್ಪಾದನೆಗಾಗಿ ಹೊಸ ಮಾದರಿಯ ಉತ್ಪಾದನಾ ವಿಭಾಗವನ್ನು ಆರಂಭಿಸಿದ್ದು, ಇಲ್ಲಿ ಕಡಿಮೆ ಸಮಯದಲ್ಲಿ ಉತ್ಪಾದನೆ ನಡೆಯುತ್ತಿದೆ. ಒಂದೇ ತಂಡವು ಹೆಚ್ಚಿನ ಉತ್ಪಾದಕತೆ ಸಾಧ್ಯಗೊಳಿಸಿದೆ. ಆ ವಿಭಾಗವು ಈಗ ಆರು ತ್ರೈಮಾಸಿಕಗಳಲ್ಲಿ ಬಹಳಷ್ಟು ಅಭಿವೃದ್ಧಿ ಗಿಂದ್ದು, ಉತ್ಪಾದನೆಯನ್ನು ಎರಡು ಪಟ್ಟು ಹೆಚ್ಚಿಸಿಕೊಂಡಿದೆ.

ಈ ಕುರಿತು ಜಿಇ ಏರೋಸ್ಪೇಸ್‌ ನ ಪುಣೆ ಉತ್ಪಾದನಾ ಘಟಕದ ವ್ಯವಸ್ಥಾಪಕ ನಿರ್ದೇಶಕ ವಿಶ್ವಜಿತ್ ಸಿಂಗ್ ಅವರು, “ಪುಣೆ ಘಟಕದಲ್ಲಿ ತಯಾರಾದ ಬಿಡಿಭಾಗಗಳನ್ನು ನಮ್ಮ ಜಾಗತಿಕ ಕಾರ್ಖಾನೆಗಳಿಗೆ ಸರಬರಾಜು ಮಾಡಲಾಗುತ್ತದೆ. ಅಲ್ಲಿ ಅವುಗಳನ್ನು ಸಿಎಂಎಫ್ ನ ಲೀಪ್, ಜಿಇಎನ್ಎಕ್ಸ್ ಮತ್ತು ಜಿಇ9ಎಕ್ಸ್ ಎಂಜಿನ್‌ ಗಳನ್ನು ತಯಾರಿಸಲು ಬಳಸಲಾಗುತ್ತದೆ. ನಮ್ಮ ಫ್ಲೈಟ್ ಡೆಕ್ ಲೀನ್ ಆಪರೇಷನ್ಸ್ ಮಾದರಿಯನ್ನು ಬಳಸಿಕೊಂಡು, ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿ ವಿಶ್ವಾದ್ಯಂತ ಇರುವ ಗ್ರಾಹಕರ ಬೇಡಿಕೆಗಳನ್ನು ಪೂರೈಸುತ್ತಿರುವುದಕ್ಕೆ ನಮಗೆ ಸಂತೋಷವಿದೆ” ಎಂದು ಹೇಳಿದರು.

ಉತ್ಪಾದನಾ ಕಾರ್ಯದ ಜೊತೆಗೆ ಪುಣೆ ಘಟಕವು ಎಂಜಿನಿಯರಿಂಗ್ ಪ್ರತಿಭೆಗಳಿಗೆ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ವಿಭಾಗದಲ್ಲಿ ಉತ್ತಮ ತರಬೇತಿ ನೀಡುವ ಮೂಲಕ ಒಂದು ಅತ್ಯುತ್ಕೃಷ್ಟ ಪ್ರಾದೇಶಿಕ ಏರೋಸ್ಪೇಸ್ ಸಿಬ್ಬಂದಿ ಪಡೆಯನ್ನು ನಿರ್ಮಿಸಿದೆ. ಪ್ರತೀ ವರ್ಷ ಡಿಪ್ಲೊಮಾ ಎಂಜಿನಿಯರ್‌ ಗಳ ಹೊಸ ತಂಡಗಳು ತರಗತಿ ಪಠ್ಯದ ಜೊತೆಗೇ ಉನ್ನತ ಮಟ್ಟದ ಸುರಕ್ಷತೆ ಮತ್ತು ಗುಣಮಟ್ಟ ಮಾನದಂಡಗಳಿಗೆ ಬದ್ಧವಾಗಿ ಕಾರ್ಖಾನೆಯಲ್ಲಿ ತರಬೇತಿಯನ್ನು ಪಡೆಯುತ್ತಾರೆ. ಜಿಇ ಏರೋಸ್ಪೇಸ್ ಪಾರ್ಟ್ ಟೈಮ್ ಗ್ರಾಜುಯೇಟ್ ಎಂಜಿನಿಯರಿಂಗ್ ಕೋರ್ಸುಗಳನ್ನು ನಡೆಸುತ್ತಿದ್ದು, ಈ ಮೂಲಕ ಪ್ರತಿಭಾವಂತ ಎಂಜಿನಿಯರ್‌ಗಳ ಒಂದು ಸಮೂಹವನ್ನು ಸೃಷ್ಟಿಸಲಾಗಿದೆ. ಇಂದು, ಅಂಥಾ 300ಕ್ಕೂ ಹೆಚ್ಚು ಇಂತಹ ಎಂಜಿನಿಯರ್‌ ಗಳು ಪುಣೆ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ಉಳಿದವರು ಭಾರತದ ಏರೋಸ್ಪೇಸ್ ವಿಭಾಗದಲ್ಲಿ ಬೇರೆ ಬೇರೆ ಕಡೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪರಿಸರ ಸಂರಕ್ಷಣೆಯು ಪುಣೆ ಘಟಕದ ಪ್ರಮುಖ ಆದ್ಯತೆಯಾಗಿದೆ. ಈ ಘಟಕವು ISO14001 ಮತ್ತು ISO45001 ಪ್ರಮಾಣೀಕರಣವನ್ನು ಹೊಂದಿದೆ ಮತ್ತು ಶೇ.30ರಷ್ಟು ವಿದ್ಯುತ್ ಬಳಕೆಯು ನವೀಕರಿಸಬಹುದಾದ ಶಕ್ತಿ ಮೂಲಗಳಿಂದ ಬರುತ್ತದೆ.

*ಸಿಎಫ್ಎಂ ಎಂಬುದು ಜಿಇ ಏರೋಸ್ಪೇಸ್ ಮತ್ತು ಸಾಫ್ರಾನ್‌ ನ 50-50 ಜಂಟಿ ಉದ್ಯಮವಾಗಿದೆ