ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranu Mondal: ಅಂದು ವೈರಲ್ ಸ್ಟಾರ್ ಆಗಿದ್ದ ಗಾಯಕಿ ರಾನು ಮಂಡಲ್ ಸ್ಥಿತಿ ಈಗ ಹೇಗಾಗಿದೆ?

ಗಾಯಕಿ ರಾನು ಮಂಡಲ್ ಒಂದು ಕಾಲದಲ್ಲಿ ಯಾರೆಂದು ಯಾರಿಗೂ ಕೂಡ ಗೊತ್ತಿರಲಿಲ್ಲ‌. 2019ರಲ್ಲಿ ರೈಲ್ವೆ ನಿಲ್ದಾಣದಲ್ಲಿ ಕುಳಿತು ಲತಾ ಮಂಗೇಶ್ಕರ್ ಅವರ 'ಏಕ್ ಪ್ಯಾರ್ ಕಾ ನಗ್ಮಾ ಹೈ' ಹಾಡನ್ನು ಹಾಡಿದ್ದ ಅವರು ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರ ಹಾಡು ಫೇಮಸ್ ಆಗಿ ನೆಟ್ಟಿಗರಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಆದರೆ ಅವರು ಎಷ್ಟು ಬೇಗ ಖ್ಯಾತಿ ಪಡೆದರೋ ಅಷ್ಟೆ ಬೇಗ ಕಣ್ಮರೆಯಾಗಿ ದೂರ ಸರಿಸಿದ್ದಾರೆ. ಹಾಗಾದರೆ ಈಗ ಅವರು ಎಲ್ಲಿದ್ದಾರೆ?

ವೈರಲ್ ಸ್ಟಾರ್ ರಾನು ಮಂಡಲ್ ಈಗ ಎಲ್ಲಿದ್ದಾರೆ ಗೊತ್ತಾ?

Ranu Mondal -

Profile Pushpa Kumari Oct 14, 2025 8:03 PM

ನವದೆಹಲಿ: ಇತ್ತೀಚಿನ ದಿನದಲ್ಲಿ ಸೋಶಿಯಲ್ ಮಿಡಿಯಾ ಬಳಕೆ ಮಾಡುವವರ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ದೈನಿಕ ಬದುಕು, ವೃತ್ತಿ ಜೀವನ, ಟ್ರಾವೆಲಿಂಗ್, ಫುಡ್ ಎಲ್ಲವನ್ನು ಕೂಡ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮೂಲಕ ಬಹುತೇಕರು ವ್ಲಾಗ್‌ ಸ್ಟಾರ್ ಆಗಿದ್ದಾರೆ. ರೀಲ್ಸ್ ಮಾಡಿ ಫೇಮಸ್ ಆಗಲು ಬಯಸುವವರು ಒಂದೆಡೆಯಾದರೆ ಇನ್ನೊಂದೆಡೆ ಆಕಸ್ಮಿಕವಾಗಿ ರಾತ್ರೋ ರಾತ್ರಿ ಜನಪ್ರಿಯತೆಯ ಶಿಖರಕ್ಕೇರಿದವರೂ ಇದ್ದಾರೆ. ಅಂತವರಲ್ಲಿ ಗಾಯಕಿ ರಾನು ಮಂಡಲ್ (Ranu Mondal) ಕೂಡ ಒಬ್ಬರು. ಯಾರ ಜೀವನ ಯಾವ ಸಂದರ್ಭದಲ್ಲಿ ಹೇಗೆ ಕೂಡ ಬದಲಾಗಬಹುದು ಎನ್ನುವುದಕ್ಕೆ ಇವೇ ಉತ್ತಮ ಉದಾಹರಣೆ. ರೈಲ್ವೇ ಸ್ಟೇಷನ್ ನಲ್ಲಿ ಹಾಡುತ್ತಿದ್ದ ಅವರು ರಾತ್ರೊ ರಾತ್ರಿ ಜನಪ್ರಿಯರಾಗಿ ಬಾಲಿವುಡ್‌ ಚಿತ್ರದ ಗೀತೆಗೂ ಧ್ವನಿ ನೀಡಿದ್ದಾರೆ. ಆದರೆ ಇವರು ಎಷ್ಟುಬೇಗ ಖ್ಯಾತಿ ಪಡೆದರೋ ಅಷ್ಟೆ ಬೇಗ ಕಣ್ಮರೆಯಾಗಿ ದೂರ ಸರಿಸಿದ್ದಾರೆ. ಹಾಗಾದರೆ ಈಗ ಅವರು ಎಲ್ಲಿದ್ದಾರೆ? ಹೇಗಿದ್ದಾರೆ?

ಗಾಯಕಿ ರಾನು ಮಂಡಲ್ ಒಂದು ಕಾಲದಲ್ಲಿ ಯಾರೆಂದು ಯಾರಿಗೂ ಕೂಡ ಗೊತ್ತಿರಲಿಲ್ಲ‌. 2019ರಲ್ಲಿ ರೈಲ್ವೆ ನಿಲ್ದಾಣದಲ್ಲಿ ಕುಳಿತು ಲತಾ ಮಂಗೇಶ್ಕರ್ ಅವರ 'ಏಕ್ ಪ್ಯಾರ್ ಕಾ ನಗ್ಮಾ ಹೈ' ಹಾಡನ್ನು ಹಾಡಿದ್ದ ಅವರು ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇವರ ಹಾಡು ವೈರಲ್‌ ಆಗಿ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಇವರ ಹಾಡಿಗೆ ಮನ ಸೋತವರಲ್ಲಿ ಬಾಲಿವುಡ್‌ನ ಸ್ಟಾರ್ ಸಂಗೀತ ನಿರ್ದೇಶಕ, ಗಾಯಕ ಹಿಮೇಶ್ ರೇಷಮ್ಮಿಯಾ (Himesh Reshammiya) ಕೂಡ ಒಬ್ಬರು‌. ಬಳಿಕ ರಾನುಗೆ ಕರೆದು ಅವರೇ 'ತೇರಿ ಮೇರಿ ಕಹಾನಿ' ಹಾಡಿನ ಅವಕಾಸ ನೀಡಿದರು. ಬಳಿಕ ರಾನು ಕಿರುತೆರೆಯ ಹಲವು ಕಾರ್ಯ ಕ್ರಮಗಳಲ್ಲಿ ಅತಿಥಿಯಾಗಿ ಕೂಡ ಭಾಗವಹಿಸಿದರು.

ವೈರಲ್‌ ಆಗಿದ್ದ ರಾನು ಮಂಡಲ್‌ ವಿಡಿಯೊ:



ಇದಾದ ಬಳಿಕ ರಾನು ರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಸ್ಟಾರ್ ಆಗಿ ಪ್ರಸಿದ್ಧರಾಗಿದ್ದರು. ದೊಡ್ಡ ದೊಡ್ಡ ಮಳಿಗೆಯ ಉದ್ಘಾಟನೆಗೆ ಅತಿಥಿಯಾಗಿ ಅವರು ಭಾಗವಹಿಸಿದರು. ಅದಾದ ಬಳಿಕ ಕೆಲವರೊಂದಿಗೆ ಜನ ಸಾಮಾನ್ಯರ ಜತೆ ಅಗೌರವಯುತವಾಗಿ ರಾನು ವರ್ತಿಸಿದ್ದ ವಿಡಿಯೊ ಕೂಡ ವೈರಲ್ ಆಗಿತ್ತು. ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೆ ಅವರ ಸ್ಟಾರ್ ಪಟ್ಟ ಕಡಿಮೆ ಯಾಯಿತು. ಹೀಗಾಗಿ ಎಷ್ಟು ಬೇಗ ಸ್ಟಾರ್ ಆಗಿ ಖ್ಯಾತಿ ಪಡೆದಿದ್ದರೊ ಅಷ್ಟೇ ಬೇಗ ಕಣ್ಮರೆಯಾಗಿಬಿಟ್ಟರು.

ಇತ್ತೀಚಿನ ಯೂಟ್ಯೂಬ್ ಚಾನಲ್ ಒಂದರ ಸಂದರ್ಶನದಲ್ಲಿ ರಾನು ಈಗ ಎಲ್ಲಿದ್ದಾರೆ ಎಂಬ ಸತ್ಯ ತಿಳಿದುಬಂದಿದೆ. ಯೂಟ್ಯೂಬರ್ ನಿಶು ತಿವಾರಿ (Nishu Tiwari) ರಾನು ಮಂಡೆಲಾ ಎಲ್ಲಿದ್ದಾರೆ ಎಂದು ಅನಾವರಣ ಮಾಡಲು ಹೊರಟಿದ್ದಾರೆ. ಕೋಲ್ಕತ್ತಾದ ರಾನಾಘಾಟ್‌ಗೆ ಅವರು ಹೋಗಿದ್ದು ಅಲ್ಲಿ ಗಾಯಕಿ ರಾನು ಮಂಡಲ್ ಅವರನ್ನು ಭೇಟಿಯಾಗಿದ್ದು ಅವರ ಸ್ಥಿತಿ ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ಇದನ್ನು ಓದಿ:Koragajja Movie: ಬಹು ನಿರೀಕ್ಷಿತ ʼಕೊರಗಜ್ಜʼ ಚಿತ್ರದ ಫಸ್ಟ್ ಲುಕ್ ಟೀಸರ್, 3ಡಿ ಮೋಷನ್ ಪೋಸ್ಟರ್ ಬಿಡುಗಡೆ

ಹೌದು, ಗಾಯಕಿ ರಾನು ಈಗ ಮಾನಸಿಕ ಅಸ್ವಸ್ಥತೆಯ ಸ್ಥಿತಿಯಲ್ಲಿದ್ದಾರೆ. ಅವರ ಮನೆಯ ಸ್ಥಿತಿಯು ತುಂಬಾ ಹೀನಾಯವಾಗಿದೆ. ಅವರ ಮನೆ ಗೋಡೆ ಸ್ಥಿತಿ ಈಗಲೋ ಆಗಲೊ ಬೀಳುವ ಸ್ಥಿತಿಯಲ್ಲಿದೆ. ಮನೆಯ ಸುತ್ತ ಗಲೀಜು ತುಂಬಿಕೊಂಡಿದ್ದು ಪ್ಲಾಸ್ಟಿಕ್ ಬಾಟಲಿ, ಇತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ‌. ರಾನು ಈಗ ಮಾನಸಿಕ ಹಾಗೂ ದೈಹಿಕ ಅಸ್ವಸ್ಥತೆ ಸಮಸ್ಯೆ ಎದುರಿಸುತ್ತಿದ್ದಾರೆ.

ನಿಶು ತಿವಾರಿ ಸಂದರ್ಶನ ಮಾಡುವಾಗ ಮೊದಲಿಗೆ ರಾನು ಸಮಾಧಾನದಿಂದ ವರ್ತಿಸಿದರೆ ಬಳಿಕ ಕೋಪಗೊಂಡಂತೆ ವರ್ತಿಸಿದ್ದಾರೆ. ಒಮ್ಮೊಮ್ಮೆ ನನ್ನ ಬಳಿ ತುಂಬಾ ಹಣ ಇದೆ ನಾನು ಯಾರಿಗೂ ಅಂಜಬೇಕಿಲ್ಲ ಎಂದು ಹೇಳಿದರೆ ಇನ್ನೊಂದು ಸಲ ನನಗೆ ಮೋಸ ಆಗಿದೆ ನನ್ನ ಹಣ ಎಲ್ಲ ದೋಚಿದ್ದಾರೆ ಎಂದು ಹೇಳುತ್ತಾರೆ. ಹೀಗಾಗಿ ಅವರ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎಂಬುದು ತಿಳಿದು ಬಂದಿದೆ.