ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs WI: ಟೆಸ್ಟ್‌ ಸರಣಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡರೂ ಬೇಸರ ಹೊರಹಾಕಿದ ಗೌತಮ್‌ ಗಂಭೀರ್!

ವೆಸ್ಟ್‌ ಇಂಡೀಸ್‌ ವಿರುದ್ದ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ, ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು. ಟೆಸ್ಟ್‌ ಸರಣಿ ಗೆಲುವಿನ ಹೊರತಾಗಿಯೂ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರು ಬೇಸರ ಹೊರ ಹಾಕಿದ್ದಾರೆ.

ವಿಂಡೀಸ್‌ ಎದುರು ಟೆಸ್ಟ್‌ ಸರಣಿ ಗೆದ್ದರೂ ಬೇಸರ ಹೊರಹಾಕಿದ ಗಂಭೀರ್‌!

ಡೆಲ್ಲಿ ಪಿಚ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ ಗೌತಮ್‌ ಗಂಭೀರ್‌. -

Profile Ramesh Kote Oct 14, 2025 8:26 PM

ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ (IND vs WI) ಗೆಲುವಿನ ಹೊರತಾಗಿಯೂ ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಅವರು ತಾವು ಆಡಿದ ಅಂಗಣವಾದ ಡೆಲ್ಲಿಯ ಅರುಣ್‌ ಜೇಟ್ಲಿ ಕ್ರಿಕೆಟ್‌ ಕ್ರೀಡಾಂಗಣದ ಪಿಚ್‌ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಇಲ್ಲಿನ ಪಿಚ್‌ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕೇವಲ ಸ್ಪಿನ್‌ ಬೌಲರ್‌ಗಳಿಗೆ ಮಾತ್ರ ನೆರವು ನೀಡುತ್ತಿತ್ತು ಹಾಗೂ ವೇಗದ ಬೌಲರ್‌ಗಳಿಗೆ ಅಷ್ಟೊಂದು ಪರಿಣಾಮಕಾರಿಯಾಗಿ ಇರಲಿಲ್ಲ. ಟೆಸ್ಟ್‌ ಕ್ರಿಕೆಟ್‌ ಅನ್ನು ಜೀವಂತವಾಗಿರಿಸಬೇಕೆಂದರೆ, ಉತ್ತಮ ಗುಣಮಟ್ಟದ ಪಿಚ್‌ಗಳನ್ನು ತಯಾರಿ ಮಾಡಬೇಕೆಂದು ಸಲಹೆ ನೀಡಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ ಪಂದ್ಯವನ್ನು ಇನ್ನೂ ಎರಡು ದಿನ ಬಾಕಿ ಇರುವಾಗಲೇ ಇನಿಂಗ್ಸ್‌ ಹಾಗೂ 140 ರನ್‌ಗಳಿಂದ ಗೆದ್ದಿದ್ದ ಭಾರತ ತಂಡ, ಡೆಲ್ಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಐದು ದಿನಗಳ ಕಾಲ ಆಡಿದ ಬಳಿಕ 7 ವಿಕೆಟ್‌ಗಳಿಂದ ಗೆದ್ದು ಬೀಗಿತು. ಆ ಮೂಲಕ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು. ಪಾಲೋ ಆನ್‌ಗೆ ಸಿಲುಕಿದ್ದ ವಿಂಡೀಸ್‌, ಭಾರತಕ್ಕೆ 121 ರನ್‌ಗಳ ಗುರಿಯನ್ನು ನೀಡಿತ್ತು. ನಂತರ ಭಾರತ ಮೂರು ವಿಕೆಟ್‌ ಕಳೆದುಕೊಂಡು ಗೆಲುವು ಪಡೆಯಿತು.

IND vs WI: ಭಾರತ-ವಿಂಡೀಸ್‌ ಟೆಸ್ಟ್ ಸರಣಿಯ ಪ್ರಶಸ್ತಿ ವಿಜೇತರು, ಗೆದ್ದ ಬಹುಮಾನದ ಪಟ್ಟಿ ಇಲ್ಲಿದೆ

ಡೆಲ್ಲಿ ಪಿಚ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ ಗಂಭೀರ್‌

"ನನಗೆ ಅನಿಸಿದ ಹಾಗೆ ಇಲ್ಲಿ ನಮಗೆ ಅತ್ಯುತ್ತಮ ವಿಕೆಟ್‌ ನೀಡಬಹುದಿತ್ತು. ಹೌದು, ನಾವು ಐದನೇ ದಿನ ಪಂದ್ಯದಲ್ಲಿ ಫಲಿತಾಂಶವನ್ನು ಪಡೆದುಕೊಂಡಿದ್ದೇವೆ. ಆದರೆ, ಬ್ಯಾಟ್‌ಗೆ ತಗುಲಿದ ಚೆಂಡು ವಿಕೆಟ್‌ ಕೀಪರ್‌ಗೆ ಸುಲಭವಾಗಿ ಸಿಗಬೇಕು. ಇಲ್ಲಿನ ಪಿಚ್‌ ಫಾಸ್ಟ್‌ ಬೌಲರ್‌ಗಳಿಗೆ ನೆರವು ನೀಡಬೇಕಾಗಿತ್ತು. ಸ್ಪಿನ್ನರ್‌ಗಳು ಇಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆಂದು ನಾವು ಸತತವಾಗಿ ಹೇಳುತ್ತಲೇ ಇರುತ್ತವೆ. ಆದರೆ, ನಮ್ಮಲ್ಲಿ ಇಬ್ಬರು ಪ್ರಮುಖ ಫಾಸ್ಟ್‌ ಬೌಲರ್‌ಗಳು ಇದ್ದಾರೆ, ಅವರು ಕೂಡ ಪಂದ್ಯದಲ್ಲಿ ಇರಬೇಕೆಂದು ನಾವು ಬಯಸುತ್ತೇವೆ," ಎಂದು ಸುದ್ದಿಗೋಷ್ಠಿಯಲ್ಲಿ ಗೌತಮ್‌ ಗಂಭೀರ್‌ ಬೇಸರ ವ್ಯಕ್ತಪಡಿಸಿದ್ದಾರೆ.

"ಸಾಕಷ್ಟು ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಕ್ಯಾರಿ ಇರಬೇಕು. ಹಾಗಾಗಿ ನಾವೆಲ್ಲರೂ ನೋಡಿದಾಗ, ಕ್ಯಾರಿ ಇರಲಿಲ್ಲ ಎಂದು ನಾನು ಭಾವಿಸಿದೆವು, ಅದು ಸ್ವಲ್ಪ ಆತಂಕಕಾರಿಯಾಗಿತ್ತು. ಮುಂದೆ ನಾವು ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ವಿಕೆಟ್‌ಗಳನ್ನು ಪಡೆಯಬಹುದು ಎಂದು ನಾನು ಭಾವಿಸುತ್ತೇನೆ ಏಕೆಂದರೆ ನಾವೆಲ್ಲರೂ ಟೆಸ್ಟ್ ಕ್ರಿಕೆಟ್ ಅನ್ನು ಜೀವಂತವಾಗಿಡುವ ಜವಾಬ್ದಾರಿಯನ್ನು ಹೊಂದಿದ್ದೇವೆ. ಟೆಸ್ಟ್ ಕ್ರಿಕೆಟ್ ಅನ್ನು ಜೀವಂತವಾಗಿಡಲು ಮೊದಲ ಮತ್ತು ಪ್ರಮುಖ ವಿಷಯವೆಂದರೆ ಉತ್ತಮ ಪಿಚ್‌ಗಳಲ್ಲಿ ಆಡುವುದು ಎಂದು ನಾನು ಭಾವಿಸುತ್ತೇನೆ," ಎಂದು ಹೆಡ್‌ ಕೋಚ್‌ ತಿಳಿಸಿದ್ದಾರೆ.

IND vs WI 2nd Test: ವಿಂಡೀಸ್‌ ಟೆಸ್ಟ್: ಭಾರತದ ಕ್ಲೀನ್ ಸ್ವೀಪ್ ಪರಾಕ್ರಮ

ಇತ್ತೀಚಿನ ವರ್ಷಗಳಲ್ಲಿ ಭಾರತದ ಪಿಚ್‌ಗಳು ಟೀಕೆಗೆ ಒಳಗಾಗಿವೆ, ಶ್ರೇಯಾಂಕಿತ ಆಟಗಾರರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಗಳನ್ನು ನೀಡಲಾಗುತ್ತದೆ. ಆದಾಗ್ಯೂ, ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ದ ಭಾರತ 3-0 ಅಂತರದಿಂದ ವೈಟ್‌ವಾಷ್‌ ಆಘಾತ ಅನುಭವಿಸಿತ್ತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯಗಳಿಗೆ ಕೋಲ್ಕತಾ ಮತ್ತು ಗುವಾಹಟಿಯಲ್ಲಿ ಯಾವ ರೀತಿಯ ಪಿಚ್‌ಗಳನ್ನು ನೀಡುತ್ತಾರೆಂಬುದು ತೀವ್ರ ಕುತೂಹಲ ಕೆರಳಿಸಿದೆ.