ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಹೇಳಿಕೆ ತಿರುಚಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿರುವುದು ವಿಷಾಧನೀಯ

ಇಂತಹ ಯೋಜನೆಯನ್ನು ಜಾರಿಗೆ ತರಲು ಮುಖ್ಯಮ೦ತ್ರಿ ಸಿದ್ದರಾಮಯ್ಯನವರಿಂದ ಮಾತ್ರ ಸಾಧ್ಯ ವಿದ್ದು, ಒಂದು ವೇಳೆ ನಾನೇ ಮುಖ್ಯಮಂತ್ರಿಯಾದರೂ ಪಂಚ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನ ಪಡಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ದೂರದೃಷ್ಟಿ, ರಾಜ್ಯದ ಆರ್ಥಿಕ ನಿರ್ವಹಣೆ ಮತ್ತು ನುಡಿದಂತೆ ನಡೆಯುವ ಅವರ ಇಚ್ಛಾಶಕ್ತಿಯ ಬಗ್ಗೆ ಹೇಳಿದರು.

ಹೇಳಿಕೆ ತಿರುಚಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿರುವುದು ವಿಷಾಧನೀಯ

-

Ashok Nayak Ashok Nayak Oct 14, 2025 8:23 PM

ಶಿರಸಿ: "ಕೆಲ ಮಾಧ್ಯಮಗಳು ಮತ್ತು ವಿರೋಧ ಪಕ್ಷದ ಶಾಸಕರು ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿಕೆಯನ್ನು ತಿರುಚಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿರುವುದು ವಿಷಾಧನೀಯ" ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗೌಂವ್ಕರ್ ಹೇಳಿದರು.

ದಾಂಡೇಲಿಯಲ್ಲಿ ನಡೆದ ಓಟ್ ಚೋರಿ ವಿರುದ್ಧ ಹಮ್ಮಿಕೊಂಡಿದ್ದ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ‌, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ದೂರದೃಷ್ಟಿ, ಬಡವರ ದೀನ ದಲಿತರ, ಜನಸಾಮಾನ್ಯರ, ರೈತರ, ಕೂಲಿಕಾರ್ಮಿಕರ ಹೀಗೆ ಸಂಕಷ್ಟದಲ್ಲಿದ್ದವರ ಸಮಸ್ಯೆಗಳಿಗೆ ಸ್ಪಂದಿಸುವ ಅವರ ವಿಚಾರಧಾರೆಗಳಿಂದಾಗಿ ಇಂದು ಕರ್ನಾಟಕದ ಕಾಂಗ್ರೆಸ್ ಸರಕಾರದ ಯೋಜನೆ ಗಳು ಜಾಗತಿಕ ಮಟ್ಟದಲ್ಲಿ ಪ್ರಭಾವ ಹೊಂದುವಂತಾಗಿದೆ.

ಇದನ್ನೂ ಓದಿ: Sirsi News: ಭೂಮಿ ಹಕ್ಕಿಗಾಗಿ ಸರ್ಕಾರದ ವಿರುದ್ಧ ಸಮರ ಸಾರಿದ ಅರಣ್ಯವಾಸಿಗಳು; ಶಿರಸಿಯಲ್ಲಿ ಬೃಹತ್ ಮೇಲ್ಮನವಿ ಅಭಿಯಾನ

ಇಂತಹ ಯೋಜನೆಯನ್ನು ಜಾರಿಗೆ ತರಲು ಮುಖ್ಯಮ೦ತ್ರಿ ಸಿದ್ದರಾಮಯ್ಯನವರಿಂದ ಮಾತ್ರ ಸಾಧ್ಯವಿದ್ದು, ಒಂದು ವೇಳೆ ನಾನೇ ಮುಖ್ಯಮಂತ್ರಿಯಾದರೂ ಪಂಚ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನ ಪಡಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ದೂರದೃಷ್ಟಿ, ರಾಜ್ಯದ ಆರ್ಥಿಕ ನಿರ್ವಹಣೆ ಮತ್ತು ನುಡಿದಂತೆ ನಡೆಯುವ ಅವರ ಇಚ್ಛಾಶಕ್ತಿಯ ಬಗ್ಗೆ ಹೇಳಿದರು.

ಅರ್ಥಪೂರ್ಣ ಸಂದೇಶವನ್ನು ಅಪಾರ್ಥ ಮಾಡಿದ ಕೆಲ ಮಾಧ್ಯಮದ ನಡೆ ನಾಗಿ ಖಂಡಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ