ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೆಬಿ- ಪ್ರಮಾಣೀಕೃತ ಫೈನಾನ್ಷಿಯಲ್ ಕೋರ್ಸ್‌ಗಳನ್ನು ಪಠ್ಯಕ್ರಮದಲ್ಲಿ ಸಂಯೋಜಿಸಲು ಎನ್‌ಐಎಸ್‌ಎಂ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಐಎಸ್‌ಎಂಇ ಬೆಂಗಳೂರು

ಎನ್‌ಐಎಸ್‌ಎಂ ಸಂಸ್ಥೆಯು ಎನ್‌ಐಎಸ್‌ಎಂ ಪ್ರಮಾಣಪತ್ರಗಳನ್ನು ಪಡೆದ ಐಎಸ್‌ಎಂಇ ವಿದ್ಯಾರ್ಥಿ ಗಳಿಗಾಗಿ ವಿಶೇಷ ನೇಮಕಾತಿ ಪೋರ್ಟಲ್ ರಚಿಸಲಿದೆ. ಈ ಮೂಲಕ ಉದ್ಯೋಗಾವಕಾಶ ಹೆಚ್ಚಿಸಲಿದೆ. ಆರ್ಥಿಕ ಶಿಕ್ಷಣವನ್ನು ಹೆಚ್ಚು ಮಂದಿಗೆ ಒದಗಿಸಲು ಎನ್‌ಐ ಎಸ್‌ಎಂ ಸಂಸ್ಥೆಯು ಐಎಸ್‌ಎಂಇ ವಿದ್ಯಾರ್ಥಿಗಳಿಗೆ ಎಲ್ಲಾ ಇ-ಲರ್ನಿಂಗ್ ಕೋರ್ಸ್ ಗಳ ಮೇಲೆ ಶೇ.50ರವರೆಗೆ ರಿಯಾಯಿತಿಯನ್ನು ನೀಡುತ್ತದೆ.

ಎನ್‌ಐಎಸ್‌ಎಂ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಐಎಸ್‌ಎಂಇ ಬೆಂಗಳೂರು

Ashok Nayak Ashok Nayak Aug 23, 2025 4:31 PM

ಬೆಂಗಳೂರು: ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಎಕ್ಸಲೆನ್ಸ್ (ಐಎಸ್‌ಎಂಇ), ಬೆಂಗಳೂರು ಸಂಸ್ಥೆಯು ಸೆಬಿ ಪ್ರಮಾಣೀಕೃತ ಫೈನಾನ್ಷಿಯಲ್ ಕೋರ್ಸ್ ಗಳನ್ನು ತನ್ನ ಪಠ್ಯಕ್ರಮ ದಲ್ಲಿ ಸೇರಿಸಿಕೊಳ್ಳಲು ಸೆಕ್ಯೂರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ದ ಶೈಕ್ಷಣಿಕ ಸಂಸ್ಥೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮಾರ್ಕೆಟ್ಸ್ (ಎನ್‌ಐ ಎಸ್‌ಎಂ) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಪಾಲುದಾರಿಕೆಯ ಮೂಲಕ ಔದ್ಯಮಿಕ ಅಗತ್ಯಗಳನ್ನು ಪೂರೈಸುವ ಫೈನಾನ್ಷಿಯಲ್ ಕೋರ್ಸ್ ಗಳನ್ನು ಕಲಿಸಲಾಗುತ್ತದೆ. ವಿಶೇಷವಾಗಿ ಐಎಸ್‌ಎಂಇನ ಸ್ನಾತಕೋತ್ತರ ಪದವಿ ಮತ್ತು ಪದವಿ ತರಗತಿ ವಿದ್ಯಾರ್ಥಿಗಳು ಈಕ್ವಿಟಿ ಡೆರಿವೇಟಿವ್ಸ್, ಪೋರ್ಟ್‌ಫೋಲಿಯೊ ಮ್ಯಾನೇಜ್‌ಮೆಂಟ್, ಮ್ಯೂಚುವಲ್ ಫಂಡ್ಸ್, ಫಿಕ್ಸೆಡ್ ಇನ್‌ಕಮ್ ಸೆಕ್ಯೂರಿಟೀಸ್ ಮತ್ತು ಇನ್‌ವೆಸ್ಟ್‌ ಮೆಂಟ್ ಅಡ್ವೈಸರಿ ಇತ್ಯಾದಿ ವಿಷಯಗಳಲ್ಲಿ ಎನ್‌ಐಎಸ್‌ಎಂನ ಉದ್ಯಮ- ಮಾನ್ಯತೆ ಪಡೆದ ಸರ್ಟಿಫಿಕೋಟ್ ಕೋರ್ಸ್ ಕಲಿಯಬಹುದು. ಈ ಕೋರ್ಸ್ ಗಳನ್ನು ಐಎಸ್‌ಎಂಇನ ಶೈಕ್ಷಣಿಕ ಪಠ್ಯಕ್ರಮದಲ್ಲಿ ಮೌಲ್ಯವರ್ಧಿತ ಕೋರ್ಸ್ ಗಳಾಗಿ ಸಂಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ವೃತ್ತಿಗೆ ಅನುಕೂಲವಾಗುವಂತೆ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಜೊತೆಗೆ ಎನ್‌ಐಎಸ್‌ಎಂ ಸಂಸ್ಥೆಯು ಐಎಸ್‌ಎಂಇಗೆ ಶೈಕ್ಷಣಿಕ ನೆರವನ್ನೂ ಒದಗಿಸುತ್ತದೆ. ಈ ಮೂಲಕ ಐಎಸ್‌ಎಂಇನ ಅಧ್ಯಾಪಕರು ಎನ್‌ಐಎಸ್‌ಎಂ ನಡೆಸುವ ಅಧ್ಯಾಪಕರ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Bengaluru Stampede: ಪೊಲೀಸ್ ಆಯುಕ್ತರ ಮನವಿ ಮೇರೆಗೆ ಆರ್‌ಸಿಬಿ ಕಾರ್ಯಕ್ರಮಕ್ಕೆ ಹೋದೆ: ಡಿಕೆಶಿ

ಈ ಕುರಿತು ಮಾತನಾಡಿರುವ ಐಎಸ್‌ಎಂಇನ ಸಂಸ್ಥಾಪಕ ಮತ್ತು ನಿರ್ದೇಶಕ ಡಾ. ನಿತಿನ್ ಗಾರ್ಗ್ ಅವರು, “ಎನ್‌ಐಎಸ್‌ಎಂ ಜೊತೆಗಿನ ನಮ್ಮ ಸಹಯೋಗವು ವಿದ್ಯಾರ್ಥಿಗಳಿಗೆ ಉದ್ಯಮ ಸಂಬಂಧಿತ ಕೌಶಲ್ಯಗಳನ್ನು ಒದಗಿಸಿ ಸಬಲೀಕರಣಗೊಳಿಸುವ ನಮ್ಮ ಉದ್ದೇಶದ ಭಾಗವಾಗಿ ಮೂಡಿಬಂದಿದೆ. ಫೈನಾನ್ಸ್ ವಿಭಾಗದಲ್ಲಿ ಭವಿಷ್ಯಕ್ಕೆ ಸಿದ್ಧವಾದ ವೃತ್ತಿಪರರನ್ನು ರೂಪಿಸುವ ನಮ್ಮ ಧ್ಯೇಯಕ್ಕೆ ಪೂರಕವಾಗಿ ಈ ಹೆಜ್ಜೆ ಇಡಲಾಗಿದೆ” ಎಂದರು.

ಇದರ ಭಾಗವಾಗಿ ಎನ್‌ಐಎಸ್‌ಎಂ ಸಂಸ್ಥೆಯು ಎನ್‌ಐಎಸ್‌ಎಂ ಪ್ರಮಾಣಪತ್ರಗಳನ್ನು ಪಡೆದ ಐಎಸ್‌ಎಂಇ ವಿದ್ಯಾರ್ಥಿಗಳಿಗಾಗಿ ವಿಶೇಷ ನೇಮಕಾತಿ ಪೋರ್ಟಲ್ ರಚಿಸಲಿದೆ. ಈ ಮೂಲಕ ಉದ್ಯೋಗಾವಕಾಶ ಹೆಚ್ಚಿಸಲಿದೆ. ಆರ್ಥಿಕ ಶಿಕ್ಷಣವನ್ನು ಹೆಚ್ಚು ಮಂದಿಗೆ ಒದಗಿಸಲು ಎನ್‌ಐ ಎಸ್‌ಎಂ ಸಂಸ್ಥೆಯು ಐಎಸ್‌ಎಂಇ ವಿದ್ಯಾರ್ಥಿಗಳಿಗೆ ಎಲ್ಲಾ ಇ-ಲರ್ನಿಂಗ್ ಕೋರ್ಸ್ ಗಳ ಮೇಲೆ ಶೇ.50ರವರೆಗೆ ರಿಯಾಯಿತಿಯನ್ನು ನೀಡುತ್ತದೆ.

ಮೂರು ವರ್ಷಗಳ ಈ ಒಪ್ಪಂದವು ಪ್ರತೀವರ್ಷ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲಾಭವನ್ನು ಒದಗಿಸಲಿದೆ ಮತ್ತು ಪರಸ್ಪರ ಒಪ್ಪಿಗೆಯ ಮೇಲೆ ಅನಂತರವೂ ಒಪ್ಪಂದ ವಿಸ್ತರಣೆ ಹೊಂದಬಹು ದಾಗಿದೆ.