ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daali Dhananjay Birthday: ಡಾಲಿ ಧನಂಜಯ್‌ಗೆ ಹುಟ್ಟುಹಬ್ಬದ ಸಂಭ್ರಮ; ಹೊರಬಿತ್ತು ʼಜಿಂಗೋʼ ಚಿತ್ರದ ಪೋಸ್ಟರ್

Jingo Movie: ಸ್ಯಾಂಡಲ್‌ವುಡ್‌ ನಟ, ನಿರ್ಮಾಪಕ ಡಾಲಿ ಧನಂಜಯ್‌ ಅವರಿಗೆ ಆಗಸ್ಟ್‌ 23ರಂದು ಹುಟ್ಟುಹಬ್ಬದ ಸಂಭ್ರಮ. ಈ ಪ್ರಯುಕ್ತ ಅವರು ನಟಿಸುತ್ತಿರುವ 'ಜಿಂಗೋ' ಚಿತ್ರದ ಸೆಕೆಂಡ್ ಲುಕ್ ಪೋಸ್ಟರ್ ರಿಲೀಸ್‌ ಆಗಿದೆ. ಕನ್ನಡ, ತೆಲುಗು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

ಡಾಲಿ ಧನಂಜಯ್‌ ನಟನೆಯ ʼಜಿಂಗೋʼ ಚಿತ್ರದ ಪೋಸ್ಟರ್ ಔಟ್‌

Ramesh B Ramesh B Aug 23, 2025 7:41 PM

ಬೆಂಗಳೂರು: ಡಾಲಿ ಪಿಚ್ಚರ್ಸ್ ಮತ್ತು ತ್ರಿಶೂಲ್ ವಿಜನರಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ (Daali Dhananjay Birthday) ಅಭಿನಯದ 'ಜಿಂಗೋ' ಚಿತ್ರದ (Jingo Movie) ಸೆಕೆಂಡ್ ಲುಕ್ ಪೋಸ್ಟರ್ ಅನ್ನು ನಟ ಧನಂಜಯ ಅವರ ಹುಟ್ಟುಹಬ್ಬದ ಪ್ರಯುಕ್ತ ಆಗಸ್ಟ್‌ 23ರಂದು ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಬಿಡುಗಡೆಯಾದ ಚಿತ್ರದ ಅನೌನ್ಸ್‌ಮೆಂಟ್‌ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿತ್ತು. ಡಾಲಿ ಧನಂಜಯ ಅವರ ʼಜಿಂಗೋʼ ಮೋನೋಲಾಗ್ ಮತ್ತು ಅದರ ಜತೆಗಿನ ಸಂಗೀತ ʼನರ ನರ ಜಿಂಗೋʼಗೆ ಡಾಲಿ ಫ್ಯಾನ್ಸ್‌ ಫಿದಾ ಆಗಿದ್ದರು. ಇದೀಗ ರಿಲೀಸ್‌ ಆಗಿರುವ ಹೊಸ ಪೋಸ್ಟರ್‌ ಮತ್ತಷ್ಟು ಕುತೂಹಲ ಕೆರಳಿಸಿದೆ.

ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆಯಿಂದ ಉತ್ಸಾಹಗೊಂಡ ನಿರ್ಮಾಪಕರು ಕಥೆಯ ವ್ಯಾಪ್ತಿ ಮತ್ತು ಚಿತ್ರದ ಕ್ಯಾನ್ವಾಸ್ ಅನ್ನು ಗಣನೀಯವಾಗಿ ವಿಸ್ತರಿಸಿದ್ದಾರೆ ಎಂದು ಚಿತ್ರತಂಡ ಮೂಲಗಳು ತಿಳಿಸಿವೆ. ಸಣ್ಣ ಪಟ್ಟಣದ ಕಥೆಯಾಗಿ ಆರಂಭವಾದದ್ದು ಇದೀಗ ಚಿತ್ರ ತನ್ನ ಕ್ಯಾನ್ವಾಸ್ ಅನ್ನು ವಿಸ್ತರಿಸಿಕೊಂಡಿದೆ.

ಈ ಸುದ್ದಿಯನ್ನೂ ಓದಿ: Shivanna-Daali Movie: ಮತ್ತೆ ಅಬ್ಬರಿಸೋಕೆ ರೆಡಿ ಆಗ್ತಿದೆ ʼಟಗರುʼ ಜೋಡಿ; ಈ ಬಾರಿ ಶಿವಣ್ಣ-ಡಾಲಿ ಕಾಂಬಿನೇಶನ್‌ ಹವಾ ಹೇಗಿರುತ್ತೆ?

"ನಮಗೆ ಸಿಕ್ಕ ಪ್ರತಿಕ್ರಿಯೆ ನಮ್ಮನ್ನು ದೊಡ್ಡದಾಗಿ ಯೋಚಿಸಲು ಪ್ರೇರೇಪಿಸಿದೆ. 2026ರಲ್ಲಿ ವೀಕ್ಷಕರಿಗೆ ವಿಶಿಷ್ಟ ಚಿತ್ರರಂಗದ ಅನುಭವವನ್ನು ಇದು ನೀಡಲಿದೆ. ಪಾಲಿಟಿಕಲ್, ಕಾಮಿಡಿ, ಆ್ಯಕ್ಷನ್‌, ಥ್ರಿಲ್ಲರ್ ಎಲ್ಲ ಅಂಶಗಳನ್ನು ಹದವಾಗಿ ಬೆರೆಸಿ ಪ್ರೇಕ್ಷಕರಿಗೆ ಅತ್ಯುತ್ತಮ ಮನರಂಜನೆ ಕೊಡಬೇಕು ಎಂಬುದೇ ನಮ್ಮ ಗುರಿ. ಸದ್ಯ ಕನ್ನಡ, ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ" ಎಂದು ನಿರ್ಮಾಣ ತಂಡ ತಿಳಿಸಿದೆ.

ನಿರ್ದೇಶಕ ಶಶಾಂಕ್ ಸೋಗಾಲ್ ಮಾತನಾಡಿ, “ಈಗ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ತುಂಬಾ ವಿವರಗಳಿವೆ. ಮೇಲ್ನೋಟಕ್ಕೆ ಒಂದು ಫನ್ ಪೋಸ್ಟರ್ ಥರ ಕಾಣುತ್ತೆ, ಸೂಕ್ಷ್ಮವಾಗಿ ನೋಡುತ್ತಾ ಹೋದಂತೆ ಆಳ ಅರಿವಾಗುತ್ತ ಹೋಗುತ್ತದೆ. ಸಿನಿಮಾ ಕೂಡ ಇದೇ ಇರುತ್ತದೆ. ಎಲ್ಲ ವರ್ಗಗಳ ಪ್ರೇಕ್ಷಕರಿಗೂ ಇಷ್ಟವಾಲಿದೆ. ಮುಂದಿನ ವರ್ಷ ತೆರೆ ಕಾಣಲಿದೆʼʼ ಎಂದರು.

2013ರಲ್ಲಿ ತೆರೆಕಂಡ ʼಡೈರಕ್ಟರ್ಸ್‌ ಸ್ಪೆಶಲ್‌ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಧನಂಜಯ್‌ ಬಳಿಕ ಭರವಸೆಯ ನಾಯಕನಾಗಿ ಮೂಡಿ ಬಂದರು. 2018ರ ʼಭೈರವ ಗೀತʼ ಕನ್ನಡದ ಜತೆಗೆ ತೆಲುಗಿನಲ್ಲೂ ರಿಲೀಸ್‌ ಆಯಿತು. 2022ರಲ್ಲಿ ಬಿಡುಗಡೆಯಾದ ʼಬಡವ ರಾಸ್ಕಲ್‌ʼ ಸಿನಿಮಾ ಮೂಲಕ ಧನಂಜಯ್‌ ನಿರ್ಮಾಪಕರೂ ಆದರು. ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ʼಪುಷ್ಪʼ ಮತ್ತು ʼಪುಷ್ಪ 2ʼ ಪ್ಯಾನ್‌ ಇಂಡಿಯಾ ಚಿತ್ರದಲ್ಲೂ ನಟಿಸಿದ್ದಾರೆ. ಜತೆಗೆ ತಮಿಳು ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸದ್ಯ ಬಹು ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ.