ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2025ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳು ಪ್ರಕಟ; ಸಂಪೂರ್ಣ ಪಟ್ಟಿ ಇಲ್ಲಿದೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನಕ್ಕೆ ಆಯ್ಕೆಯಾದವರ ಪಟ್ಟಿ ಇಲ್ಲಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳು ಪ್ರಕಟ

-

Prabhakara R
Prabhakara R Mar 25, 2026 11:13 PM

ಬೆಂಗಳೂರು: 2025ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳು ಪ್ರಕಟಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರು

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಈ ಕೆಳಕಂಡ 5 ಮಂದಿ ಹಿರಿಯ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2025ನೇ ವರ್ಷದ ಗೌರವ ಪ್ರಶಸ್ತಿ ಘೋಷಿಸಲಾಗಿದೆ.

  1. ಪ್ರೊ. ಶಿವರಾಮಯ್ಯ - ಬೆಂಗಳೂರು
  2. ಶ್ರೀ ಚಂದ್ರಶೇಖರ ತಾಳ್ಯ - ಚಿತ್ರದುರ್ಗ
  3. ಡಾ. ಚಂದ್ರಕಾಂತ ಪೋಕಳೆ - ಬೆಳಗಾವಿ
  4. ಡಾ. ವಸುಂಧರಾ ಭೂಪತಿ - ಬಳ್ಳಾರಿ
  5. ಡಾ. ಎಸ್. ತುಕಾರಾಂ- ಮೈಸೂರು

2025ನೇ ವರ್ಷದ 'ಸಾಹಿತ್ಯಶ್ರೀ' ಪ್ರಶಸ್ತಿ ಪುರಸ್ಕೃತರು

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ 50 ರಿಂದ 60ದ ವಯೋಮಾನದ ಈ ಕೆಳಕಂಡ 10 ಮಂದಿ ಸಾಹಿತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2025ನೇ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು, ಪ್ರಶಸ್ತಿ ಫಲಕ, ಶಾಲು, ಹಾರ ಹಾಗೂ ಪ್ರಮಾಣ ಪತ್ರಗಳನ್ನು ಒಳಗೊಂಡಿದೆ.

  1. ಡಾ. ನಿಷ್ಠಿ ರುದ್ರಪ್ಪ - ಬಳ್ಳಾರಿ
  2. ಡಾ. ವೀರೇಷ ಬಡಿಗೇರ-ಬಾಗಲಕೋಟೆ
  3. ಡಾ. ಸಿ. ಜಿ. ಲಕ್ಷ್ಮೀಪತಿ - ತುಮಕೂರು
  4. ಕಂನಾಡಿಗ ನಾರಾಯಣ - ಬೆಂಗಳೂರು
  5. ರೂಪ ಹಾಸನ - ಹಾಸನ
  6. ಜಯರಾಮ್ ರಾಯಪುರ - ವಿಜಯವಾಡ
  7. ಕುಮುದಾ ಸುಶೀಲ್ - ದಾವಣಗೆರೆ
  8. ಡಾ. ಓ. ನಾಗರಾಜು - ತುಮಕೂರು
  9. ಬಿ.ಎಂ.ಬಷೀರ್-ಮಂಗಳೂರು
  10. ಡಾ. ಜ್ಯೋತಿ-ಬೆಂಗಳೂರು



ಪುಸ್ತಕ ಬಹುಮಾನಕ್ಕೆ ಆಯ್ಕೆಯಾದವರು:

ಭಾರತೀದೇವಿ ಪಿ- 'ಚಲಿಸುತ್ತಿವೆ ಚುಕ್ಕಿಗಳು'

ಶಶಿ ತರೀಕೆರೆ- 'ಪ್ಯೂಪಾ'

ವೈ.ಎಸ್.ಹರಗಿ- 'ಇಮಾಮ್ ಸಾಹೇಬರ ಕುದುರೆ'

ಅನಿಲ್ ಗುನ್ನಾಪೂರ- 'ಸರ್ವೆ ನಂಬರ್-97'

ಡಾ.ಚಂದ್ರು ಕಾಳೇನಹಳ್ಳಿ- 'ಗಂಧವತಿ'

ಡಾ.ಶಿವರಾಜ ಬ್ಯಾಡರಹಳ್ಳಿ- 'ಒಂದು ತಲೆ ಚವುರದ ಕಥೆ'

ಮಲ್ಲಿಕಾರ್ಜುನ ಹುಲಗಬಾಳಿ- 'ತಿರುಗಾಟ'

ಎಂ.ಜಿ.ಹೆಗಡೆ ಅವರ ಆತ್ಮಕಥೆ- 'ಚಿಮಣಿ ಬೆಳಕಿನಿಂದ'

ಮಹಾಂತೇಶ ಪಾಟೀಲ- 'ಬೆಳಕು ಬೆಳೆಯುವ ಹೊತ್ತು'

ರಾಜಶೇಖರ ಕುಕ್ಕುಂದಾ- 'ಬಿಸಿ ಬಿಸಿ ಬಾತು'

ಶ್ರೀಧರ ತುಮರಿ- 'ಪಕ್ಷಿಗಳ ವಿಸ್ಮಯ ವಿಶ್ವ'

ಡಾ. ಎನ್.ಎನ್. ಚಿಕ್ಕಮಾದು ಅವರ 'ಪ್ರಜಾಮಾತೆ'

ಡಾ.ಹಂಪನಹಳ್ಳಿ ತಿಮ್ಮೇಗೌಡರ 'ದಾಸೊಕ್ಕಲಿಗರು'

ದು.ಸರಸ್ವತಿ ಅವರ 'ಜಾತಿ ಮತ್ತು ಲಿಂಗತ್ವ' ಕೃತಿ

ಡಾ.ಹುಲಿಕುಂಟೆ ಮೂರ್ತಿ ಅವರ 'ನುಡಿ ಕಂಡಾಯ'

ಲಕ್ಷ್ಮಣ ಶರೆಗಾರ ಅವರ 'ತಿದಿಯ ತುದಿಯ ಬೆಂಕಿಯ ಉಗುಳು'

ಡಾ.ಪ್ರದೀಪ್ ಕೆಂಜಿಗೆ ಅವರ 'ನರವಾನರ' ಕೃತಿ ಆಯ್ಕೆಯಾಗಿವೆ ಎಂದು ಮುಕುಂದರಾಜ್ ತಿಳಿಸಿದರು.

ವರ್ಷದ ಗೌರವ ಪ್ರಶಸ್ತಿ 50 ಸಾವಿರ ರೂ., ಸಾಹಿತ್ಯಶ್ರೀ ಪ್ರಶಸ್ತಿಗೆ 25 ಸಾವಿರ ರೂ., ಪುಸ್ತಕ ಬಹುಮಾನ 25 ಸಾವಿರ ರೂ., ಪುಸ್ತಕ ದತ್ತಿ ಬಹುಮಾನ 10 ಸಾವಿರ ರೂ. ನಗದು ಒಳಗೊಂಡಿರಲಿದೆ.