ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangalore News: ಭವಿಷ್ಯದ ತಂತ್ರಜ್ಞಾನಕ್ಕೆ ವೇದಿಕೆಯಾದ ಮಾಹೆ ಬೆಂಗಳೂರು: 'ಸೂಪರ್‌ಕಂಪ್ಯೂಟಿಂಗ್ ಇಂಡಿಯಾ' ಸಮ್ಮೇಳನಕ್ಕೆ ತೆರೆ

ಮಾಹೆ ಬೆಂಗಳೂರು ಕ್ಯಾಂಪಸ್‌ ಅನ್ನು ತಂತ್ರಜ್ಞಾನ ಹಾಗೂ ಅಂತರರಾಷ್ಟ್ರೀಯ ಸಂಶೋಧನಾ ಸಹಯೋಗದ ಹಬ್ ಆಗಿ ರೂಪಿಸುವಲ್ಲಿ ಈ ಸಮ್ಮೇಳನ ಪರಿಣಾಮಕಾರಿಯಾಯಿತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಿದ್ದ ಈ ಕಾರ್ಯಕ್ರಮದಲ್ಲಿ ಉನ್ನತ ಮಟ್ಟದ ತಾಂತ್ರಿಕ ಚರ್ಚೆಗಳು ಮತ್ತು ವಿಷಯ ಮಂಡನೆಗಳು ನಡೆದವು.

ಭವಿಷ್ಯದ ತಂತ್ರಜ್ಞಾನಕ್ಕೆ ವೇದಿಕೆಯಾದ ಮಾಹೆ ಬೆಂಗಳೂರು

-

Ashok Nayak
Ashok Nayak Dec 14, 2025 7:03 PM

ಬೆಂಗಳೂರು: ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿನ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾ ಲಜಿಯಲ್ಲಿ (ಎಂಐಟಿ) ನಡೆದ ಐದು ದಿನಗಳ 'ಸೂಪರ್‌ಕಂಪ್ಯೂಟಿಂಗ್ ಇಂಡಿಯಾ-2025' (SCI2025) ಸಮ್ಮೇಳನವು ಯಶಸ್ವಿಯಾಗಿ ಪೂರ್ಣಗೊಂಡಿತು. ಇದು ಹೈ-ಪರ್ಫಾರ್ಮೆನ್ಸ್ ಕಂಪ್ಯೂ ಟಿಂಗ್ (HPC), ಕೃತಕ ಬುದ್ಧಿಮತ್ತೆ (AI) ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರಗಳಿಗೆ ಸಂಬಂಧಿ ಸಿದ ಭಾರತದ ಮೊದಲ ಜಾಗತಿಕ ಸಮ್ಮೇಳನವಾಗಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿರುವ ಸಿ-ಡಾಕ್ (C-DAC) ಸಂಸ್ಥೆ ಇದನ್ನು ಆಯೋಜಿಸಿತ್ತು.

ಮಾಹೆ ಬೆಂಗಳೂರು ಕ್ಯಾಂಪಸ್‌ ಅನ್ನು ತಂತ್ರಜ್ಞಾನ ಹಾಗೂ ಅಂತರರಾಷ್ಟ್ರೀಯ ಸಂಶೋಧನಾ ಸಹಯೋಗದ ಹಬ್ ಆಗಿ ರೂಪಿಸುವಲ್ಲಿ ಈ ಸಮ್ಮೇಳನ ಪರಿಣಾಮಕಾರಿಯಾಯಿತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಿದ್ದ ಈ ಕಾರ್ಯಕ್ರಮದಲ್ಲಿ ಉನ್ನತ ಮಟ್ಟದ ತಾಂತ್ರಿಕ ಚರ್ಚೆಗಳು ಮತ್ತು ವಿಷಯ ಮಂಡನೆಗಳು ನಡೆದವು.

ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದ್ದ 'ತಂತ್ರಜ್ಞಾನ ಮೇಳ'ದಲ್ಲಿ ವಿವಿಡಿಎನ್ ಟೆಕ್ನಾಲಜೀಸ್, ಡೆಲ್, ಎಚ್‌ಪಿಇ, ವೆಸ್ಟರ್ನ್ ಡಿಜಿಟಲ್, ಮೈಕ್ರಾನ್ ಮತ್ತು ಕೇನ್ಸ್‌ನಂತಹ ಉದ್ಯಮದ ದಿಗ್ಗಜರು ಸೇರಿದಂತೆ ಒಟ್ಟು 187 ಪ್ರದರ್ಶಕರು ಪಾಲ್ಗೊಂಡಿದ್ದರು. ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್, ಎಐ ಆಕ್ಸಿಲರೇಟರ್‌ಗಳು ಮತ್ತು ಕ್ವಾಂಟಮ್-ಕ್ಲಾಸಿಕಲ್ ಹೈಬ್ರಿಡ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಅತ್ಯಾಧು ನಿಕ ಆವಿಷ್ಕಾರಗಳನ್ನು ಇಲ್ಲಿ ಪ್ರದರ್ಶಿಸಿದರು. ಕ್ವಾಂಟಮ್ ಕಂಪ್ಯೂಟಿಂಗ್ ಹಾಗೂ ಎಆರ್/ವಿಆರ್ ತಂತ್ರಜ್ಞಾನಗಳ ಪ್ರದರ್ಶನದ ಮೂಲಕ ಈ ಮೇಳದಲ್ಲಿ ಎಂಐಟಿ ಮಳಿಗೆ ವಿದ್ಯಾರ್ಥಿಗಳ ಗಮನ ಸೆಳೆಯಿತು. ಸಂಸ್ಥೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ಸೌಲಭ್ಯಗಳು ಹಾಗೂ ತಂತ್ರಜ್ಞಾನ ಕ್ಷೇತ್ರ ದಲ್ಲಿ ಎಂಐಟಿ ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುತ್ತಿತ್ತು.

ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

ಉದ್ಯಮಿಗಳು, ಸಂಶೋಧಕರು ಮತ್ತು ನವೋದ್ಯಮಿಗಳೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಲು ಈ ಮೇಳ ಉತ್ತಮ ವೇದಿಕೆಯಾಯಿತು. ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಪ್ರಸ್ತುತ ಸವಾಲುಗಳ ಕುರಿತು ನೇರ ಒಳನೋಟಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಸಾಧ್ಯವಾಯಿತು. ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗದೆ, ಇದೊಂದು ಕ್ರಿಯಾತ್ಮಕ ಕಲಿಕಾ ಕೇಂದ್ರವಾಗಿ ರೂಪು ಗೊಂಡಿ ದ್ದು ವಿಶೇಷವಾಗಿತ್ತು. ಇದರೊಂದಿಗೆ, ಸಮ್ಮೇಳನದ ಭಾಗವಾಗಿ ನಡೆದ ಉಪನ್ಯಾಸಗಳು, ತಾಂತ್ರಿಕ ಗೋಷ್ಠಿಗಳು, ಸಂಶೋಧನಾ ಪ್ರಬಂಧ ಮಂಡನೆಗಳು ಅರ್ಥಪೂರ್ಣ ಚರ್ಚೆಗಳಿಗೆ ನಾಂದಿ ಹಾಡಿದವು.

ಸಮ್ಮೇಳನದ ಭಾಗವಾಗಿ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ಎಂಐಟಿಯ ಕ್ಯೂಸಿ (QC) ಸಲಹೆಗಾರ ಹಾಗೂ Qomputing.ai ಸಿಇಒ ಸೌರಭ್ ಶರ್ಮಾ ಅವರು ಸರಬರಾಜು ಸರಪಳಿ, ಹಣಕಾಸು ಮತ್ತು ಮಷಿನ್ ಲರ್ನಿಂಗ್‌ ಕ್ಷೇತ್ರಗಳಲ್ಲಿ ಕ್ವಾಂಟಮ್ ಅಲ್ಗಾರಿದಮ್‌ ವಿಷಯದ ಕುರಿತು, ಎಂಐಟಿಯ ಸಹಾಯಕ ಪ್ರಾಧ್ಯಾಪಕ (ಸಂಶೋಧನೆ) ಡಾ. ಅರುಪ್ ಭೌಮಿಕ್ ಅವರು 'ರಿಡ್‌ಬರ್ಗ್ ಕ್ವಾಂಟಮ್ ಆಪ್ಟಿಕ್ಸ್' ಕುರಿತು, ಡಾ. ಶ್ರಾವಣಿ ವೇಮುಲಪಲ್ಲಿ ಹಾಗೂ ಅವರ ತಂಡವು 'ಆಟೋನೊಮಸ್ ಮೊಬಿಲಿಟಿʼ ವಿಷಯದ ಕುರಿತು ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್‌ನ ಸಹಾಯಕ ಪ್ರಾಧ್ಯಾಪಕ ಡಾ. ವಿಶ್ವಾಸ್ ಜಿ. ಕಿಣಿ ಅವರು ಮುಂದಿನ ಕಂಪ್ಯೂಟಿಂಗ್ ಕ್ರಾಂತಿಗೆ 'ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ವರ್ಚುವಲ್ ರಿಯಾಲಿಟಿ' ಹೇಗೆ ಹೊಸ ಇಂಟರ್‌ಫೇಸ್ ಆಗಲಿದೆ ಎಂಬ ವಿಷಯದ ಕುರಿತು ಮಾತನಾಡಿದರು.

ಮಾಹೆ ಬೆಂಗಳೂರು ಹಾಗೂ ಎಂಎಲ್‌ಎಚ್‌ಎಸ್‌ನ ಸಹ ಕುಲಪತಿ ಪ್ರೊ. ಮಧು ವೀರರಾಘವನ್ ಅವರು ಮಾತನಾಡಿ, ʼಸೂಪರ್‌ಕಂಪ್ಯೂಟಿಂಗ್ ಇಂಡಿಯಾ-2025 ಸಮ್ಮೇಳನದ ಭಾಗವಾಗಿರುವುದು, ಈ ಕ್ಯಾಂಪಸ್ ಅನ್ನು ಭವಿಷ್ಯದ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಪ್ರೇರಕ ಶಕ್ತಿಯನ್ನಾಗಿ ರೂಪಿಸುವ ಬಗೆಗೆ ಮಾಹೆ ಬೆಂಗಳೂರು ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸಿತು. ಶಿಕ್ಷಣ ಕ್ಷೇತ್ರ, ಉದ್ಯಮ ಮತ್ತು ಸರ್ಕಾರವನ್ನು ಒಂದೇ ವೇದಿಕೆಗೆ ತರುವ ಮೂಲಕ, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ನೈಜ ಜಗತ್ತಿನ ಸವಾಲುಗಳು, ಅತ್ಯಾಧುನಿಕ ತಂತ್ರಜ್ಞಾನಗಳು ಹಾಗೂ ಜಾಗತಿಕ ಸಹಯೋಗದ ಅನುಭವ ನೀಡುವಂತಹ ಅರ್ಥಪೂರ್ಣ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆʼ ಎಂದರು.

ಮಾಹೆ ಬೆಂಗಳೂರಿನ ಎಂಐಟಿ ನಿರ್ದೇಶಕ ಡಾ.ಐವನ್ ಜೋಸ್ ಮಾತನಾಡಿ, ʼಇಂತಹ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಎಂಐಟಿ ಬೆಂಗಳೂರನ್ನು ಆಯ್ಕೆ ಮಾಡಿದ್ದಕ್ಕಾಗಿ ಸಿ-ಡಾಕ್ (C-DAC) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ (MeitY) ಧನ್ಯವಾದಗಳು. ಮುಂಚೂ ಣಿ ತಂತ್ರಜ್ಞಾನಗಳಲ್ಲಿ ಆವಿಷ್ಕಾರ, ಜ್ಞಾನ ವಿನಿಮಯ ಮತ್ತು ಸಹಯೋಗಕ್ಕೆ SCI2025 ಒಂದು ಮಹತ್ವದ ವೇದಿಕೆಯಾಯಿತು. ಈ ಬೃಹತ್ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಯಲು ಕಾರಣರಾದ ಎಲ್ಲರಿಗೂ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ನಮ್ಮ ವಿದ್ಯಾರ್ಥಿ ಗಳಿಗೆ ಅನುಕೂಲವಾಗುವ ಇದೇ ರೀತಿಯ ಇನ್ನಷ್ಟು ಕಾರ್ಯಕಮಗಳನ್ನು ಆಯೋಜಿಸುವ ಗುರಿಯನ್ನು ಎಂಐಟಿ ಹೊಂದಿದೆʼ ಎಂದು ಹೇಳಿದರು.

SCI 2025 ಸಮ್ಮೇಳನದ ಯಶಸ್ಸು, ಭಾರತದ ತಾಂತ್ರಿಕ ಸಾಮರ್ಥ್ಯಗಳನ್ನು ವೃದ್ಧಿಸುವಲ್ಲಿ ಶಿಕ್ಷಣ ಕ್ಷೇತ್ರ, ಉದ್ಯಮ ಮತ್ತು ಸರ್ಕಾರದ ನಡುವಿನ ಸಹಯೋಗವನ್ನು ಎತ್ತಿ ತೋರಿಸುತ್ತದೆ. ಅಷ್ಟೇ ಅಲ್ಲದೆ, SCI2025 ರಂತಹ ವೇದಿಕೆಗಳು ಆವಿಷ್ಕಾರಗಳಿಗೆ ವೇಗ ನೀಡುವುದು ಮತ್ತು ಭಾರತದಲ್ಲಿ ತಂತ್ರಜ್ಞಾನದ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಭರವಸೆ ಮೂಡಿಸುತ್ತವೆ.

*

  • ಜಗತ್ತಿನಾದ್ಯಂತದ ವಿವಿಧ ಸಂಸ್ಥೆಗಳ ಸಂಶೋಧಕರು, ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳು ಸೇರಿದಂತೆ 2,500ಕ್ಕೂ ಹೆಚ್ಚು ಜನ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
  • ವಿವಿಡಿಎನ್, ಡೆಲ್, ಎಚ್‌ಪಿಇ ಹಾಗೂ ವೆಸ್ಟರ್ನ್ ಡಿಜಿಟಲ್‌ನಂತಹ ಪ್ರಮುಖ ಕಂಪನಿಗಳು ಸೇರಿದಂತೆ ಒಟ್ಟು 187 ಪ್ರದರ್ಶಕರು ಈ ಎಕ್ಸ್‌ಪೋದಲ್ಲಿ ಪಾಲ್ಗೊಂಡಿದ್ದರು.