MLA SN Subbareddy: ಶೀಘ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಲು 2 ಕೋಟಿ ಬಿಡುಗಡೆ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
ಅನೇಕ ವರ್ಷಗಳಿಂದ ತಾಲ್ಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ದಲಿತಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದೆ. ಆದರೆ ಅಂಬೇಡ್ಕರ್ ಭವನ ನಿರ್ಮಾಣ ಆಗಿಲ್ಲ. ಅಂಬೇಡ್ಕರ್ ಭವನ ನಿರ್ಮಾಣ ಬಗ್ಗೆ ವಿಧಾನ ಸಭೆಯಲ್ಲಿ ಅಧಿವೇಶನ ದಲ್ಲಿ ಪ್ರಸ್ತಾಪಿಸುವಂತೆ ಶಾಸಕರಿಗೆ ಮನವಿ ಮಾಡಿದರು
-
ಬಾಗೇಪಲ್ಲಿ: ತಾಲ್ಲೂಕು ಕೇಂದ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು. ಗುರ್ರಾಲದಿನ್ನೆ ಗ್ರಾಮದ ಬಳಿಯ ಹಜರತ್ ಉಸ್ಮಾನ್ ಷಾ ಆಸ್ತಾನದ ದರ್ಗಾಕ್ಕೆ ಅನುದಾನ ಕಲ್ಪಿಸ ಬೇಕು ಎಂದು ಒತ್ತಾಯಿಸಿ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆ ಮುಖಂಡರು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ(MLA SN Subbareddy)ಗೆ ಮನವಿ ಪತ್ರ ಸಲ್ಲಿಸಿದರು.
ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಸೇನೆಯ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಅನೇಕ ವರ್ಷಗಳಿಂದ ತಾಲ್ಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ದಲಿತಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದೆ. ಆದರೆ ಅಂಬೇಡ್ಕರ್ ಭವನ ನಿರ್ಮಾಣ ಆಗಿಲ್ಲ. ಅಂಬೇಡ್ಕರ್ ಭವನ ನಿರ್ಮಾಣ ಬಗ್ಗೆ ವಿಧಾನ ಸಭೆಯಲ್ಲಿ ಅಧಿವೇಶನ ದಲ್ಲಿ ಪ್ರಸ್ತಾಪಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ತಾಲ್ಲೂಕಿನ ಕಸಬಾ ಗೆ ಸೇರಿದ ಗುರ್ರಾಲದಿನ್ನೆ ಗ್ರಾಮದ ಬಳಿಯ ಹಜರತ್ ಉಸ್ಮಾನ್ ಷಾ ಆಸ್ತಾನ ದರ್ಗಾಗೆ ಕುಡಿಯುವ ನೀರು, ರಸ್ತೆ, ಕಟ್ಟಡ ನಿರ್ಮಾಣ, ವಿದ್ಯುತ್, ಸಿ.ಸಿ ರಸ್ತೆ ಕಾಮಗಾರಿ ಮಾಡಿಸ ಬೇಕು. ಪೆನುಮಲ ಗ್ರಾಮದಿಂದ ಸಿದ್ದನಪಲ್ಲಿ, ಕಾಗಾನಪಲ್ಲಿ, ಮೈನಗಾನಪಲ್ಲಿ ಗ್ರಾಮದವರೆಗೆ ರಸ್ತೆ ನಿರ್ಮಾಣ ಮಾಡಿಸಲು ಪಟ್ಟಣದ ಶಾಸಕರ ಸ್ವಗೃಹದಲ್ಲಿ ಮಹಾನಾಯಕ ಡಾ.ಬಿ.ಆರ್. ಅಂಬೇ ಡ್ಕರ್ ಸೇನೆ ಮುಖಂಡರು ಶಾಸಕ ಎಸ್‌ಎನ್‌ಸುಬ್ಬಾರೆಡ್ಡಿಗೆ ಮನವಿ ಸಲ್ಲಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ನಿರ್ಮಾಣ ಮಾಡಬೇಕು ಎಂದು ಯಲ್ಲಂಪಲ್ಲಿ ಗ್ರಾಮದಲ್ಲಿ ಭವನಕ್ಕೆ ಅನ್ವೇಷಣೆ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆಂದ ಅವರು ಇದಕ್ಕಾಗಿ 12 ಲಕ್ಷ ಅನುದಾನ ನೀಡಿದ್ದೇವೆ ಎಂದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರತಿಕ್ರಿಯಿಸಿ, ತಾಲ್ಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನದ ಜತೆಗೆ ಡಾ.ಬಿ.ಅಂಬೇಡ್ಕರ್ ಅಧ್ಯಯನ ಕೇಂದ್ರ ಮಾಡಬೇಕು ಎಂದು ಗುರಿ ಇದೆ. ಇದರಿಂದ ಭವನದ ಜತೆಗೆ ಅಧ್ಯಯನ ಕೇಂದ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರದ ಕಾರ್ಯ-ದರ್ಶಿಗಳ ಬಳಿ ಕಡತ ಇವೆ. ಶೀಘ್ರವೇ ಹಣಕಾಸಿನ ಅನುಮೋದನೆ ಆಗಿ, ಸರ್ಕಾರದಿಂದ ಅಧಿಕೃತವಾಗಿ ಡಾ. ಬಿ ಆರ್ ಅಂಬೇಡ್ಕರ್ ಭವನ ಮತ್ತು ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ ಅನುದಾನ ಬಿಡುಗಡೆ ಆಗಲಿದೆ ಎಂದರು.
ಗರ‍್ರಾಲದಿನ್ನೆ ಗ್ರಾಮಕ್ಕೆ ದರ್ಗಾ, ಮೇಲಿನ ಗ್ರಾಮಗಳಿಗೆ ರಸ್ತೆ, ಸಮುದಾಯ ಭವನಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಇದೇ ವೇಳೆ ಶಾಸಕರು ಭರವಸೆ ಕೊಟ್ಟರು.
ಈ ವೇಳೆ ಜಿಲ್ಲಾ ಮಹಿಳಾ ಅಧ್ಯಕ್ಷೆ ಎನ್. ರೂಪ, ತಾಲ್ಲೂಕು ಮಹಿಳಾ ಅಧ್ಯಕ್ಷೆ ಗಂಗುಲಮ್ಮ, ತಾಲ್ಲೂಕು ಕಾರ್ಯದರ್ಶಿ ಮಂಜುನಾಥ ನಾಯಕ, ತಾಲ್ಲೂಕು ಉಪಾಧ್ಯಕ್ಷ ಎನ್.ಶ್ರೀನಿವಾಸ್, ಎ.ಅರ್.ರುಣ್‌ಕುಮಾರ್, ಬಂಡಿನರಸಿAಹಪ್ಪ, ಪೆನುಮಲನರಸಿಂಹಪ್ಪ, ಎಂ.ಆರ್. ನರಸಿಂಹ ಮೂರ್ತಿ, ಅಸ್ಲಾಂ ಅಲಿಷಾ, ಪಿ.ಎನ್.ಗಂಗರಾಜು, ಬಾಬು ಅಲಿಷಾ, ಎ.ಎನ್.ಅಶ್ವಿನಿ, ರಮಾದೇವಿ, ರಾಮು ಇತರರು ಹಾಜರಿದ್ದರು.