ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕನ್ನಡಿಗ ಎಚ್‌ ಪಿ ನೀಲೇಶ್‌ ʼಪರ್ವ ಗ್ರೂಪ್‌ʼಗೆ ಮಹೇಶ್‌ ಭೂಪತಿ ಸಾಥ್‌!

ಭಾರತದ ಟೆನಿಸ್‌ ದಂತಕತೆ ಮಹೇಶ ಭೂಪತಿ ಅವರು ದುಬೈನ ಪರ್ವ ಗ್ರೂಪ್‌ ಜೊತೆ ಉದ್ಯಮದಲ್ಲಿ ಕೈ ಜೋಡಿಸಿದ್ದಾರೆ. ಪರ್ವ ಗ್ರೂಪ್‌ ಹೆಮ್ಮೆಯ ಕನ್ನಡಿಗ ಎಚ್‌ ಪಿ ನೀಲೇಶ್‌ ಅವರು ರೂಪಿಸಿರುವ ಸಂಸ್ಥೆಯಾಗಿದೆ. ಎಚ್‌ ಪಿ ನೀಲೇಶ್‌ ಅವರು ದುಬೈನಲ್ಲಿ ರಿಯಲ್‌ ಎಸ್ಟೇಟ್‌ ಸೇರಿದಂತೆ ಹಲವು ಯಶಸ್ವಿ ಉದ್ಯಮಗಳನ್ನು ನಡೆಸುತ್ತಿದ್ದಾರೆ.

ಕನ್ನಡಿಗ ಎಚ್‌ ಪಿ ನೀಲೇಶ್‌ ʼಪರ್ವ ಗ್ರೂಪ್‌ʼಗೆ ಮಹೇಶ್‌ ಭೂಪತಿ ಸಾಥ್‌!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 13, 2026 4:19 PM

ಬೆಂಗಳೂರು: ಭಾರತದ ಟೆನಿಸ್‌ ದಂತಕತೆ ಮಹೇಶ ಭೂಪತಿ (Mahesh Bhupathi) ಅವರು ದುಬೈನ ಪರ್ವ ಗ್ರೂಪ್‌ ಜೊತೆ ಉದ್ಯಮದಲ್ಲಿ ಕೈ ಜೋಡಿಸಿದ್ದಾರೆ. ಪರ್ವ ಗ್ರೂಪ್‌ ಹೆಮ್ಮೆಯ ಕನ್ನಡಿಗ ಎಚ್‌ ಪಿ ನೀಲೇಶ್‌ ಅವರು ರೂಪಿಸಿರುವ ಸಂಸ್ಥೆಯಾಗಿದೆ. ಎಚ್‌ ಪಿ ನೀಲೇಶ್‌ ಅವರು ದುಬೈನಲ್ಲಿ ರಿಯಲ್‌ ಎಸ್ಟೇಟ್‌ ಸೇರಿದಂತೆ ಹಲವು ಯಶಸ್ವಿ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಇದೀಗ ಪರ್ವ ಗ್ರೂಪ್‌ ಜತೆ ಮಹೇಶ ಭೂಪತಿ ಅವರು ಜತೆಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ನವೆಂಬರ್‌ 14ರಂದು ಶನಿವಾರ ಸಂಜೆ 6 ಗಂಟೆಗೆ ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಪರ್ವ ಗ್ರೂಪ್‌ಗೆ ಮಹೇಶ ಭೂಪತಿ ಅವರನ್ನು ವಿಧ್ಯುಕ್ತವಾಗಿ ಬರಮಾಡಿಕೊಳ್ಳಲಾಗುತ್ತದೆ. ಈ ವಿಶೇಷ ಸಮಾರಂಭಕ್ಕೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್‌, ದುಬೈನ ಫಾರ್ಚೂನ್‌ ಗ್ರೂಪ್‌ ರೂವಾರಿ ಪ್ರವೀಣ್‌ ಶೆಟ್ಟಿ ಸೇರಿದಂತೆ ಹಲವು ಉದ್ಯಮಿಗಳು ಭಾಗವಹಿಸಿ ಶುಭ ಕೋರಲಿದ್ದಾರೆ.

ತುಮಕೂರು ಮೂಲದ ಎಚ್‌.ಪಿ. ನೀಲೇಶ್‌ ಅವರು ಪರ್ವ ಗ್ರೂಪ್‌ ಸಂಸ್ಥೆಯ ಅಡಿ ರಿಯಲ್‌ ಎಸ್ಟೇಟ್‌, ನಿರ್ಮಾಣ-ನಿರ್ವಹಣೆ, ಆರೋಗ್ಯ ಪೇಯ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಾರುಕಟ್ಟೆಯ ವ್ಯವಹಾರಗಳಲ್ಲಿ ತೊಡಗಿದ್ದಾರೆ. ದುಬೈನ ರಿಯಲ್‌ ಎಸ್ಟೇಟ್‌ ವಹಿವಾಟಿನ ಜತೆ ಬೆಂಗಳೂರಿಗೆ ನಂಟು ಕಲ್ಪಿಸಿದ್ದಾರೆ. ಇದೀಗ ಮಹೇಶ ಭೂಪತಿ ಅವರ ಜೊತೆ ಸೇರಿ ವ್ಯವಹಾರಗಳನ್ನು ವಿಸ್ತರಿಸುವ, ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

PARVA Group Property Expo: 'ಪರ್ವ' ಗ್ರೂಪ್‌‌ನ ದುಬೈ ಪ್ರಾಪರ್ಟಿ ಎಕ್ಸ್‌‌ಪೋಗೆ ಚಾಲನೆ; ಭಾನುವಾರವೂ ಮುಂದುವರಿಯಲಿದೆ

ಅಂತಾರಾಷ್ಟ್ರೀಯ ಖ್ಯಾತಿಯ ಟೆನಿಸ್‌ ಆಟಗಾರ ಆಗಿರುವ ಮಹೇಶ್‌ ಭೂಪತಿ ಅವರು 12 ಬಾರಿ ಗ್ರ್ಯಾಂಡ್‌ ಸ್ಲಾಮ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದವರು. ಈಗ ಕನ್ನಡಿಗ ಎಚ್‌.ಪಿ. ನೀಲೇಶ್‌ ಅವರ ಪರ್ವ ಗ್ರೂಪ್‌ಗೆ ಸಾಥ್‌ ನೀಡಿರುವುದು ಉದ್ಯಮ ವಲಯದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಇದು ಕನ್ನಡಿಗರಿಗೆ ಉದ್ಯೋಗಾವಕಾಶ ಸೃಷ್ಟಿಸಲೂ ನೆರವಾಗಲಿದೆ.