ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಾಡರ್‌ನಿಂದ ಕರ್ನಾಟಕದಾದ್ಯಂತ 5,000 ಗಿಡಗಳ ನೆಡುವ ಯೋಜನೆ

‘ಪ್ರಾರಂಭಿಕ ಹಂತದಲ್ಲಿ ಚಿಕ್ಕಮಗಳೂರು, ಕೊಪ್ಪಳ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆ ಗಿಡ ನೆಡುವಿಕೆಯನ್ನು ಕೈಗೊಳ್ಳಲಾಗುವುದು. ಜುಲೈ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ’ ಎಂದು ಮಾಡರ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎರಿಕ್ ಆಂಡರ್ಸನ್ ತಿಳಿಸಿದ್ದಾರೆ.

ಮಾಡರ್‌ನಿಂದ ಕರ್ನಾಟಕದಾದ್ಯಂತ 5,000 ಗಿಡಗಳ ನೆಡುವ ಯೋಜನೆ

-

Profile
Ashok Nayak May 1, 2026 5:57 PM

ಬೆಂಗಳೂರು: ಯುಎಸ್ ಮೂಲದ ತಂತ್ರಜ್ಞಾನ ಸಂಸ್ಥೆ ಮಾಡರ್, ರಾಜ್ಯದ ವಿವಿಧ ಜಿಲ್ಲೆ ಗಳಲ್ಲಿ ಮುಂದಿನ 5 ವರ್ಷಗಳಲ್ಲಿ ಸುಮಾರು 5,000 ಸಸಿಗಳನ್ನು ನೆಡುವ ಅಭಿಯಾನ ಕೈಗೊಳ್ಳಲಿದೆ. ಬೆಂಗಳೂರಿನಲ್ಲಿ ಕಾರ್ಯಚಟುವಟಿಕೆ ಹೊಂದಿರುವ ಕಂಪನಿ, ಈ ಮೂಲಕ ರಾಜ್ಯದಲ್ಲಿ ಹಸಿರು ಸಂಪತ್ತನ್ನು ಹೆಚ್ಚಿಸುವ ಗುರಿ ಹೊಂದಿದೆ.

ಇದನ್ನೂ ಓದಿ: Bangalore News: ರಿಯಾ ಡೈಮಂಡ್ಸ್ ಬೆಂಗಳೂರಿನಲ್ಲಿ ಭಾರತದ ಮೊದಲ ಪ್ರಯೋಗಾಲಯದಲ್ಲಿ ಬೆಳೆದ ವಜ್ರ ನಿಶ್ಚಿತಾರ್ಥ ಉಂಗುರ ಸ್ಟುಡಿಯೋ ಪ್ರಾರಂಭ

ಈ ಮೂಲಕ ತನ್ನ ಸಮುದಾಯಗಳು ಮತ್ತು ಉದ್ಯೋಗಿಗಳನ್ನು ಪರಿಸರ ಉಳಿಸುವ ಕಾರ್ಯದಲ್ಲಿ ತೊಡಗಿಸಲಿದೆ. ‘ಪ್ರಾರಂಭಿಕ ಹಂತದಲ್ಲಿ ಚಿಕ್ಕಮಗಳೂರು, ಕೊಪ್ಪಳ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆ ಗಿಡ ನೆಡುವಿಕೆಯನ್ನು ಕೈಗೊಳ್ಳಲಾಗುವುದು. ಜುಲೈ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ’ ಎಂದು ಮಾಡರ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎರಿಕ್ ಆಂಡರ್ಸನ್ ತಿಳಿಸಿದ್ದಾರೆ.

2021ರಲ್ಲಿ ಸ್ಥಾಪನೆಯಾದ ಮಾಡರ್, ಜಾಗತಿಕವಾಗಿ 7,400 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, 5,000 ಕ್ಕೂ ಹೆಚ್ಚು ಜನ ಭಾರತದಲ್ಲಿ ನೆಲೆಸಿದ್ದಾರೆ.