ಅರಮನೆ ಮೈದಾನದಲ್ಲಿ ಜ.29 ರಿಂದ ಫೆ.1ರವರೆಗೆ ರಾಷ್ಟ್ರಮಟ್ಟದ ‘ವಿವೇಕ ದೀಪ್ತಿ’ ಆಯೋಜನೆ
ದಕ್ಷಿಣಾಸ್ಯ ದರ್ಶಿನಿ – ಆದಿ ಶಂಕರಾಚಾರ್ಯರು ರಚಿಸಿದ ಶ್ರೀ ದಕ್ಷಿಣಾಮೂರ್ತಿ ಅಷ್ಟಕದ ತತ್ತ್ವೋ ಪದೇಶಗಳನ್ನು ವಿದ್ಯಾರ್ಥಿಗಳ ನೇತೃತ್ವದ ವೈಜ್ಞಾನಿಕ ಪ್ರಯೋಗಗಳು, ಸಂವಾದಾತ್ಮಕ ಸ್ಥಾಪನೆಗಳು ಮತ್ತು ಅನುಭವಾತ್ಮಕ ಕಲಿಕಾ ಮಾದರಿಗಳ ಮೂಲಕ ವಿವರಿಸುವ ವಿಶಾಲ ಪ್ರದರ್ಶನ. ಗಂಭೀರ ತತ್ತ್ವಚಿಂತನೆಗಳನ್ನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾಮಾನ್ಯ ಜನರಿಗೆ ಸುಲಭವಾಗಿ ಗ್ರಹಿಸುವಂತೆ ಮತ್ತು ಆಕರ್ಷಕವಾಗಿ ರೂಪಿಸುವ ಉದ್ದೇಶದಿಂದ ಈ ಪ್ರದರ್ಶನ ವಿನ್ಯಾಸಗೊಳಿಸಲಾಗಿದೆ.
-
ಬೆಂಗಳೂರು: ಅಧ್ಯಯನ ಮತ್ತು ಸಂಶೋಧನೆಗೆ ಸಮರ್ಪಿತ ವೇದಾಂತ ಭಾರತಿ “ವಿವೇಕ ದೀಪ್ತಿ” ಎಂಬ ರಾಷ್ಟ್ರಮಟ್ಟದ, ಅನುಸಂಧಾನಾಧಾರಿತ ಶೈಕ್ಷಣಿಕ ಉಪಕ್ರಮವನ್ನು ಘೋಷಿಸಿದೆ.
ಭಾರತದ ಜ್ಞಾನ ಪರಂಪರೆಯ ಆಧಾರದ ಮೇಲೆ ಅನುಭವಾತ್ಮಕ ಕಲಿಕೆ, ವೈಜ್ಞಾನಿಕ ಅನ್ವೇಷಣೆ ಹಾಗೂ ಸಮೂಹ ಚಿಂತನೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಈ ನಾಲ್ಕು ದಿನಗಳ ಕಾರ್ಯಕ್ರಮ ಜ.29ರಿಂದ ಫೆಬ್ರವರಿ 1ರವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯ ಲಿದೆ. ವಿದ್ಯಾರ್ಥಿಗಳ ನೇತೃತ್ವದ ಅನುಭವಾತ್ಮಕ ಪ್ರದರ್ಶನವಾದ ದಕ್ಷಿಣಾಸ್ಯ ದರ್ಶಿನಿ ಹಾಗೂ ಮೂರನೇ ದಿನ ನಡೆಯುವ ಸಮೂಹ ಮಹಾಸಮರ್ಪಣೆ ಪ್ರಮುಖ ಆಕರ್ಷಣೆಗಳಾಗಿವೆ.
ದಕ್ಷಿಣಾಸ್ಯ ದರ್ಶಿನಿ – ಆದಿ ಶಂಕರಾಚಾರ್ಯರು ರಚಿಸಿದ ಶ್ರೀ ದಕ್ಷಿಣಾಮೂರ್ತಿ ಅಷ್ಟಕದ ತತ್ತ್ವೋ ಪದೇಶಗಳನ್ನು ವಿದ್ಯಾರ್ಥಿಗಳ ನೇತೃತ್ವದ ವೈಜ್ಞಾನಿಕ ಪ್ರಯೋಗಗಳು, ಸಂವಾದಾತ್ಮಕ ಸ್ಥಾಪನೆಗಳು ಮತ್ತು ಅನುಭವಾತ್ಮಕ ಕಲಿಕಾ ಮಾದರಿಗಳ ಮೂಲಕ ವಿವರಿಸುವ ವಿಶಾಲ ಪ್ರದರ್ಶನ. ಗಂಭೀರ ತತ್ತ್ವಚಿಂತನೆಗಳನ್ನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾಮಾನ್ಯ ಜನರಿಗೆ ಸುಲಭವಾಗಿ ಗ್ರಹಿಸು ವಂತೆ ಮತ್ತು ಆಕರ್ಷಕವಾಗಿ ರೂಪಿಸುವ ಉದ್ದೇಶದಿಂದ ಈ ಪ್ರದರ್ಶನ ವಿನ್ಯಾಸಗೊಳಿಸಲಾಗಿದೆ. ಜ. 31 ರ ಶನಿವಾರ ದಕ್ಷಿಣಾಮೂರ್ತಿ ಅಷ್ಟಕ – ಸ್ತೋತ್ರ ಮಹಾಸಮರ್ಪಣೆ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: Bangalore News: 21ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಐಐಎಚ್‌ಎಮ್‌ಆರ್ ಮಾಜಿ ವಿದ್ಯಾರ್ಥಿಗಳ ಸಭೆ
ಈ ಕಾರ್ಯಕ್ರಮವು ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಪೀಠಾಧಿಪತಿ ಭಾರತಿ ತೀರ್ಥ ಸ್ವಾಮೀಜಿ ಹಾಗೂ ಅವರ ಉತ್ತರಾಧಿಕಾರಿ ವಿಧುಶೇಖರ ಭಾರತಿ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ. ಇದೇ ವೇಳೆ, ಯಡತೊರೆ ಮಠದ ಡಾ. ಶಂಕರ ಭಾರತಿ ಮಹಾ ಸ್ವಾಮೀಜಿ ಹಾಗೂ ಅವರ ಉತ್ತರಾಧಿಕಾರಿ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ಆಧುನಿಕ ವೈಜ್ಞಾನಿಕ ಅನ್ವೇಷಣೆ ಮತ್ತು ಶಿಕ್ಷಣ ಪದ್ಧತಿ ಗಳೊಂದಿಗೆ ಸಂಯೋಜಿಸುವ ಮೂಲಕ ಯುವ ಸಮೂಹದಲ್ಲಿ ಚಿಂತನಾ ಸ್ಪಷ್ಟತೆ, ವಿವೇಕ ಹಾಗೂ ಆಳವಾದ ಅನುಸಂಧಾನ ಮನೋಭಾವವನ್ನು ಬೆಳೆಸುವುದು ವಿವೇಕ ದೀಪ್ತಿಯ ಮುಖ್ಯ ಉದ್ದೇಶ ವಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಈ ಉಪಕ್ರಮದಲ್ಲಿ ಭಾಗವಹಿ ಸುವ ನಿರೀಕ್ಷೆಯಿದ್ದು, ರಾಷ್ಟ್ರಮಟ್ಟದ ಏಕತೆ ಮತ್ತು ಹಂಚಿಕೆಯ ಬೌದ್ಧಿಕ ಪರಂಪರೆಯ ಭಾವನೆ ಯನ್ನು ಬೆಳೆಸಲಿದೆ. ಈ ಯೋಜನೆಯ ಮೊದಲ ನಗರವಾಗಿ ಬೆಂಗಳೂರು ಆಯ್ಕೆಯಾಗಿದ್ದು, ಮುಂದಿನ 8–10 ವರ್ಷಗಳಲ್ಲಿ ಭಾರತದ ವಿವಿಧ ನಗರಗಳು ಮತ್ತು ಪ್ರದೇಶಗಳಿಗೆ ಈ ಉಪಕ್ರಮ ವಿಸ್ತರಿಸುವ ಗುರಿ ಹೊಂದಲಾಗಿದೆ.
ನಾಲ್ಕು ದಿನಗಳ ಕಾಲ ನಡೆಯುವ ಪ್ರದರ್ಶನ ಮತ್ತು ಸಂಬಂಧಿತ ಕಾರ್ಯಕ್ರಮಗಳು ಅಪಾರ ಸಂಖ್ಯೆಯ ವಿದ್ಯಾರ್ಥಿಗಳು, ಶಿಕ್ಷಕರು, ಕುಟುಂಬಗಳು ಮತ್ತು ಸಾರ್ವಜನಿಕರನ್ನು ಆಕರ್ಷಿಸುವ ನಿರೀಕ್ಷೆಯಿದ್ದು, ಜ್ಞಾನ, ಅನುಸಂಧಾನ ಮತ್ತು ಸಂವಾದದ ಮೂಲಕ ರಾಷ್ಟ್ರ ಏಕತೆಯ ಭಾವನೆ ಯನ್ನು ಬಲಪಡಿಸಲಿದೆ.