ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Cloudnine Hospital Case: ಅನಸ್ತೇಶಿಯಾ ಕೊಟ್ಟು ನಿರ್ಲಕ್ಷ್ಯ; ಕೋಮಾಗೆ ಜಾರಿದ ಮಗುವಿನ ಜವಾಬ್ದಾರಿ ಕ್ಲೌಡ್ ನೈನ್ ಆಸ್ಪತ್ರೆಯೇ ಹೊರಬೇಕು ಎಂದು ಎಚ್‌ಡಿಕೆ ಆಗ್ರಹ

ಮಂಡ್ಯ ಜಿಲ್ಲೆಯ ಕಟ್ಟೆ ದೊಡ್ಡಿ ಗ್ರಾಮದ ಸಂಪತ್ ಎಂಬುವವರ ಮಗು ಶಯಾನ್ ಅನಾರೋಗ್ಯದ ಕಾರಣಕ್ಕೆ ನಾಗರಭಾವಿಯ ಕ್ಲೌಡ್ ನೈನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಗುವಿಗೆ ಅಲ್ಲಿ ಅನಸ್ತೇಶಿಯಾ ಕೊಡಲಾಗಿದೆ. ಆದರ ಸೂಕ್ತ ಚಿಕಿತ್ಸೆ ನೀಡದೆ ಅವರು ನಿರ್ಲಕ್ಷ್ಯ ತೋರಿದ್ದು, ಮೂರೂವರೆ ತಿಂಗಳಿಂದ ಮಗು ಆಸ್ಪತ್ರೆಯಲ್ಲಿಯೇ ಇದೆ. ಆಸ್ಪತ್ರೆಯ ಆಡಳಿತ ಮಂಡಳಿ ಈ ನಿರ್ಲಕ್ಷ್ಯಕ್ಕೆ ಯಾವುದೇ ಜವಾಬ್ದಾರಿ ವಹಿಸಿಕೊಂಡಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಗುವಿನ ಜವಾಬ್ದಾರಿ ಕ್ಲೌಡ್ ನೈನ್ ಆಸ್ಪತ್ರೆ ಹೊರಬೇಕು: ಎಚ್‌ಡಿಕೆ ಆಗ್ರಹ

-

Prabhakara R
Prabhakara R Nov 7, 2026 7:37 PM

ಬೆಂಗಳೂರು, ಅಕ್ಟೋಬರ್ 7: ನಾಗರಭಾವಿಯ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ (Cloudnine Hospital Case) ಒಂದೂವರೆ ವರ್ಷದ ಮಗುವಿಗೆ ಅನಸ್ತೇಶಿಯಾ ಕೊಟ್ಟ ಪರಿಣಾಮ ಆ ಮಗು ತೀವ್ರ ಅನಾರೋಗ್ಯಕ್ಕೆ ಗುರಿಯಾಗಿದ್ದು, ಅದಕ್ಕೆ ಆಸ್ಪತ್ರೆ ಜವಾಬ್ದಾರಿ ವಹಿಸಿಕೊಂಡು ಮಗುವಿಗೆ ಚಿಕಿತ್ಸೆ ನೀಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಒತ್ತಾಯಿಸಿದರು.

ಮಂಡ್ಯ ಜಿಲ್ಲೆಯ ಕಟ್ಟೆ ದೊಡ್ಡಿ ಗ್ರಾಮದ ಸಂಪತ್ ಎಂಬುವವರ ಮಗು ಶಯಾನ್ ಅನಾರೋಗ್ಯದ ಕಾರಣಕ್ಕೆ ನಾಗರಭಾವಿಯ ಕ್ಲೌಡ್ ನೈನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಗುವಿಗೆ ಅಲ್ಲಿ ಅನಸ್ತೇಶಿಯಾ ಕೊಟ್ಟು ಆಸ್ಪತ್ರೆಗೆ ಕೊಡಲಾಗಿದೆ. ಸೂಕ್ತ ಚಿಕಿತ್ಸೆ ನೀಡದೆ ಅವರು ನಿರ್ಲಕ್ಷ್ಯ ತೋರಿ ಅನಸ್ತೇಶಿಯಾ ನೀಡಿದ್ದಾರೆ. ಮೂರೂವರೆ ತಿಂಗಳಿಂದ ಮಗು ಆಸ್ಪತ್ರೆಯಲ್ಲಿಯೇ ಇದೆ. ಆಸ್ಪತ್ರೆಯ ಆಡಳಿತ ಮಂಡಳಿ ಈ ನಿರ್ಲಕ್ಷ್ಯಕ್ಕೆ ಯಾವುದೇ ಜವಾಬ್ದಾರಿ ವಹಿಸಿಕೊಂಡಿಲ್ಲ.

ರಾಜ್ಯದ ಆರೋಗ್ಯ ಸಚಿವರು ಇಂತಹ ಆಸ್ಪತ್ರೆಗಳ ಮೇಲೆ ನಿಗಾ ಇಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇಂತಹ ಆಸ್ಪತ್ರೆಗಳ ಕಡೆ ಸರಕಾರ ಗಮನ ಕೊಟ್ಟು ಕ್ರಮ ವಹಿಸಬೇಕು. ಕ್ಲೌಡ್ ನೈನ್ ಆಸ್ಪತ್ರೆಗೆ ಜವಾಬ್ದಾರಿ ಇಲ್ಲವಾ? ಆಸ್ಪತ್ರೆಯವರು ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಕೊಡಬೇಕು. ಇಲ್ಲವೇ ಸರ್ಕಾರವಾದರೂ ಈ ಮಗುವಿನ ಚಿಕಿತ್ಸೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಆಸ್ಪತ್ರೆಯ ಆಡಳಿತ ಮಂಡಳಿ ತೋರುತ್ತಿರುವ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ನಿಮ್ಮ ಅಸಡ್ಡೆಯಿಂದ ಮಗುವಿನ ತಂದೆ, ತಾಯಿ ರಸ್ತೆಯಲ್ಲಿ ಮಲಗಿದ್ದಾರೆ. ಕೂಡಲೇ ಸಮಸ್ಯೆ ಸರಿಪಡಿಸಿ. ಇಲ್ಲವಾದರೆ ನಾನೇ ಆಸ್ಪತ್ರೆಗೆ ಬರಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.

ಆಸ್ಪತ್ರೆ ವಿರುದ್ಧದ ಆರೋಪ ಏನು?

ಕಿವಿ ಗಾಯದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕಟ್ಟೆ ದೊಡ್ಡಿ ಗ್ರಾಮದ ಸಂಪತ್ ಎಂಬುವವರ ಒಂದು ವರ್ಷದ ಮಗು ಶಯಾನ್‌ನನ್ನು ನಾಗರಬಾವಿ ಕ್ಲೌಡ್‌ನೈನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಕಳೆದ ಮೂರು ತಿಂಗಳಿಂದ ಕೋಮಾದಲ್ಲಿರುವಂತಾಗಿದೆ ಎಂಬುವುದು ಪೋಷಕರ ಆರೋಪ. ಇದೇ ವಿಚಾರವಾಗಿ ಮಗುವಿನ ಪೋಷಕರು ಆಸ್ಪತ್ರೆ ಮುಂದೆ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಬಳಿಕ ವೈದ್ಯರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೆಎಂಸಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದರು. ದೂರಿನ ಬೆನ್ನಲ್ಲೇ ಸಿವಿ ರಾಮನ್ ಜನರಲ್ ಆಸ್ಪತ್ರೆಯ ಡಾ.ರಘುನಾಥ್ ನೇತೃತ್ವದ ವೈದ್ಯರ ತಂಡ ಆಸ್ಪತ್ರೆಗೆ ಭೇಟಿ ನೀಡಿತ್ತು. ಭೇಟಿ ವೇಳೆ ಮೇಲ್ನೋಟಕ್ಕೆ ವೈದ್ಯರ ಲೋಪ ಪತ್ತೆಯಾಗಿದೆ ಎನ್ನಲಾಗಿತ್ತು.

ಪೋಷಕರು ತಮ್ಮ ಮಗುವನ್ನು ಜೀವಂತವಾಗಿ ಕೊಡುವಂತೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ರಾತ್ರಿ ಹಗಲೆನ್ನದೆ ನಾಗರಬಾವಿ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಸಂಬಂಧಿಕರು ಧರಣಿ ನಡೆಸುತ್ತಿದ್ದಾರೆ. ಜತೆಗೆ ಮಗುವಿಗೆ ಅನಸ್ತೇಶಿಯಾ ಕೊಟ್ಟಿರುವ ಡಿಪ್ಲೋಮಾ ಪದವಿ ಅನಸ್ತ್ಯಾಲಜಿಸ್ಟ್ ಡಾ.ಚರಣ್ ವಿರುದ್ಧ ಶಿಸ್ತುಕ್ರಮ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪ್ರಸ್ತುತ ಮಗು ಕೋಮಾದಲ್ಲಿದೆ. ಮಗು ಕೋಮಾಗೆ ಜಾರುತ್ತಿದ್ದಂತೆಯೇ ವೈದ್ಯರ ಎಟವಟ್ಟು ಬಹಿರಂಗ ಆಗಿದೆ. ಈ ಹಿನ್ನೆಲೆಯಲ್ಲಿ ಮಗುವಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.