ಜೈಲಿನಲ್ಲಿದ್ದರೂ ಬಿಟ್ಟಿಲ್ಲ ಹಳೆ ಚಾಳಿ; ಸೀಜ್ ಮಾಡಿದ ಪ್ರಜ್ವಲ್ ಫೋನ್‌ನಲ್ಲಿ ಸಿಕ್ತು ಅಶ್ಲೀಲ ಚಿತ್ರ, ನಟಿಯರ ಅರೆಬೆತ್ತಲೆ ಫೋಟೋ!
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆ ಹಿನ್ನೆಲೆ ಸಿಸಿಬಿ ಪೊಲೀಸರ ತಂಡ ಸೋಮವಾರ ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸೆಲ್ ನಲ್ಲಿ ಮೊಬೈಲ್ ಪತ್ತೆಯಾಗಿದ್ದು ಇದೀಗ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದುಕೊಂಡೇ ಮೊಬೈಲ್ ಬಳಸುತ್ತಿರುವುದು -
ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara Jail) ಜೈಲಿನಲ್ಲಿ ಅಕ್ರಮ ಚಟುವಟಿಕೆ ಹಿನ್ನೆಲೆ ಸಿಸಿಬಿ ಪೊಲೀಸರ ತಂಡ ಸೋಮವಾರ ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಸೆಲ್ ನಲ್ಲಿ ಮೊಬೈಲ್ ಪತ್ತೆಯಾಗಿದ್ದು ಇದೀಗ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳು, ಪತ್ರಿಕೆಯಲ್ಲಿನ ಯುವತಿಯರ ಅಶ್ಲೀಲ ಫೋಟೋಗಳ ಕಟಿಂಗ್ ಗಳು ಪತ್ತೆಯಾಗಿವೆ.
ಸಿಸಿಬಿ ದಾಳಿ ವೇಳೆ ಜಪ್ತಿಯಾದ ಪೆನ್‌ಡ್ರೈವ್‌ನಲ್ಲಿ 70ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋಗಳು ಮತ್ತು ಪ್ರಜ್ವಲ್ ರೇವಣ್ಣ ಕೋಣೆಯಲ್ಲಿದ್ದ ಹಾಸಿಗೆ ಕೆಳಗೆ, ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ನಟಿಯರು ಹಾಗೂ ರೂಪದರ್ಶಿಗಳ ಅರೆನಗ್ನ ಫೋಟೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ರೇಡ್ ವೇಳೆ ಪ್ರಜ್ವಲ್ ಬ್ಯಾರಕ್‌ನಲ್ಲಿದ್ದ ಬಟ್ಟೆಗಳ ನಡುವೆ ಮೊಬೈಲ್, ಸ್ಯಾನ್‌ಡಿಸ್ಕ್ ಪೆನ್‌ಡ್ರೈವ್, ಚಾರ್ಜರ್ ಹಾಗೂ ನೀಲಿ ಬಣ್ಣದ ಪಾಕೆಟ್ ನೋಟ್‌ಬುಕ್ ಪತ್ತೆಯಾಗಿದೆ. ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಬಟ್ಟೆಗಳ ಮಧ್ಯೆಯೇ ಮೊಬೈಲ್ ಇತ್ತು. ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಮೊಬೈಲ್ ಮತ್ತು ಪೆನ್‌ಡ್ರೈವ್ ಪತ್ತೆಯಾದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಹಾಗೂ ಸಹ ಕೈದಿ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮೊಬೈಲ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಸಾಮಾಜಿಕ ಜಾಲತಾಣಗಳ ಆ್ಯಪ್‌ಗಳು ಡೌನ್ ಲೋಡ್ ಆಗಿರುವುದು ಪತ್ತೆಯಾಗಿದೆ. ಜೈಲಿನಲ್ಲಿದ್ದ ಟಿವಿಗೆ ಪೆನ್‌ಡ್ರೈವ್ ಕನೆಕ್ಟ್ ಮಾಡಿ ಚಲನಚಿತ್ರ ನೋಡಿದ್ದಾಗಿ ಸಿಸಿಬಿ ವಿಚಾರಣೆ ವೇಳೆ ಪ್ರಜ್ವಲ್ ಹಾಗೂ ಪ್ರತಾಪ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ವಿಚಾರಣೆಯ ಸಮಯದಲ್ಲಿ, ನೋಟ್‌ಬುಕ್ ತನಗೆ ಸೇರಿದ್ದು ಎಂದು ಪ್ರಜ್ವಲ್ ಅಧಿಕಾರಿಗಳಿಗೆ ಹೇಳಿದ್ದಾನೆ. ಪ್ರತಾಪ್ ರೈ ಮೊಬೈಲ್ ಫೋನ್, ಚಾರ್ಜರ್ ಮತ್ತು ಪೆನ್ ಡ್ರೈವ್ ತನ್ನದು ಎಂದು ಹೇಳಿಕೊಂಡಿದ್ದಾನೆ. ತನ್ನ ಸಂಬಂಧಿಕರು ಮತ್ತು ವಕೀಲರನ್ನು ಸಂಪರ್ಕಿಸಲು ಈ ಫೋನ್ ಬಳಸುತ್ತಿದ್ದನೆಂದು ಹೇಳಿದ್ದಾನಂತೆ. ಇದೀಗ ಫೋನ್ ಹಿಡಿದುಕೊಂಡು ಪ್ರಜ್ವಲ್ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ಫೋನ್ ಕರೆ ಮಾಡಿದ ಪ್ರಜ್ವಲ್ ರೇವಣ್ಣ; ವಿಡಿಯೋ ವೈರಲ್
ಹೊರಗಡೆ ಬಾ, ನಾನು ಅವರಿಗೆ ಫೋನ್ ಮಾಡಿಲ್ಲ. ನೀನು ಹೇಳಿದ ಮೇಲೆ ಮೊನ್ನೆ ಮಾಡಿದ್ದೆ. ಅತ್ತುಕೊಂಡು ಕೂತಿದ್ದರು ನೀನು ಫೋನ್ ಮಾಡಿಲ್ಲ. ಏನ್ ಮಾಡುತ್ತಿದ್ದೆ ಎಂದು ಫೋನ್‌ನಲ್ಲಿ ಪ್ರಜ್ವಲ್ ರೇವಣ್ಣ ಸಂಭಾಷಣೆ ನಡೆಸಿದ್ದಾರೆ.