ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BMTC Electric Bus: ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಯಡಿ ಬೆಂಗಳೂರಿಗೆ 4,500 ಹೆಚ್ಚುವರಿ ಎಲೆಕ್ಟ್ರಿಕ್ ಬಸ್‌

ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಯಡಿ ಬೆಂಗಳೂರಿಗೆ 4,500 ಹೆಚ್ಚುವರಿ ಎಲೆಕ್ಟ್ರಿಕ್ ಬಸ್‌ಗಳನ್ನು ಘೋಷಿಸಲಾಗಿದೆ. ನಗರ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಲು ಈ ಯೋಜನೆಯು ಮಹತ್ವಪೂರ್ಣ ಎನಿಸಿಕೊಂಡಿದೆ. ಲೋಕಸಭೆಯಲ್ಲಿ ಕೇಂದ್ರ ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ ಈ ಮಾಹಿತಿ ನೀಡಿದರು.

ಬೆಂಗಳೂರಿಗೆ 4,500 ಹೆಚ್ಚುವರಿ ಎಲೆಕ್ಟ್ರಿಕ್ ಬಸ್‌ ಘೋಷಣೆ

ಸಾಂದರ್ಭಿಕ ಚಿತ್ರ -

Priyanka P
Priyanka P Dec 3, 2025 8:43 PM

ಬೆಂಗಳೂರು: ಪ್ರಧಾನಮಂತ್ರಿ ಅವರ ಇ-ಡ್ರೈವ್ ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) 4,500 ಹೆಚ್ಚುವರಿ ಎಲೆಕ್ಟ್ರಿಕ್ ಬಸ್‌ಗಳನ್ನು (Electric buses) ಪಡೆಯಲಿದೆ. ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ (CESL), ಕಳೆದ ತಿಂಗಳು ಬಿಡ್‌ಗಳನ್ನು ಅಂತಿಮಗೊಳಿಸಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ (Bhupathiraju Srinivasa Varma) ಹೇಳಿದ್ದಾರೆ.

ಲೋಕಸಭೆಯಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಮಂಜೂರಾದ ಬಸ್‌ಗಳ ಸಂಖ್ಯೆ, ಹಂಚಿಕೆಯಾದ ಹಣ, ಕಾರ್ಯಾಚರಣೆಯ ಸ್ಥಿತಿ ಮತ್ತು ವಿಳಂಬಕ್ಕೆ ಕಾರಣಗಳ ಕುರಿತು ಸೂರ್ಯ ವಿವರಗಳನ್ನು ಕೋರಿದ್ದರು. ಈ ಯೋಜನೆಯಡಿ 4,500 ಇ-ಬಸ್‌ಗಳನ್ನು ಬಿಎಂಟಿಸಿಗೆ ಹಂಚಿಕೆ ಮಾಡಲಾಗಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ. ನವೆಂಬರ್ 14ರಂದು ಸಿಇಎಸ್‌ಎಲ್ ಬಿಡ್‌ಗಳನ್ನು ಅಂತಿಮಗೊಳಿಸಿದ 10,900 ಇ-ಬಸ್‌ಗಳಲ್ಲಿ ಇವು ಸೇರಿವೆ. ಈ ಬಸ್‌ಗಳ ಖರೀದಿ ಮತ್ತು ನಿಯೋಜನೆ ನಡೆಯುತ್ತಿದೆ.

ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ; 9 ವರ್ಷದ ಬಾಲಕಿ ಸಾವು

FAME-II ಯೋಜನೆಯಡಿ BMTC 1,221 ಇ-ಬಸ್‌ಗಳನ್ನು ಮತ್ತು ಕೇಂದ್ರ ನೆರವಿನ ರೂಪದಲ್ಲಿ 517.23 ಕೋಟಿ ರೂಪಾಯಿ ಪಡೆದುಕೊಂಡಿದೆ. ಎಲ್ಲ 1,221 ಬಸ್‌ಗಳನ್ನು ನಿಯೋಜಿಸಲಾಗಿದೆ. ಕರ್ನಾಟಕವು 425 ಬಸ್‌ಗಳನ್ನು ಪಡೆದಿದ್ದರೂ, ಬೆಂಗಳೂರಿಗೆ ಹಿಂದಿನ FAME ಯೋಜನೆಯಡಿ ಯಾವುದೇ ಬಸ್‌ಗಳು ಬಂದಿಲ್ಲ ಎಂದು ಸಚಿವರು ಹೇಳಿದರು.

ಸಚಿವರು ಒದಗಿಸಿದ ಮಾಹಿತಿಯ ಪ್ರಕಾರ, FAME-II ಯೋಜನೆಯಡಿ ರಾಜ್ಯದಲ್ಲಿ 6,862 ಎಲೆಕ್ಟ್ರಿಕ್ ಬಸ್‌ಗಳನ್ನು ಮತ್ತು PM ಇ-ಡ್ರೈವ್ ಯೋಜನೆಯಡಿ 13,800 ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲಾಗಿದೆ.

236 ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

ಬೆಂಗಳೂರಿನ ನಾಲ್ಕು ಪ್ರಮುಖ ಕಾರಿಡಾರ್‌ಗಳಲ್ಲಿ 236 ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಕೈಗಾರಿಕೆಗಳ ರಾಜ್ಯ ಸಚಿವ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಚಲಿಸುತ್ತಿದ್ದ ಬಿಎಂಟಿಸಿ ಬಸ್‌ ಸುಟ್ಟು ಕರಕಲು, 75 ಪ್ರಯಾಣಿಕರು ಪಾರು

ಲಿಖಿತ ಉತ್ತರದಲ್ಲಿ, ತೈಲ ಮಾರುಕಟ್ಟೆ ಕಂಪನಿಗಳು (OMC) ಈ ಕಾರಿಡಾರ್‌ಗಳಲ್ಲಿ 236 EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿವೆ. ಅವುಗಳಲ್ಲಿ ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ (NH 48) 109, ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ (NH 44) 64, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (NH 275) 33 ಮತ್ತು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ 30 ಸೇರಿವೆ ಎಂದು ಸಚಿವರು ಹೇಳಿದರು.

ಬ್ಯಾಟರಿ ವಿನಿಮಯ ಕೇಂದ್ರಗಳ ಕುರಿತು ಯಾವುದೇ ಕೇಂದ್ರೀಕೃತ ದತ್ತಾಂಶ ಲಭ್ಯವಿಲ್ಲ. ಪ್ರಸ್ತುತ ಮೂಲ ಸೌಕರ್ಯವು ಎಲೆಕ್ಟ್ರಿಕ್ ಬಸ್‌ಗಳು ಮತ್ತು ಸರಕು ಸಾಗಣೆ ಟ್ರಕ್‌ಗಳಂತಹ ಭಾರಿ ವಿದ್ಯುತ್ ವಾಹನಗಳಿಗೆ ಸಮರ್ಪಕವಾಗಿದೆಯೇ ಎಂದು ನಿರ್ಣಯಿಸಲು ಯಾವುದೇ ಅಧ್ಯಯನ ನಡೆಸಲಾಗಿಲ್ಲ ಎಂದು ಸ್ಪಷ್ಟಪಡಿಸಲಾಯಿತು.