IND vs SA: ಎರಡನೇ ಪಂದ್ಯದಲ್ಲಿ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಏಡೆನ್ ಮಾರ್ಕ್ರಮ್!
Aiden Markarma Scored Century: ಭಾರತದ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಏಡೆನ್ ಮಾರ್ಕ್ರಮ್ ಭರ್ಜರಿ ಶತಕ ಬಾರಿಸಿದರು. ಅವರು ಆಡಿದ 98 ಎಸೆತಗಳಲ್ಲಿ 110 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತದಲ್ಲಿ ಶತಕ ಬಾರಿಸಿದ ಮೊದಲ ದಕ್ಷಿಣ ಆಫ್ರಿಕಾ ಆರಂಭಿಕ ಎಂಬ ದಾಖಲೆಯನ್ನು ಬರೆದಿದ್ದಾರೆ.
ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಏಡೆನ್ ಮಾರ್ಕ್ರಮ್. -
ರಾಯ್ಪುರ: ಭಾರತ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ(IND vs SA) ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಏಡೆನ್ ಮಾರ್ಕ್ರಮ್ (Aiden markaram) ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು ಹಾಗೂ ಶತಕವನ್ನು ಬಾರಿಸಿದರು. ಆ ಮೂಲಕ ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಒಡಿಐ ಶತಕ ಬಾರಿಸಿದ ಮೊದಲ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಎಂಬ ದಾಖಲೆಯನ್ನು ಬರೆದಿದ್ದಾರೆ. 2015ರಲ್ಲಿ ಕ್ವಿಂಟನ್ ಡಿ ಕಾಕ್ (Quinton De Kock) ಅವರು ಭಾರತದಲ್ಲಿ ಒಡಿಐ ಶತಕವನ್ನು ಬಾರಿಸಿದ್ದರು. ಅಂದಿನ ಇಲ್ಲಿಯವರೆಗೂ ಯಾರೂ ಈ ಸಾಧನೆಯನ್ನು ಮಾಡಿರಲಿಲ್ಲ. ಇದೀಗ ಏಡೆನ್ ಮಾರ್ಕ್ರಮ್ ಈ ದಾಖಲೆ ಬರೆದಿದ್ದಾರೆ. ಕಳೆದ 25 ಇನಿಂಗ್ಸ್‌ಗಳಿಂದ ಓಪನಿಂಗ್ ಬ್ಯಾಟ್ಸ್‌ಮನ್ ಆಗಿ ಮಾರ್ಕ್ರಮ್ ಅವರ ಮೊದಲ ಶತಕವಾಗಿದೆ. ಅವರು ಹೊಡೆದಿರುವ ಕಳೆದ ಮೂರು ಶತಕಗಳು ನಾಲ್ಕನೇ ಕ್ರಮಾಂಕದಲ್ಲಿ ಮೂಡಿ ಬಂದಿವೆ.
ಭಾರತ ತಂಡ ನೀಡಿದ್ದ 359 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಪರ ಇನಿಂಗ್ಸ್ ಆರಂಭಿಸಿದ ಏಡೆನ್ ಮಾರ್ಕ್ರಮ್ ಅವರು ಹೊಸ ಚೆಂಡಿನಲ್ಲಿ ಶಿಸ್ತುಬದ್ದವಾಗಿ ಬ್ಯಾಟಿಂಗ್ ನಡೆಸಿದ್ದರು. ಒಮ್ಮೆ ಇಬ್ಬನಿ ಬೀಳಲು ಆರಂಭಿಸಿದ ಬಳಿಕ ಚೆಂಡು ನೇರವಾಗಿ ಬ್ಯಾಟ್‌ಗೆ ಬರುತ್ತಿತ್ತು. ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಅವರು 88 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಅವರು 99 ರನ್ ಗಳಿಸಿದ್ದ ವೇಳೆ ರವೀಂದ್ರ ಜಡೇಜಾ ಎಸೆತದಲ್ಲಿ ಸ್ಟ್ರೈಟ್ ಡ್ರೈವ್ ಹೊಡೆದರು ಹಾಗೂ ಲಾಂಗ್ ಆನ್ ಕಡೆ ಚೆಂಡನ್ನು ಹೊಡೆದು ಒಂದು ರನ್ ಗಳಿಸಿ ಶತಕವನ್ನು ಪೂರ್ಣಗೊಳಿಸಿದರು. ಈ ವೇಳೆ ಕೊನೆಯ 23 ಓವರ್‌ಗಳಿಗೆ ಇನ್ನೂ 8 ವಿಕೆಟ್‌ಗಳು ಬಾಕಿ ಇರುವಾಗಲೇ 182 ರನ್‌ಗಳ ಅಗತ್ಯವಿತ್ತು.
IND vs SA: 53ನೇ ಒಡಿಐ ಶತಕ ಸಿಡಿಸಿ ಜಿಂಕೆಯಂತೆ ಜಿಗಿದು ಸಂಭ್ರಮಿಸಿದ ವಿರಾಟ್ ಕೊಹ್ಲಿ!
ಏಡೆನ್ ಮಾರ್ಕ್ರಮ್ ಅವರನ್ನು ಹರ್ಷಿತ್ ರಾಣಾ 30ನೇ ಓವರ್‌ನಲ್ಲಿ ಔಟ್ ಮಾಡಿದರು. ಮಾರ್ಕ್ರಮ್ ಔಟ್ ಆದ ಬಳಿಕ ಭಾರತ ತಂಡಕ್ಕೆ ಟರ್ನಿಂಗ್ ಪಾಯಿಂಟ್ ಸಿಕ್ಕಿತು. ಹರ್ಷಿತ್ ರಾಣಾ ಎಸೆದಿದ್ದ ಆಪ್ ಕಟ್ಟರ್ ಎಸೆತದಲ್ಲಿ ಮಾರ್ಕ್ರಮ್ ಲಾಂಗ್ ಆನ್‌ನಲ್ಲಿ ಋತುರಾಜ್ ಗಾಯಕ್ವಾಡ್‌ಗೆ ಕ್ಯಾಚ್ ಕೊಟ್ಟಿದ್ದರು. ಆ ಮೂಲಕ ಹರ್ಷಿತ್ ರಾಣಾ ಹೊಸ ಚೆಂಡಿನಲ್ಲಿ ಹಾಗೂ ಹಳೆ ಚೆಂಡಿನಲ್ಲಿ ವಿಕೆಟ್ ಪಡೆಯುವ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.
Hundred Up! 💯
— Proteas Men (@ProteasMenCSA) December 3, 2025
Aiden Markram brings up a brilliant century! 👏
Power, patience, and precision! A world-class innings at a crucial stage of the run chase. 💥🇿🇦 pic.twitter.com/2pgP2K4JNu
ಏಡೆನ್ ಮಾರ್ಕ್ರಮ್ ಅವರ ಜೊತೆ ಇನಿಂಗ್ಸ್ ಆರಂಭಿಸಿದ ಕ್ವಿಂಟನ್ ಡಿ ಕಾಕ್ ಅವರರು ಕೇವಲ 8 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾಗಿದ್ದ ಮಾರ್ಕ್ರಮ್ ಹಾಗೂ ತೆಂಬಾ ಬವೂಮ ಅವರು 101 ರನ್‌ಗಳ ಜೊತೆಯಾಟವನ್ನು ಆಡಿದ್ದರು. ನಾಯಕ ತೆಂಬಾ 48 ಎಸೆತಗಳಲ್ಲಿ 46 ರನ್‌ಗಳನ್ನು ಕಲೆ ಹಾಕಿದ ಬಳಿಕ ವಿಕೆಟ್ ಒಪ್ಪಿಸಿದರು. ನಂತರ ಮ್ಯಾಥ್ಯೂ ಬ್ರೀಟ್ಜ್ಕೆ ಅವರು ಮೊದಲನೇ ಪಂದ್ಯದಂತೆ ಈ ಹಣಾಹಣಿಯಲ್ಲಿಯೂ 68 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಇವರಿಗೂ ಮುನ್ನ ಡೆವಾಲ್ಡ್ ಬ್ರೆವಿಸ್ ಸ್ಪೋಟಕ ಬ್ಯಾಟಿಂಗ್ ಮೂಲಕ 34 ಎಸೆತಗಳಲ್ಲಿ 54 ರನ್‌ಗಳನ್ನು ಬಾರಿಸಿದ್ದರು. ಅಂತಿಮವಾಗಿ ಹರಿಣ ಪಡೆ --- ಓವರ್‌ಗಳಿಗೆ ---- ವಿಕೆಟ್‌ಗಳ ನಷ್ಟಕ್ಕೆ ---- ರನ್ ಗಳಿಸಿ --- ವಿಕೆಟ್‌ಗಳ ಗೆಲುವು ಸಾಧಿಸಿತು ಹಾಗೂ ಏಕದಿನ ಸರಣಿಯನ್ನು 1-1 ಸಮಬಲ ಕಾಯ್ದುಕೊಂಡಿತು.