ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KPSC Recruitment Scam: ನೇಮಕಾತಿ ಅಕ್ರಮ ವ್ಯವಸ್ಥಿತ ಸಂಚು: ಹೈ ತರಾಟೆ: ಅಮಾನತಿನಅಲ್ಲಿರುವ ಅಧ್ಯಕ್ಷರಿಗೆ ಈಗ ಬಂಧನ ಭೀತಿ

ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರು ಆಯೋಗದ ಕಾರ‍್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನೀಟ್ ಪರೀಕ್ಷೆಯ ಅಕ್ರಮದಿಂದ ನೊಂದ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಕೃತ್ಯಗಳಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ನೀವು ನಡೆಸಿದ ಈ ನೇಮಕಾತಿ ಅಕ್ರಮಗಳು ಅರ್ಹ ಅಭ್ಯರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿವೆ. ರಾತ್ರಿ-ಹಗಲು ಕಷ್ಟಪಟ್ಟು ಓದಿದ ವಿದ್ಯಾರ್ಥಿ ಗಳ ಕಥೆ ಏನಾಗಬೇಕು? ಎಂದು ಪ್ರಶ್ನಿಸಿದರು.

ಕೆಪಿಎಸ್‌ಸಿ: ಶಿವಶಂಕರಪ್ಪ ಜಾಮೀನು ಅರ್ಜಿ ವಜಾ

-

Profile
Ashok Nayak Sep 8, 2026 8:17 AM

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತಿನಲ್ಲಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು ಬಂಧನದ ಭೀತಿ ಎದುರಾಗಿದೆ. ಅರ್ಜಿಯ ವಿಚಾ ರಣೆ ನಡೆಸಿದ ನ್ಯಾಯ ಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠವು, ಪ್ರಕರಣದ ಗಂಭೀರತೆ ಪರಿಗಣಿಸಿ ಆರೋಪಿಗೆ ಯಾವುದೇ ವಿನಾಯಿತಿ ನೀಡಲು ನಿರಾಕರಿಸಿತು.

ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರು ಆಯೋಗದ ಕಾರ‍್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನೀಟ್ ಪರೀಕ್ಷೆಯ ಅಕ್ರಮದಿಂದ ನೊಂದ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಕೃತ್ಯಗಳಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ನೀವು ನಡೆಸಿದ ಈ ನೇಮಕಾತಿ ಅಕ್ರಮಗಳು ಅರ್ಹ ಅಭ್ಯರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿವೆ. ರಾತ್ರಿ-ಹಗಲು ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ಕಥೆ ಏನಾಗಬೇಕು? ಎಂದು ಪ್ರಶ್ನಿಸಿದರು.

ಕೆಪಿಎಸ್‌ಸಿಯಂತಹ ಸಾಂವಿಧಾನಿಕ ಸಂಸ್ಥೆಯ ಮೇಲೆ ಸಾರ್ವಜನಿಕರಿಗಿದ್ದ ವಿಶ್ವಾಸವನ್ನು ಈ ಪ್ರಕರಣವು ಸಂಪೂರ್ಣವಾಗಿ ನಾಶ ಮಾಡಿದೆ. ಆರೋಪಿಯ ಕುಟುಂಬದ ಸದಸ್ಯರೇ ಈ ಅಕ್ರಮ ದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಾಲಯ, ಇದು ವ್ಯವಸ್ಥಿತ ವಾಗಿ ನಡೆದ ಹಗರಣ ಎಂದು ಅಭಿಪ್ರಾಯಪಟ್ಟು ಅಮಾನತಿನಲ್ಲಿರುವ ಅಧ್ಯಕ್ಷರಿಗೆ ಜಾಮೀನು ನಿರಾಕರಿಸಿತು. ಈ ನೇಮಕಾತಿ ಅಕ್ರಮವು ಆಕಸ್ಮಿಕವಾಗಿ ನಡೆದದ್ದಲ್ಲ, ಬದಲಾಗಿ ಉನ್ನತ ಮಟ್ಟದಲ್ಲಿ ರೂಪಿಸಲಾದ ವ್ಯವಸ್ಥಿತ ಸಂಚಿನ ಫಲವಾಗಿದೆ.

ಇದನ್ನೂ ಓದಿ: KPSC Recruitment Scam: ಕೆಪಿಎಸ್‌ಸಿ ಅಕ್ರಮದ ಮಧ್ಯವರ್ತಿ ಬಸವರಾಜ ಪಾಲುದಾರಿಕೆ ಸಂಸ್ಥೆಗಳಲ್ಲಿ ಸಿಐಡಿ ಶೋಧ: ಕನ್ನಾಳೆ ಸಂಪತ್ತಿನ ಮೂಲ ಹುಡುಕಾಟ

ಅಕ್ರಮದ ಲಾಭವನ್ನು ಆರೋಪಿಯ ಕುಟುಂಬ ವರ್ಗದವರು ಪಡೆದಿರುವುದು ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಲು ಸಂಸ್ಥೆಯ ಅಧಿಕಾರವನ್ನೇ ದುರುಪಯೋಗಪಡಿಸಿ ಕೊಂಡಿರುವುದು ಪ್ರಮುಖ ಸಾಕ್ಷ್ಯಗಳಾಗಿವೆ. ಇಂತಹ ಗಂಭೀರ ಅಪರಾಧದ ಆರೋಪ ಹೊತ್ತಿರು ವವರಿಗೆ ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಪೀಠವು ಅಭಿಪ್ರಾಯಪಟ್ಟಿತು.

ಮಧ್ಯವರ್ತಿ ಜತೆ ಸಂಪರ್ಕ: ನಿರ್ದಿಷ್ಟ ಹುದ್ದೆಗಳ ಅರ್ಜಿದಾರರು ಸಾಹುಕಾರ್ ಸಂಪರ್ಕ ದಲ್ಲಿದ್ದರು. ಮಧ್ಯವರ್ತಿ ಬಸವರಾಜ್ ಕನ್ನಾಳೆಯೂ ಸಾಹುಕಾರ್ ಜತೆ ಸಂಪರ್ಕದಲ್ಲಿದ್ದ. ಪರೀಕ್ಷೆ ಯ ದಿನ ದಂದು ಖಾಸಗಿ ಫೋನ್‌ನಿಂದ ರಾತ್ರಿ 8 ಗಂಟೆಯವರೆಗೆ ಫಲಾನುಭವಿಗಳ ಜತೆ ಮಾತನಾಡಿ ದ್ದಾರೆ. ಪುತ್ರ, ಪುತ್ರಿಯರು ಕೆಪಿಎಸ್‌ಸಿ ದುರ್ಬಳಕೆಗೆ ಅವಕಾಶ ನೀಡಿದ್ದಾರೆ. ಅಧಿಕಾರಿಗಳು, ಮಧ್ಯವರ್ತಿಗಳ ಜತೆ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಜಾಮೀನು ಅರ್ಜಿ ವಜಾ ಮಾಡುವಂತೆ ಎಸ್‌ಪಿಪಿ ಬಿ. ಎನ್.ಜಗದೀಶ್ ಅವರು ವಾದ ಮಂಡಿಸಿದ್ದರು.

35ಕೂ ಹೆಚ್ಚು ಬ್ಯಾಂಕ್ ಖಾತೆ ಮುಟ್ಟುಗೋಲು

ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಇದುವರೆಗೂ ಪರೀಕ್ಷೆ ನಿಯಂತ್ರಣಾಧಿಕಾರಿ ಯಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಬಸವರಾಜ ಕನ್ನಾಳೆಯ 35ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಬಸವರಾಜ ಕನ್ನಾಳೆ ಭಾಲ್ಕಿಯ ಕೋ-ಆಪರೇಟಿವ್ ಬ್ಯಾಂಕ್‌ನ ಖಾತೆಗಳು, ಬೆಳಗಾವಿ, ಕಲಬುರಗಿಯ ಖಾಸಗಿ ಬ್ಯಾಂಕ್ ಖಾತೆಗಳ ಜತೆಗೆ ಅವರ ಆಪ್ತರ ಬ್ಯಾಂಕ್ ಖಾತೆಗಳನ್ನು ಸಹ ಸೀಜ್ ಮಾಡಲಾಗಿದೆ. ಜ್ಞಾನೇಂದ್ರ ಖಾತೆಗೆ ಹಲವು ಬಾರಿ ಕನ್ನಾಳೆ ಹಣ ವರ್ಗಾಯಿಸಿದ್ದಾನೆ. ಕನ್ನಾಳೆ ಸ್ನೇಹಿತರು, ಆಪ್ತರ ಅಕೌಂಟ್ ಮೂಲಕವೂ ವ್ಯವಹಾರ ನಡೆದಿದೆ.

ಸದಸ್ಯೆ ಹೊಸಮನಿಗೆ ಹುಡುಕಾಟ

ಕೆಪಿಎಸ್‌ಸಿ ನೇಮಕಾತಿ ಹಗರಣದ ಪ್ರಮುಖ ಶಂಕಿತೆ ಎನ್ನಲಾದ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಇನ್ನೂ ತಲೆಮರೆಸಿಕೊಂಡಿದ್ದು, ಅವರಿಗಾಗಿ ಸಿಐಡಿ ಅಧಿಕಾರಿಗಳು ಶೋಧ ಮುಂದು ವರಿಸಿದ್ದಾರೆ. ಕಳೆದ ತಿಂಗಳು ಇಡಿ ನಡೆಸಿದ ದಾಳಿಯ ಬಳಿಕ ಶಾಂತಾ ಹೊಸಮನಿ ತಲೆಮರೆಸಿ ಕೊಂಡಿದ್ದಾರೆ. ಇದುವರೆಗೆ ಇಡಿ ಹಾಗೂ ಸಿಐಡಿ ನೀಡಿರುವ ನೋಟಿಸ್‌ಗಳಿಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿಐಡಿ ಈಗ ಮತ್ತೊಂದು ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದು, ಅದಕ್ಕೂ ಹಾಜರಾಗದಿದ್ದರೆ ನ್ಯಾಯಾಲಯದಿಂದ ಬಂಧನ ವಾರಂಟ್ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.