ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Road Accident: ಬೆಂಗಳೂರಿನಲ್ಲಿ ಕಾರು ಅಪಘಾತ: ಇಬ್ಬರು ಸಾವು, ಮೂವರಿಗೆ ಗಾಯ

ತಡರಾತ್ರಿ ಐವರು ಕ್ಯಾಬ್‌ನಲ್ಲಿ ಹೊಸಕೆರೆಹಳ್ಳಿಯಿಂದ ತುಮಕೂರು ರಸ್ತೆ ಕಡೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಸೋಂಪುರ ಸಮೀಪ ರಸ್ತೆಯ ಉಬ್ಬುಗಳನ್ನು ಎಗರಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕ್ಯಾಬ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಮಣ್ಣಿನ ಗುಡ್ಡೆಯ ಮೇಲೆ ಉರುಳಿ ಬಿದ್ದಿದೆ. ತುಮಕೂರು ಜಿಲ್ಲೆ ಮಧುಗಿರಿ ಮೂಲದ ಕ್ಯಾಬ್ ಚಾಲಕ ದೇವರಾಜ್ (32) ಹಾಗೂ ಅಶೋಕ (35) ಮೃತರು.

ಬೆಂಗಳೂರಿನಲ್ಲಿ ಕಾರು ಅಪಘಾತ: ಇಬ್ಬರು ಸಾವು, ಮೂವರಿಗೆ ಗಾಯ

ತಲಘಟ್ಟಪುರದಲ್ಲಿ ಕಾರು ಅಪಘಾತ -

ಹರೀಶ್‌ ಕೇರ
ಹರೀಶ್‌ ಕೇರ Jan 12, 2026 7:45 AM

ಬೆಂಗಳೂರು, ಜ.12 : ಬೆಂಗಳೂರಿನಲ್ಲಿ (Bengaluru) ಮತ್ತೊಂದು ಭೀಕರವಾದ ಅಪಘಾತ (Road Accident) ಸಂಭವಿಸಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ತಲಘಟ್ಟಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ತುಮಕೂರು ಜಿಲ್ಲೆ ಮಧುಗಿರಿ ಮೂಲದ ಕ್ಯಾಬ್ ಚಾಲಕ ದೇವರಾಜ್ (32) ಹಾಗೂ ಅಶೋಕ (35) ಮೃತರು. ಶ್ರೀನಿವಾಸ್, ಮದನ್, ಮಹಂತೇಶ್ ಎಂಬವರು ಗಾಯ ಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವರಾಜ್ ಕ್ಯಾಬ್ ಚಾಲಕನಾಗಿ ಹಾಗೂ ಅಶೋಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಗಾಯಾಳುಗಳು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿ ದ್ದರು. ಎಲ್ಲರೂ ಲಗ್ಗೆರೆ, ನೆಲಮಂಗಲ ಸಮೀಪದಲ್ಲಿ ವಾಸವಾಗಿದ್ದು ಸ್ನೇಹಿತರಾಗಿದ್ದಾರೆ.

ತಡರಾತ್ರಿ ಐವರು ಕ್ಯಾಬ್‌ನಲ್ಲಿ ಹೊಸಕೆರೆಹಳ್ಳಿಯಿಂದ ತುಮಕೂರು ರಸ್ತೆ ಕಡೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಸೋಂಪುರ ಸಮೀಪ ರಸ್ತೆಯ ಉಬ್ಬುಗಳನ್ನು ಎಗರಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕ್ಯಾಬ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಮಣ್ಣಿನ ಗುಡ್ಡೆಯ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ದೇವರಾಜ್ ಮತ್ತು ಅಶೋಕ್ ಸ್ಥಳದಲ್ಲೇ ಮೃತಪಟ್ಟರೆ, ಇನ್ನುಳಿದ ಮೂವರು ಗಾಯಗೊಂಡಿದ್ದಾರೆ. ಅತಿವೇಗ ಹಾಗೂ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Road Accident: ಹಿರಿಯೂರು ಬಳಿ ಇನ್ನೊಂದು ಭೀಕರ ಅಪಘಾತ, ನಾಲ್ವರು ಸಾವು