ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂದಿನಿಂದ ಪ್ರತಿ ಮನೆಗೆ ನಮೂನೆ ಪತ್ರ ವಿತರಣೆ

ರಾಜ್ಯಾದ್ಯಂತ ೧.೧೫ ಲಕ್ಷಕ್ಕೂ ಹೆಚ್ಚು ಬೂತ್ ಮಟ್ಟದ ಏಜೆಂಟರನ್ನು ವಿವಿಧ ರಾಜಕೀಯ ಪಕ್ಷಗಳು ನೇಮಕ ಮಾಡಿವೆ. ಇವರ ಸಹಕಾರದೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಯಶಸ್ವಿಯಾಗಿ ನಡೆಸಲಾಗುವುದು. ಪ್ರತಿ ಮತದಾರರಿಗೆ ಎರಡು ಪ್ರತಿಗಳ ಎನ್ಯೂಮರೇಷನ್ ಫಾರ್ಮ್ ನೀಡಲಾಗುತ್ತಿದ್ದು, ಸುಮಾರು ೧೧ ಕೋಟಿ ಫಾರ್ಮ್ ಮುದ್ರಿಸಲಾಗಿದೆ

ಇಂದಿನಿಂದ ಪ್ರತಿ ಮನೆಗೆ ನಮೂನೆ ಪತ್ರ ವಿತರಣೆ

-

Profile
Ashok Nayak Jun 30, 2026 8:48 AM

5.54 ಕೋಟಿ ಮತದಾರರಿಗೆ ಎನ್ಯೂಮರೇಷನ್ ಫಾರ್ಮ್

ಬೆಂಗಳೂರು: ರಾಜಕೀಯ ವಲಯದಲ್ಲಿಪರ-ವಿರೋಧ ಚರ್ಚೆಯ ಹೊರತಾಗಿಯೂ ಮಂಗಳವಾರ ದಿಂದ ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭ ಗೊಳ್ಳಲಿದ್ದು, ಗಣತಿದಾರರು ಮನೆ ಬಾಗಿಲಿಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್, ಜೂನ್ 30ರಿಂದ ಜುಲೈ 29ರವರೆಗೆ ರಾಜ್ಯದ 5.54 ಕೋಟಿ ಮತದಾರರ ಮನೆ ಬಾಗಿಲಿಗೆ ತೆರಳಿ ಎನ್ಯೂಮರೇಷನ್ ಫಾರ್ಮ್ ವಿತರಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಚುನಾವಣಾ ಇಲಾಖೆ ಸಕಲ ಸಿದ್ಧತೆ ಪೂರ್ಣಗೊಳಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ ವಾಗಿರಲಿದ್ದು, ಎಷ್ಟು ಫಾರ್ಮ್ ವಿತರಿಸಲಾಗಿದೆ, ಎಷ್ಟು ಫಾರ್ಮು ಮರಳಿ ಬಂದಿವೆ, ಎಷ್ಟು ಡಿಜಿಟಲೀಕರಣಗೊಂಡಿವೆ.

ಗೈರುಹಾಜರಿ, ಸ್ಥಳಾಂತರ, ಮರಣ ಅಥವಾ ನಕಲಿ ದಾಖಲಾತಿಗಳ ಕಾರಣದಿಂದ ಎಷ್ಟು ಫಾರ್ಮ್ ಸಂಗ್ರಹವಾಗಿಲ್ಲ ಎಂಬ ಮಾಹಿತಿ ಸಹಿತ ಮತಗಟ್ಟೆ ಮಟ್ಟದವರೆಗೆ ಸಾರ್ವಜನಿಕವಾಗಿ ಪ್ರಕಟಿಸ ಲಾಗುವುದು ಎಂದರು.

ರಾಜ್ಯದಲ್ಲಿ ಒಟ್ಟು 59,050 ಬೂತ್ ಮಟ್ಟದ ಅಧಿಕಾರಿಗಳು ಹಾಗೂ 7550 ಮೇಲ್ವಿಚಾರಕರು ಸೇರಿದಂತೆ 68,123ಕ್ಕೂ ಹೆಚ್ಚು ಅಧಿಕಾರಿಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಎಲ್ಲ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಬೂತ್ ಮಟ್ಟದ ಏಜೆಂಟರಿಗೆ ತರಬೇತಿ ನೀಡಲಾಗಿದೆ.

ಇದನ್ನೂ ಓದಿ: ಇಂದಿನ ಐರ್ಲೆಂಡ್ ವಿರುದ್ಧದ 2ನೇ T20Iಗೆ ಭಾರತದ ಸಂಭಾವ್ಯ ಆಡುವ XI

ಜೂನ್ 16, 2026ರಂದು ಮತದಾರರ ಪಟ್ಟಿ ಸ್ಥಗಿತಗೊಳಿಸಿದ ಸಂದರ್ಭದಲ್ಲಿ ರಾಜ್ಯದಲ್ಲಿ
5,54,32,314 ಮತದಾರರು ದಾಖಲಾಗಿದ್ದರು. ಇವರಲ್ಲಿ ಈಗಾಗಲೇ 5,07,79,810 ಮತದಾರರ ಮಾಹಿತಿ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಇದು ಶೇ.91.61ರಷ್ಟು ಸಾಧನೆಯಾಗಿದೆ ಎಂದರು.

ರಾಜ್ಯಾದ್ಯಂತ 1.15 ಲಕ್ಷಕ್ಕೂ ಹೆಚ್ಚು ಬೂತ್ ಮಟ್ಟದ ಏಜೆಂಟರನ್ನು ವಿವಿಧ ರಾಜಕೀಯ ಪಕ್ಷಗಳು ನೇಮಕ ಮಾಡಿವೆ. ಇವರ ಸಹಕಾರದೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಯಶಸ್ವಿ ಯಾಗಿ ನಡೆಸಲಾಗುವುದು. ಪ್ರತಿ ಮತದಾರರಿಗೆ ಎರಡು ಪ್ರತಿಗಳ ಎನ್ಯೂಮರೇಷನ್ ಫಾರ್ಮ್ ನೀಡಲಾಗುತ್ತಿದ್ದು, ಸುಮಾರು 11 ಕೋಟಿ ಫಾರ್ಮ್ ಮುದ್ರಿಸಲಾಗಿದೆ. ಫಾರ್ಮ್ ಸ್ವೀಕರಿಸಿದ ಮತದಾರರು ತಮ್ಮ ಭಾವಚಿತ್ರ ಅಂಟಿಸಿ, ವಿವರಗಳನ್ನು ಭರ್ತಿ ಮಾಡಿ ಸಹಿ ಮಾಡಿ ಬಿಎಲ್ಒಗಳಿ ಗೆ ಹಿಂತಿರುಗಿಸಬೇಕು. ಫಾರ್ಮ್ ಸಲ್ಲಿಸಿದವರ ಹೆಸರಷ್ಟೇ ಆಗ 5ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದರು.

ವೇಳಾಪಟ್ಟಿ

ಜೂನ್ 30-ಜುಲೈ 29: ಎನ್ಯೂಮರೇಷನ್ ಫಾರ್ಮ್ ವಿತರಣೆ

ಆಗ 5: ಕರಡು ಮತದಾರರ ಪಟ್ಟಿ ಪ್ರಕಟಣೆ

ಆಗ 5ರಿಂದ ಸೆಪ್ಟೆಂಬರ್ 4: ಆಕ್ಷೇಪಣೆ ಮತ್ತು ಹಕ್ಕು ಸಲ್ಲಿಕೆ ಅವಧಿ

ಆಗ 5ರಿಂದ ಅಕ್ಟೋಬರ್ 3: ಆಕ್ಷೇಪಣೆಗಳ ವಿಲೇವಾರಿ

ಅಕ್ಟೋಬರ್ 7: ಅಂತಿಮ ಮತದಾರರ ಪಟ್ಟಿ ಪ್ರಕಟ

image

ನಾವು ಎಸ್‌ಐಆರ್ ಮಾಡಬೇಡಿ ಅಂದಿಲ್ಲ. ಆದರೆ, ಪರಿಶುದ್ಧ ಮತದಾರರ ಪಟ್ಟಿ ಕೊಡಲಿ. ಪಾರದರ್ಶಕವಾಗಿ ಮಾಡಲಿ. ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಬಡವರ ಹಕ್ಕು ಕಿತ್ತುಕೊಳ್ಳ ಲಾಗಿದೆ. ನಮ್ಮ ಪ್ರಶ್ನೆಗಳಿಗೆ ಆಯೋಗ ಇನ್ನೂ ಉತ್ತರ ಕೊಟ್ಟಿಲ್ಲ. ನಾವು ಜಾಗೃತಿ ಅಭಿಯಾನ ಮಾಡುತ್ತಿದ್ದೇವೆ. ಕಾನೂನಾತ್ಮಕವಾಗಿ ಇದನ್ನು ಪರಿಗಣಿಸಬೇಕಾಗುತ್ತದೆ. ನಮ್ಮ ಪ್ರಶ್ನೆಗಳಿಗೆ ಆಯೋಗ ಉತ್ತರ ಕೊಟ್ಟು ಎಸ್‌ಐಆರ್ ಮಾಡಲಿ ಎಂಬುದು ನಮ್ಮ ಆಗ್ರಹ.

- ಪ್ರಿಯಾಂಕ್ ಖರ್ಗೆ, ಗೃಹ ಸಚಿವ
image

ಮತದಾರರ ಪರಿಶೀಲನೆಗೆ ಸಂಬಂಧಿಸಿದ ಎಲ್ಲ ಮಾಹಿತಿ, ಮಾರ್ಗಸೂಚಿ, ಪ್ರಶ್ನೋತ್ತರ, ವಿವರಣಾ ತ್ಮಕ ವಿಡಿಯೊ, ಅಧಿಕಾರಿಗಳ ಸಂಪರ್ಕ ವಿವರಗಳು ಹಾಗೂ ಮತಗಟ್ಟೆಗಳ ಮಾಹಿತಿ ಚುನಾವಣಾ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಪ್ರತಿ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು ಎಂಬುದೇ ಈ ವಿಶೇಷ ಪರಿಷ್ಕರಣೆ ಕಾರ್ಯಕ್ರಮದ ಮುಖ್ಯ ಉದ್ದೇಶ. ರಾಜ್ಯದ ಎಲ್ಲಾ ಮತದಾರರು ಹಾಗೂ ರಾಜಕೀಯ ಪಕ್ಷಗಳು ಸಹಕರಿಸಬೇಕು.

-ಅನ್ಬು ಕುಮಾರ್, ಕರ್ನಾಟಕ ಮುಖ್ಯ ಚುನಾವಣಾಧಿಕಾರಿ