ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಸ್.ಐ.ಆರ್ ಸಮಸ್ಯೆ ವಿರುದ್ಧ ಹೋರಾಟಕ್ಕೆ "ಸತ್ಯಾಗ್ರಹ" ಡಿಜಿಟಲ್ ರಾಷ್ಟ್ರೀಯ ವೇದಿಕೆ: ರಾಹುಲ್ ಗಾಂಧಿಯಿಂದ ತಂತ್ರಜ್ಞಾನದ ಸ್ಪರ್ಶ: ಡಾ.ಆನಂದ ಕುಮಾರ್

ಆಧುನಿಕ ತಂತ್ರಜ್ಞಾನ ಯುಗದಲ್ಲಿ ಜೆನ್ ಜಿ(Gen G) ಮತ್ತು ಆಲ್ಪಾ ಸಮುದಾಯಗಳ ಹೋರಾಟಕ್ಕೆ ಈ ವೇದಿಕೆ ಧೀಶಕ್ತಿಯಾಗಲಿದೆ. ಜನಪರ ಸಮಸ್ಯೆಗಳಷ್ಟೇ ಅಲ್ಲದೇ, ಎಸ್.ಐ.ಆರ್ ವಿರುದ್ಧದ ಹೋರಾಟಕ್ಕೆ ಇದು ಹೊಸ ರಾಷ್ಟ್ರೀಯ ವೇದಿಕೆ ಒದಗಿಸುವ ವಿಭಿನ್ನ ಪ್ರಯೋಗವಾಗಿದೆ. ಅಯೋಗದ ವಿರುದ್ಧದ ಹೋರಾಟಕ್ಕೆ ಹೊಸ ದಿಕ್ಕು, ಹೊಸ ಸ್ಪರ್ಷ, ಹೊಸತನಕ್ಕೆ ಇದು ನಾಂದಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ಧಾರೆ.

ರಾಹುಲ್ ಗಾಂಧಿಯಿಂದ ತಂತ್ರಜ್ಞಾನದ ಸ್ಪರ್ಶ: ಡಾ.ಆನಂದ ಕುಮಾರ್

-

Profile
Ashok Nayak Oct 7, 2026 10:27 PM

ಬೆಂಗಳೂರು: ಎಸ್.ಐ.ಆರ್(SIR) ಮೂಲಕ ಶೋಷಿತರು, ಅಲ್ಪಸಂಖ್ಯಾತರು, ದುರ್ಬಲ ವರ್ಗ ದವರ ಮತಗಳನ್ನು ಅಳಿಸಿಹಾಕಲು ನಡೆಸಿದ ಷಡ್ಯಂತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಪತ್ತೆ ಹಚ್ಚಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ನಿರ್ಣಾಯಕ ಹೋರಾಟ ನಡೆಸಲು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ(Rahul gGandhi) ಆರಂಭಿಸಿರುವ “ಸತ್ಯಾಗ್ರಹ” ಡಿಜಿಟಲ್ ವೇದಿಕೆ ಹೋರಾಟದ ಸೇನಾನಿಗಳಿಗೆ ಮತ್ತಷ್ಟು ಪುಷ್ಟಿ ನೀಡಲಿದೆ. ಡಿಜಿಟಲ್ ಜಗತ್ತಿನಲ್ಲಿ ಚದುರಿದ ಧ್ವನಿಗಳನ್ನು ಒಗ್ಗೂಡಿಸಿ, ನೈಜ ಬದಲಾವಣೆಯ ಶಕ್ತಿಯನ್ನಾಗಿ ಪರಿವರ್ತಿಸಲು ಸಹಕಾರಿಯಾಗಲಿದೆ ಎಂದು ಎಐಸಿಸಿ(AICC) ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಹೇಳಿದ್ದಾರೆ.

ಆಧುನಿಕ ತಂತ್ರಜ್ಞಾನ ಯುಗದಲ್ಲಿ ಜೆನ್ ಜಿ(Gen G) ಮತ್ತು ಆಲ್ಪಾ ಸಮುದಾಯಗಳ ಹೋರಾಟಕ್ಕೆ ಈ ವೇದಿಕೆ ಧೀಶಕ್ತಿಯಾಗಲಿದೆ. ಜನಪರ ಸಮಸ್ಯೆಗಳಷ್ಟೇ ಅಲ್ಲದೇ, ಎಸ್.ಐ.ಆರ್ ವಿರುದ್ಧದ ಹೋರಾಟಕ್ಕೆ ಇದು ಹೊಸ ರಾಷ್ಟ್ರೀಯ ವೇದಿಕೆ ಒದಗಿಸುವ ವಿಭಿನ್ನ ಪ್ರಯೋಗವಾಗಿದೆ. ಅಯೋಗದ ವಿರುದ್ಧದ ಹೋರಾಟಕ್ಕೆ ಹೊಸ ದಿಕ್ಕು, ಹೊಸ ಸ್ಪರ್ಷ, ಹೊಸತನಕ್ಕೆ ಇದು ನಾಂದಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ಧಾರೆ.

ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ವಿರುದ್ಧ ಎಫ್.ಐ.ಆರ್ ದಾಖಲಿಸಿ ಧ್ವನಿ ಅಡಗಿಸಲು ಸಾಧ್ಯವಿಲ್ಲ: ಡಾ. ಆನಂದ್ ಕುಮಾರ್

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಡಾ.ಆನಂದ ಕುಮಾರ್, ಸತ್ಯಾಗ್ರಹದ ಪರಿಕಲ್ಪನೆ ಯನ್ನು ಡಿಜಿಟಲ್ ಯುಗಕ್ಕೆ ಹೊಂದಿಸಿದ್ದು, ದೇಶದ ಜನರ ಆರ್ತನಾದಕ್ಕೆ ಇದು ಕಿವಿಯಾಗಲಿದೆ. ದೇಶದ ವಿವಿಧ ಭಾಗಗಳಲ್ಲಿ ತಮ್ಮ ಹಕ್ಕುಗಳು ಮತ್ತು ಸಮಸ್ಯೆಗಳಿಗಾಗಿ ಹೋರಾಡುತ್ತಿರುವ ಜನರು ಹಾಗೂ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸುವುದು ಸತ್ಯಾಗ್ರಹ ವೇದಿಕೆ ಪ್ರಮುಖ ಉದ್ದೇಶವಾಗಿದೆ. ವಿದ್ಯಾರ್ಥಿಗಳು, ರೈತರು, ಮಹಿಳೆಯರು, ದಲಿತರು, ಆದಿವಾಸಿಗಳು, ಯುವ ಸಮೂಹ ಸೇರಿದಂತೆ ವಿವಿಧ ಸಮುದಾಯಗಳ ಹೋರಾಟಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಬಿಂಬಿಸುವಂತೆ ಮಾಡುವ ಕೇಂದ್ರ ಬಿಂದು ಇದಾಗಿದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಯವರ ಈ ಪ್ರಯತ್ನದ ಹಿಂದೆ ಇರುವ ಮೂಲ ಆಲೋಚನೆ ಸರಳವಾಗಿದ್ದು, ಹಲವು ಭಾಗಗಳಲ್ಲಿ ಜನರು ತಮ್ಮದೇ ಆದ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದಾರೆ. ಅನೇಕ ಬಾರಿ ಆ ಹೋರಾಟಗಳು ಪರಸ್ಪರ ಸಂಪರ್ಕವಿಲ್ಲದೆ, ಸ್ಥಳೀಯ ಮಟ್ಟಕ್ಕೆ ಸೀಮಿತವಾಗುತ್ತವೆ. ಒಂದು ಗ್ರಾಮದ ಭೂಮಿ ಸಮಸ್ಯೆ, ಇನ್ನೊಂದು ಪ್ರದೇಶದ ಮಹಿಳಾ ಸುರಕ್ಷತಾ ವಿಚಾರ, ಎಲ್ಲೋ ನಡೆಯುತ್ತಿರುವ ರೈತರ ಹೋರಾಟ—ಇವೆಲ್ಲವೂ ಪ್ರತ್ಯೇಕ ಘಟನೆಗಳಂತೆ ಕಾಣಬಹುದು. ಆದರೆ ಅವುಗಳ ಹಿಂದೆ ಇರುವ ‘ನ್ಯಾಯದ ಬೇಡಿಕೆ’ ಒಂದೇ ಆಗಿದೆ. ಈ ವಿಭಿನ್ನ ಧ್ವನಿಗಳನ್ನು ಒಂದೇ ಡಿಜಿಟಲ್ ನಕ್ಷೆಯಲ್ಲಿ ತರುವ ಪ್ರಯತ್ನವೇ ‘ಸತ್ಯಾಗ್ರಹ’ ವೇದಿಕೆ. ಇಡೀ ದೇಶದಲ್ಲಿ ಎಸ್.ಐ‌.ಆರ್ ವಿರುದ್ಧ ಸಂಘಟಿತ ಹೋರಾಟ ನಡೆಸಿ ಚುನಾವಣಾ ಆಯೋಗ ಬಾಗುವಂತೆ ಮಾಡಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಇಂತಹ ಹಲವಾರು ಹೋರಾಟಗಳಿಗೆ ಮಹತ್ವದ ಜಾಲವಾಗಿ ಇದು ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಜನರ ಹಕ್ಕೊತ್ತಾಯಗಳಿಗೆ ಸತ್ಯಾಗ್ರಹದ ಮೂಲಕ ರಾಹುಲ್ ಗಾಂಧಿ ಡಿಜಿಟಲೀಕರಣದ ಸ್ಪರ್ಷ ನೀಡಿದ್ದಾರೆ. ಇದರಿಂದ ಸಾಂಪ್ರದಾಯಿಕ ರಾಜಕೀಯ ಸಂಘಟನೆಗಳಾಚೆಗೆ ಒಂದು ರೀತಿಯ ‘ಡಿಜಿಟಲ್ ಜನಚಳವಳಿ ಜಾಲ’ ರೂಪುಗೊಳ್ಳಲಿದೆ. ರಾಹುಲ್ ಗಾಂಧಿ ಈ ವೇದಿಕೆಯನ್ನು ವಿರೋಧ ಪಕ್ಷದ ನಾಯಕನಾಗಿ ಜನರ ಹೋರಾಟಗಳಿಗೆ ಧ್ವನಿಯಾಗುವ ಸಾಧನವಾಗಿ ಪ್ರಸ್ತುತಪಡಿಸಿದ್ದಾರೆ. ಸಂಸತ್ತಿನಲ್ಲಿ, ಬೀದಿಯಲ್ಲಿ ಅಥವಾ ಪತ್ರಗಳ ಮೂಲಕ—ಸಾಧ್ಯವಾದ ರೀತಿಯಲ್ಲಿ ಜನರ ಸಮಸ್ಯೆಗಳ ಹೋರಾಟದಲ್ಲಿ ತಾವು ನಿಲ್ಲುವುದಾಗಿ ಅವರು ಹೇಳಿದ್ದಾರೆ.

ಇದು ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರಲಿದೆ. ಕೇವಲ ಸರ್ಕಾರದ ನೀತಿಗಳನ್ನು ಟೀಕಿಸುವ ವಿರೋಧ ಪಕ್ಷದ ನಾಯಕನ ಬದಲು, ದೇಶದ ವಿವಿಧ ಭಾಗಗಳಲ್ಲಿನ ಅಸಮಾಧಾನ ಗಳನ್ನು ಗುರುತಿಸಿ ಅವುಗಳನ್ನು ರಾಜಕೀಯವಾಗಿ ಒಗ್ಗೂಡಿಸುವ ಪ್ರಯತ್ನ ಇದಾಗಿದೆ. ಎರಡೂ ದೃಷ್ಟಿಕೋನಗಳು ವಾಸ್ತವತೆಯಿಂದ ಕೂಡಿವೆ.

ಜನರ ಸಮಸ್ಯೆಗಳನ್ನು ರಾಜಕೀಯ ಪಕ್ಷಗಳು ವಿಭಿನ್ನವಾಗಿ ನೋಡಬೇಕು ಎಂಬುದಕ್ಕೆ ಇದು ಜ್ವಲಂತ ನಿದರ್ಶನವಾಗಿದೆ. ಈ ವೇದಿಕೆಯು ವಿಶ್ವಾಸಾರ್ಹತೆ ಹೊಂದಿದ್ದು, ಜನರ ಸಮಸ್ಯೆಗಳಿಗೆ ಆದ್ಯತೆ ದೊರೆಯಲಿದೆ. ರಾಹುಲ್ ಗಾಂಧಿ ಅವರ ತಂಡ ಪ್ರತಿಯೊಂದು ಮನವಿಯನ್ನು ಪರಿಶೀಲಿಸಿ, ಅಗತ್ಯವಿರುವ ಕಡೆ ನೆರವು ನೀಡುವುದಾಗಿ ಹೇಳಿದೆ. ಅಭಿಯಾನ ಒಂದು ದಿನದ ಕಾರ್ಯಕ್ರಮವಲ್ಲ, ದೀರ್ಘಾವಧಿಯ ಪ್ರಯತ್ನವಾಗಲಿದೆ. ಭಾರತದ ರಾಜಕೀಯದಲ್ಲಿ ಚಳವಳಿಗಳು ಹೊಸದಲ್ಲ. ಆದರೆ ಚಳವಳಿಗಳನ್ನು ಡಿಜಿಟಲ್ ನಕ್ಷೆಯಲ್ಲಿ ಜೋಡಿಸಿ, ಅವುಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸುವ ಪ್ರಯತ್ನ ಹೊಸ ರಾಜಕೀಯ ಪ್ರಯೋಗವಾಗಿದೆ ಎಂದು ಡಾ.ಆನಂದ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ಗಾಂಧಿಯವರ ‘ಸತ್ಯಾಗ್ರಹ’ ವೇದಿಕೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ನೀಡಲಿದೆ. ಅದು ಕೇವಲ ಕಾಂಗ್ರೆಸ್‌ನ ಡಿಜಿಟಲ್ ಪ್ರಚಾರ ವೇದಿಕೆಯಲ್ಲ. ನಿಜವಾದ ಜನಹೋರಾಟಗಳಿಗೆ ಸಂಪರ್ಕ, ಬೆಂಬಲ ಮತ್ತು ರಾಜಕೀಯ ಪ್ರಭಾವ ಒದಗಿಸುವ ರಾಷ್ಟ್ರೀಯ ವೇದಿಕೆಯಾಗಿ ಪರಿವರ್ತನೆ ತರಲಿದೆ. ಹೋರಾಟ ವಲಯದಲ್ಲಿ ಇದು ಹೊಸ ಅಧ್ಯಾಯದ ಪುಟಗಳನ್ನು ತೆರೆಯಲಿದೆ ಎಂದಿದ್ದಾರೆ.