Seasonal Flu: ರಾಜ್ಯದಲ್ಲಿ ಹವಾಮಾನ ಬದಲಾವಣೆಯಿಂದ ಸೀಸನಲ್ ಫ್ಲೂ ಆತಂಕ; ಮಾರ್ಗಸೂಚಿ ಬಿಡುಗಡೆ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹವಾಮಾನ ಬದಲಾಗುತ್ತಿದೆ. ಇದರಿಂದಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸದ್ಯ ಸೀಸನಲ್ ಫ್ಲೂ (seasonal flu) ಭೀತಿ ಶುರುವಾಗಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಸಾಂಧರ್ಬಿಕ ಚಿತ್ರ -
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹವಾಮಾನ ಬದಲಾಗುತ್ತಿದೆ. ಇದರಿಂದಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸದ್ಯ ಸೀಸನಲ್ ಫ್ಲೂ (seasonal flu) ಭೀತಿ ಶುರುವಾಗಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್, ಜನವರಿಯಿಂದ ಮಾರ್ಚ್ ತನಕ ಸೀಸನಲ್ ಫ್ಲೂ ಹೆಚ್ಚಳದ ಭೀತಿ ಉಂಟಾಗಿದ್ದು, ಈ ಹಿನ್ನೆಲೆ ಕ್ರಮ ಕೈಗೊಳ್ಳಲು ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಡಿಸೆಂಬರ್, ಜನವರಿಯಿಂದ ಮಾರ್ಚ್ ತನಕ ಸೀಸನಲ್ ಫ್ಲೂ (Seasonal Flu) ಹೆಚ್ಚಳದ ಭೀತಿ ಉಂಟಾಗಿದ್ದು, ಈ ಹಿನ್ನೆಲೆ ಕ್ರಮ ಕೈಗೊಳ್ಳಲು ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಮಕ್ಕಳು, ಹಿರಿಯರು, ಗರ್ಭಿಣಿಯರು, ಕೋಮಾರ್ಬಿಟೀಸ್ ಪೇಶೆಂಟ್ಗಳಿಗೆ ಹೆಚ್ಚಿನ ಅಪಾಯಕಾರಿ ಆಗಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಫ್ಲೂ ಲಕ್ಷಣಗಳೇನು?
ಜ್ವರ, ಕೆಮ್ಮು, ಕೆಂಪು ಗುಳ್ಳೆ, ಹಸಿವು ಆಗದಿರುವುದು, ಮೈಕೈ ನೋವು, ಶೀತ, ಒಣ ಕೆಮ್ಮು ಸೀಸನಲ್ ಫ್ಲೂನ ಪ್ರಮುಖ ಗುಣ ಲಕ್ಷಣಗಳಾಗಿದ್ದು, ಸೀಸನಲ್ ಫ್ಲೂ ಸಾಮಾನ್ಯವಾಗಿ ಒಂದು ವಾರ ಅಥವಾ 3 ವಾರಗಳ ಕಾಲ ಇರಲಿದೆ. ಮುನ್ನೆಚ್ಚರಿಕೆ ಅತ್ಯಗತ್ಯ.
ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ಏನಿದೆ?
ಪ್ರತಿ ದಿನ ಕನಿಷ್ಟ 5ರಷ್ಟು ಐಎಲ್ಐ ಕೇಸ್, 100ರಷ್ಟು ಸಾರಿ (SARI) ಕೇಸ್ಗಳ ಪರೀಕ್ಷೆಗೆ ಸೂಚನೆ.
ಎಲ್ಲಾ ಪ್ರಯೋಗಾಲಯಗಳಲ್ಲಿ ಸೂಕ್ತ ಟೆಸ್ಟಿಂಗ್ ಕಿಟ್ಗಳನ್ನು ಇರಿಸಿಕೊಳ್ಳುವುದು
ಪಿಪಿಇ ಕಿಟ್ಗಳು, ಎನ್95 ಮಾಸ್ಕ್, oseltamivir ಮಾತ್ರೆಗಳು ಸೇರಿ ಅಗತ್ಯ ಔಷಧಗಳ ಶೇಖರಣೆಗೆ ಸೂಚನೆ
ಇನ್ಫ್ಲೂಯೆನ್ಸ್ ಲಸಿಕೆ ಶೇಖರಣೆ
ಹೆಲ್ತ್ ಕೇರ್ ವರ್ಕರ್ಸ್, ಗರ್ಭಿಣಿಯರು, ಹೆಚ್ಚಿನ ಅಪಾಯವುಳ್ಳ ರೋಗಿಗಳು ಸೂಕ್ತ ಲಸಿಕೆ ಪಡೆಯುವಂತೆ ಸಲಹೆ
ಕ್ಲಿನಿಕಲ್ ಮ್ಯಾನೇಜ್ಮೆಂಟ್ ಹಾಗೂ ಕ್ರಿಟಿಕಲ್ ಕೇರ್ ಸಿದ್ಧತೆ
ವೆಂಟಿಲೇಟರ್ಗಳ ಸಿದ್ಧತೆಗೆ ಸಲಹೆ
ಜಾಗೃತಿ ಮೂಡಿಸುವುದು ಮತ್ತು ಸರಿಯಾದ ಸಮಯದಲ್ಲಿ ಮಾನಿಟರಿಂಗ್ಗೆ ಕರೆ ನೀಡಲಾಗಿದೆ.