ಬೆಂಗಳೂರಿನಲ್ಲಿ 'ಸ್ಮೈಲ್‌ಥಾನ್' ಸಂಭ್ರಮ: ಸ್ಯಾಂಡಲ್‌ವುಡ್-ಬಾಲಿವುಡ್ ತಾರೆಯರಿಂದ ಸಾಥ್!
ಸ್ಮೈಲ್‌ಥಾನ್ ಕೇವಲ ಸೌಂದರ್ಯ ಸ್ಪರ್ಧೆಯಲ್ಲ, ಇದು ಆರೋಗ್ಯ ಜಾಗೃತಿಯ ಒಂದು ಚಳವಳಿ. ತಡೆಗಟ್ಟುವ ದಂತ ಆರೈಕೆ, ನಿಯಮಿತ ಬಾಯಿ ಸ್ವಚ್ಛತೆ ಮತ್ತು ಆತ್ಮವಿಶ್ವಾಸಭರಿತ ನಗೆಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಾಗಿದೆ
-
ಬೆಂಗಳೂರು: ಕರ್ನಾಟಕದ ಮೊಟ್ಟಮೊದಲ ಓರಲ್ ಹೆಲ್ತ್ ಜಾಗೃತಿ ಮತ್ತು 'ಸ್ಮೈಲ್ ಪೇಜೆಂಟ್' (Smile Pageant) ಉಪಕ್ರಮವಾದ 'ಸ್ಮೈಲ್‌ಥಾನ್', ಬೆಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ರಾಜ್ಯದ ಆರೋಗ್ಯಕರ ನಗೆ ಹಾಗೂ ಆತ್ಮವಿಶ್ವಾಸವನ್ನು ಗೌರವಿ ಸುವ ಈ ಸಮಾರಂಭವು, ದಂತ ಆರೈಕೆ ಮತ್ತು ವ್ಯಕ್ತಿತ್ವ ವಿಕಾಸವನ್ನು ಒಂದೇ ವೇದಿಕೆ ಯಲ್ಲಿ ತರುವ ಮೂಲಕ ಹೊಸ ಸಂಚಲನ ಮೂಡಿಸಿತು.
ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಜರೀನ್ ಖಾನ್, ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್, ಸಚಿವ ಎಂ.ಸಿ. ಸುಧಾಕರ್, ಮಾಜಿ ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ, ಶಾಸಕ ಭರತ್ ಶೆಟ್ಟಿ ವೈ, ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ನಟಿ ರಾಧಿಕಾ ನಾರಾಯಣ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಆಯೋಜಕರ ಪ್ರಕಾರ, ಸ್ಮೈಲ್‌ಥಾನ್ ಕೇವಲ ಸೌಂದರ್ಯ ಸ್ಪರ್ಧೆಯಲ್ಲ, ಇದು ಆರೋಗ್ಯ ಜಾಗೃತಿಯ ಒಂದು ಚಳವಳಿ. ತಡೆಗಟ್ಟುವ ದಂತ ಆರೈಕೆ, ನಿಯಮಿತ ಬಾಯಿ ಸ್ವಚ್ಛತೆ ಮತ್ತು ಆತ್ಮವಿಶ್ವಾಸಭರಿತ ನಗೆಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: Bangalore Tunnel Road: ಸಂಚಾರ ದಟ್ಟಣೆ ಮುಕ್ತಿಗೆ ಬೆಂಗಳೂರಿನಲ್ಲಿ ಶೀಘ್ರವೇ ಮತ್ತೊಂದು ಸುರಂಗ ಮಾರ್ಗ
ಪ್ರಶಸ್ತಿ ವಿಜೇತರು:
18–29 ವರ್ಷ (ಮಹಿಳಾ ವಿಭಾಗ)
ಮಿಸ್ ಕರ್ನಾಟಕ ಸ್ಮೈಲ್ – ಶ್ರೀಷ್ಮಾ ಹೆಗ್ಡೆ
ರನ್ನರ್-ಅಪ್ – ಡಾ. ಸೋಫಿಯಾ ಸೌದ್
30–45 ವರ್ಷ (ಮಹಿಳಾ ವಿಭಾಗ)
ಮಿಸ್ ಕರ್ನಾಟಕ ಸ್ಮೈಲ್ – ಡಾ. ದಿವ್ಯಾರಾಣಿ ಎಂ.ಎನ್
ರನ್ನರ್-ಅಪ್ – ರಂಜಿತಾ ಸುಂದರ್
18–29 ವರ್ಷ (ಪುರುಷ ವಿಭಾಗ)
ಮಿಸ್ಟರ್ ಕರ್ನಾಟಕ ಸ್ಮೈಲ್ – ಹಂಝಾ ಅಲಿ ಅಹ್ಮದ್
ರನ್ನರ್-ಅಪ್ – ಡಾ. ಆರ್ಯನ್ ದಾಸ್
ಸೋಶಿಯಲ್ ಮೀಡಿಯಾ ವಿಭಾಗ
ಮಿಸ್ ಸೋಶಿಯಲ್ ಮೀಡಿಯಾ – ಡಾ. ಮಂಜುಷಾ ಪ್ರಮೋದ್
ಮಿಸ್ಟರ್ ಸೋಶಿಯಲ್ ಮೀಡಿಯಾ – ವಿಜಯ್ ಮೋಹನ್
ಡಾ.ಅಕ್ಷಯ್ ಎಂ. ಶೆಟ್ಟಿ ಸ್ಥಾಪಿಸಿದ ಈ ಉಪಕ್ರಮಕ್ಕೆ ನಿಖಿಲಾ ಹಳ್ಳಿಕೇರಿ ಸಹ-ಸ್ಥಾಪಕ ರಾಗಿದ್ದಾರೆ. ಡಾ. ಚರಣ್ ಕುಮಾರ್ ಶೆಟ್ಟಿ, ಡಾ. ಸತೀಶ್ ಕುಮಾರ್ ಹಾಗೂ ಪ್ರಸಾದ್ ನರಸಿಂಹ ಅವರ ನೇತೃತ್ವದ ಸ್ಮೈಲ್‌ಥಾನ್ ಸಮಿತಿಯು ಕಾರ್ಯಕ್ರಮವನ್ನು ಯಶಸ್ವಿ ಯಾಗಿ ನಡೆಸಿಕೊಟ್ಟಿತು. ಈ ಕಾರ್ಯಕ್ರಮಕ್ಕೆ ಇಂಡಿಯನ್ ಡೆಂಟಲ್ ಅಸೋಸಿಯೇಷನ್ (ಕರ್ನಾಟಕ), ADDA ಹಾಗೂ IPS (ಬೆಂಗಳೂರು) ಸಂಸ್ಥೆಗಳು ಸಹಭಾಗಿತ್ವ ನೀಡಿದ್ದವು.
ರೋಟರಿ ಬೆಂಗಳೂರು ಸೋಶಿಯಲ್ ಕ್ಲಬ್ ಸಮುದಾಯ ಮಟ್ಟದಲ್ಲಿ ಬೆಂಬಲ ನೀಡಿದ್ದು, ಕಾರ್ಯಕ್ರಮದ ಒಂದು ಭಾಗವನ್ನು ಸಾಮಾಜಿಕ ಸೇವೆಗಾಗಿ ಮೀಸಲಿರಿಸಲಾಗಿದೆ.
ಆರೋಗ್ಯ ಜಾಗೃತಿ, ಸಂಭ್ರಮ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಒಟ್ಟುಗೂಡಿಸಿ ರುವ ಸ್ಮೈಲ್‌ಥಾನ್, "ಆರೋಗ್ಯಕರ ನಗೆ ಎಂದರೆ ಕೇವಲ ಸೌಂದರ್ಯವಲ್ಲ ಅದು ಜಾಗೃತಿ ಮತ್ತು ಆತ್ಮವಿಶ್ವಾಸದ ಸಂಕೇತ" ಎಂಬ ಸಂದೇಶವನ್ನು ರಾಜ್ಯದಾದ್ಯಂತ ಸಾರಿದೆ.