Assault Case: ಪಿವಿಸಿ ಪೈಪ್‌ನಿಂದ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿತ, ಶಿಕ್ಷಕಿ, ಪ್ರಾಂಶುಪಾಲರ ಮೇಲೆ ಎಫ್‌ಐಆರ್
Bengaluru: 9ನೇ ತರಗತಿ ವಿದ್ಯಾರ್ಥಿ ಎರಡು ದಿನ ಶಾಲೆಗೆ ಬಂದಿರಲಿಲ್ಲ. ಮಾರನೆ ದಿನ ಶಾಲೆಗೆ ಹೋಗುತ್ತಿದ್ದಂತೆ ಶಿಕ್ಷಕಿ ಹಾಗೂ ಪ್ರಾಂಶುಪಾಲ ರಾಕೇಶ್ ಕುಮಾರ್ ವಿದ್ಯಾರ್ಥಿಯನ್ನು ಪಿವಿಸಿ ಪೈಪ್‌ನಿಂದ ಹೊಡೆದಿದ್ದು, ಗಂಭೀರವಾಗಿ ಹಲ್ಲೆಗೊಳಗಾಗಿರುವ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

-

ಬೆಂಗಳೂರು: ಬೆಂಗಳೂರಿನ (Bengaluru) ಪ್ರೌಢಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿಗೆ ಪಿವಿಸಿ ಪೈಪ್‌ನಿಂದ ಬಾಸುಂಡೆ ಬರುವಂತೆ ಥಳಿಸಿರುವ (Assault Case) ಘಟನೆ ನಡೆದಿದೆ. ಬೆಂಗಳೂರಿನ ಸುಂಕದಕಟ್ಟೆಯ ಖಾಸಗಿ ಶಾಲೆಯಲ್ಲಿ ಪಿವಿಸಿ ಪೈಪ್‌ನಿಂದ 9ನೇ ತರಗತಿ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಲಾಗಿದೆ. ಎರಡು ದಿನ ಶಾಲೆಗೆ ಬರದಿದ್ದಕ್ಕೆ ಪಿವಿಸಿ ಪೈಪ್ ಬಳಸಿ ಈ ಪರಿಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
9ನೇ ತರಗತಿ ವಿದ್ಯಾರ್ಥಿ ಎರಡು ದಿನ ಶಾಲೆಗೆ ಬಂದಿರಲಿಲ್ಲ. ಮಾರನೆ ದಿನ ಶಾಲೆಗೆ ಹೋಗುತ್ತಿದ್ದಂತೆ ಶಿಕ್ಷಕಿ ಹಾಗೂ ಪ್ರಾಂಶುಪಾಲ ರಾಕೇಶ್ ಕುಮಾರ್ ವಿದ್ಯಾರ್ಥಿಯನ್ನು ಪಿವಿಸಿ ಪೈಪ್‌ನಿಂದ ಹೊಡೆದಿದ್ದು, ಗಂಭೀರವಾಗಿ ಹಲ್ಲೆಗೊಳಗಾಗಿರುವ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದೆ. ಈ ಬಗ್ಗೆ ವಿದ್ಯಾರ್ಥಿಯ ತಾಯಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಿಕ್ಷಕಿ ಹಾಗೂ ಪ್ರಾಂಶುಪಾಲ ರಾಕೇಶ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜಿಟಿ ಮಾಲ್‌ನ ಮೂರನೇ ಮಹಡಿಯಿಂದ ಕೆಳಬಿದ್ದು ಯುವಕ ಸಾವು
ಸೀನಿಯರ್ ಕಿರುಕುಳ, ಪಿಜಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಮತ್ತೊಂದು ಘೋರ ದುರಂತ ಘಟನೆ ನಡೆದಿದೆ. ಸೀನಿಯರ್ ವಿದ್ಯಾರ್ಥಿ ನೀಡುವ ಕಿರುಕುಳ (Harassment) ತಡೆಯಲಾರದೆ ಬೆಂಗಳೂರಿನ ಬಾಗಲೂರಿನ ಪಿಜಿಯಲ್ಲಿ ಬಿಬಿಎ ವಿದ್ಯಾರ್ಥಿನಿಯೊಬ್ಬಳು ತಾನು ವಾಸಿಸುತ್ತಿದ್ದ ಪಿಜಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Self Harming) ಶರಣಾಗಿದ್ದಾಳೆ. ಮೃತ ವಿದ್ಯಾರ್ಥಿನಿಯನ್ನು ಸನಾ ಪರ್ವೀನ್ ಎಂದು ಗುರುತಿಸಲಾಗಿದೆ.
ಸನಾ ಸಾವಿಗೆ ಆಕೆ ಓದುತ್ತಿದ್ದ ಕಾಲೇಜಿನ ಪಾಸ್ ಔಟ್ ವಿದ್ಯಾರ್ಥಿ ಕಾರಣ ಎಂದು ಹೇಳಲಾಗುತ್ತಿದೆ. ಮೃತ ಸನಾ ಕುಟುಂಬದವರಿಂದ ರಿಫಾಸ್ ಎನ್ನುವ ವಿದ್ಯಾರ್ಥಿಯ ವಿರುದ್ಧ ಆರೋಪ ಕೇಳಿ ಬಂದಿದೆ. ಸನಾ ಪರ್ವೀನ್ ಓದುತ್ತಿದ್ದ ಕಾಲೇಜಿನಲ್ಲಿ ರಿಫಾಸ್ ಸಹ ಓದುತ್ತಿದ್ದ. ಈತ ಪಾಸ್ ಔಟ್ ಆಗಿದ್ದರೂ ಸನಾಗೆ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ.
ರಿಫಾಸ್ ಮೂಲತಃ ಕೇರಳ ವಿದ್ಯಾರ್ಥಿಯಾಗಿದ್ದು ಕಳೆದ 10 ತಿಂಗಳ ಹಿಂದೆ ಪರ್ವೀನ್‌ಗೆ ಸಾಕಷ್ಟು ಕಿರುಕುಳ ನೀಡಿದ್ದಾನೆ. ಪಾಸ್ ಔಟ್ ಆದ ನಂತರ ಕೂಡ ಈಕೆ ಓದುತ್ತಿದ್ದ ಕಾಲೇಜಿಗೆ ಬಂದು ಹೋಗಿ ಮಾಡುತ್ತಿದ್ದ. ಪಿಜಿ ಬಳಿಗೆ ಬಂದು ಸಾಕಷ್ಟು ಹಿಂಸೆ ಕೊಡುತ್ತಿದ್ದ ಎಂದು ಸ್ನೇಹಿತರು ಹೇಳಿದ್ದಾರೆ. ಈ ಸಂಬಂಧ ಕಾಲೇಜಿನಲ್ಲಿ ಕೆಲವು ಘಟನೆಗಳು ನಡೆದಿವೆ ಎಂದು ಸನಾ ಸ್ನೇಹಿತೆಯರು ತಿಳಿಸಿದ್ದಾರೆ. ಈ ಕುರಿತು ಬಾಗಲೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.