ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಿಳಾ ವಿಶ್ವಕಪ್‌ ಸೆಮಿ; ಒಂದು ಸ್ಥಾನಕ್ಕೆ 5 ತಂಡಗಳ ಮಧ್ಯೆ ಪೈಪೋಟಿ

Women's ODI World Cup 2025: ಭಾರತ ತಂಡ ನ್ಯೂಜಿಲೆಂಡ್ ಅನ್ನು ಸೋಲಿಸಿದರೂ ಬಾಂಗ್ಲಾದೇಶ ವಿರುದ್ಧ ಸೋತರೆ, ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಸೋತರೆ ಮತ್ತು ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ತಮ್ಮ ಉಳಿದ ಎರಡು ಲೀಗ್ ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಗೆಲ್ಲಲು ವಿಫಲವಾದರೆ ಭಾರತವೂ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ.

ಮಹಿಳಾ ವಿಶ್ವಕಪ್‌ ಸೆಮಿ; ಒಂದು ಸ್ಥಾನಕ್ಕೆ 5 ತಂಡಗಳ ಮಧ್ಯೆ ಪೈಪೋಟಿ

-

Abhilash BC Abhilash BC Oct 20, 2025 3:36 PM

ನವದೆಹಲಿ: ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನೆಡೆಯುತ್ತಿರುವ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿ(Women's ODI World Cup 2025) ಮಹತ್ವದ ಘಟ್ಟ ತಲುಪಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್‌ ತಲುಪಿದೆ. ಉಳಿದ ಒಂದು ಸ್ಥಾನಕ್ಕಾಗಿ 5 ತಂಡಗಳ ಮಧ್ಯೆ ಹಲವು ಲೆಕ್ಕಾಚಾರದ ಪೈಪೋಟಿ ಏರ್ಪಟ್ಟಿದೆ. ಸೆಮಿ( Women's World Cup semi final scenario) ತಲುಪಬೇಕಿದ್ದರೆ ಏಷ್ಟು ಗೆಲುವು ಅಗತ್ಯ, ಯಾವ ತಂಡ ಸೋತರೆ ಅವಕಾಶ ಹೀಗೆ ಹಲವು ಕುತೂಹಲಕಾರಿ ವಿವರ ಇಲ್ಲಿದೆ.

ಭಾರತ

ಅಕ್ಟೋಬರ್ 23 ರಂದು ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯುವ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ಮತ್ತು ಅಕ್ಟೋಬರ್ 26 ರಂದು ನಡೆಯುವ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿದರೆ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ.

ಭಾರತ ತಂಡ ನ್ಯೂಜಿಲೆಂಡ್ ಅನ್ನು ಸೋಲಿಸಿದರೂ ಬಾಂಗ್ಲಾದೇಶ ವಿರುದ್ಧ ಸೋತರೆ, ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಸೋತರೆ ಮತ್ತು ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ತಮ್ಮ ಉಳಿದ ಎರಡು ಲೀಗ್ ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಗೆಲ್ಲಲು ವಿಫಲವಾದರೆ ಭಾರತವೂ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ.

ನ್ಯೂಜಿಲೆಂಡ್‌

ನ್ಯೂಜಿಲೆಂಡ್‌ ತಂಡ, ಅಕ್ಟೋಬರ್ 23 ಮತ್ತು 26 ರಂದು ನಡೆಯಲಿರುವ ತಮ್ಮ ಕೊನೆಯ ಎರಡು ಲೀಗ್ ಪಂದ್ಯಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳನ್ನು ಕ್ರಮವಾಗಿ ಸೋಲಿಸಿದರೆ ನಾಲ್ಕಕನೇ ತಂಡವಾಗಿ ಕಿವೀಸ್‌ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಒಂದೊಮ್ಮೆ ಭಾರತವನ್ನು ಸೋಲಿಸಿ, ಇಂಗ್ಲೆಂಡ್ ವಿರುದ್ಧ ಸೋತರೆ, ಭಾರತ ತಂಡ ಬಾಂಗ್ಲಾ ಎದುರು ಗೆದ್ದರೆ ಆಗ ರನ್‌ರೇಟ್‌ ಆಧಾರದಲ್ಲಿ ಮುಂದಿರುವ ತಂಡಕ್ಕೆ ಹೆಚ್ಚಿನ ಅವಕಾಶ ಸಿಗಲಿದೆ. ಸದ್ಯ ರನ್‌ರೇಟ್‌ನಲ್ಲಿ ಭಾರತ ಮುಂದಿದೆ.

ಇದನ್ನೂ ಓದಿ ಇಂಗ್ಲೆಂಡ್‌ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ಗೆ ಚಾನ್ಸ್‌ ಇದೆಯಾ? ಇಲ್ಲಿದೆ ಲೆಕ್ಕಾಚಾರ!

ಬಾಂಗ್ಲಾದೇಶ

ಆಡಿದ 5 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿರುವ ಬಾಂಗ್ಲಾದೇಶ ತಂಡ 2 ಅಂಕದೊಂದಿಗೆ 6ನೇ ಸ್ಥಾನದಲ್ಲಿದೆ. ತಂಡಕ್ಕೆ ಎರಡು ಪಂದ್ಯ ಬಾಕಿ ಉಳಿದಿದೆ. ಎದುರಾಳಿ ಭಾರತ ಮತ್ತು ಶ್ರೀಲಂಕಾ. ಸೆಮಿ ಪ್ರವೇಶಿಸಬೇಕಿದ್ದರೆ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲುವ ಜತೆಗೆ ಭಾರತ ಮತ್ತು ಕಿವೀಸ್‌ ಸೋಲನ್ನು ಬಯಸಬೇಕಿದೆ.

ಶ್ರೀಲಂಕಾ

ಲಂಕಾ ತಂಡ ಬಾಂಗ್ಲಾದೇಶ ವಿರುದ್ಧ ಮತ್ತು ಪಾಕಿಸ್ತಾನ ವಿರುದ್ಧದ ಕೊನೆಯ ಎರಡು ಲೀಗ್ ಪಂದ್ಯಗಳನ್ನು ಗೆದ್ದರೆ ಮತ್ತು ಅಕ್ಟೋಬರ್ 23 ರಂದು ನಡೆಯಲಿರುವ ಭಾರತ-ನ್ಯೂಜಿಲೆಂಡ್ ಪಂದ್ಯವು ಡ್ರಾದಲ್ಲಿ ಕೊನೆಗೊಂಡರೆ, ಶ್ರೀಲಂಕಾ ಮೊದಲ ನಾಲ್ಕು ಸ್ಥಾನಗಳಲ್ಲಿ ಸ್ಥಾನ ಪಡೆದು ಸೆಮಿಫೈನಲ್‌ಗೆ ಪ್ರವೇಶಿಸುತ್ತದೆ. ನಂತರ ಭಾರತ ಮತ್ತು ನ್ಯೂಜಿಲೆಂಡ್ ಎರಡೂ ಕ್ರಮವಾಗಿ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧದ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಸೋಲನುಭವಿಸುತ್ತವೆ.

ಇದನ್ನೂ ಓದಿ ಅರ್ಧಶತಕದ ಮೂಲಕ ವಿಶ್ವಕಪ್‌ ಟೂರ್ನಿಯಲ್ಲಿ ನೂತನ ದಾಖಲೆ ಬರೆದ ಹರ್ಮನ್‌ಪ್ರೀತ್‌ ಕೌರ್‌!

ಪಾಕಿಸ್ತಾನ

ಕೊನೆಯ ಸ್ಥಾನದಲ್ಲಿರುವ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾ (ಅಕ್ಟೋಬರ್ 21) ಮತ್ತು ಶ್ರೀಲಂಕಾ (ಅಕ್ಟೋಬರ್ 24) ವಿರುದ್ಧದ ಕೊನೆಯ ಎರಡು ಲೀಗ್ ಪಂದ್ಯಗಳನ್ನು ಗೆದ್ದರೆ ಮತ್ತು ಭಾರತ-ನ್ಯೂಜಿಲೆಂಡ್ ಪಂದ್ಯ ಡ್ರಾದಲ್ಲಿ ಕೊನೆಗೊಂಡರೆ, ನಂತರ ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಮ್ಮ ಕೊನೆಯ ಲೀಗ್ ಪಂದ್ಯವನ್ನು ಸೋತರೆ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಜತೆಗೆ ಪವಾಡವೊಂದು ಸಂಭವಿಸಿದರಷ್ಟೇ ತಂಡಕ್ಕೆ ಸೆಮಿ ಅವಕಾಶ ಸಿಗಬಹುದು.