ಶಿಕ್ಷಣದಲ್ಲಿ ನೈತಿಕತೆ, ಜ್ಞಾನ ಮತ್ತು ಮಾನವೀಯತೆ ಸಂಯೋಜಿಸುವ ಅಗತ್ಯವಿದೆ : ಎಐಸಿಟಿಇ ಅಧ್ಯಕ್ಷ ಡಾ.ಟಿ.ಜಿ.ಸೀತಾರಾಮ್
ವಸಾಹತುಶಾಹಿಯ ಪರಿಣಾಮದಿಂದ ಭಾರತೀಯ ಜ್ಞಾನ ವ್ಯವಸ್ಥೆಯ ಅಪಾರ ಸಂಪತ್ತನ್ನು ಪಕ್ಕಕ್ಕೆ ತಳ್ಳಲಾ ಗಿತ್ತು. ಐಕೆಎಸ್ ಅನ್ನು ಸಮಕಾಲೀನ ಶಿಕ್ಷಣದೊಂದಿಗೆ ಸಂಯೋಜಿಸುವುದು ಶಾಶ್ವತ ಶಿಕ್ಷಣದ ಮಾರ್ಗವಾಗಿದ್ದು, ಅದು ಜೀವನಪರ್ಯಂತ ಕಲಿಕೆ, ವಿಮರ್ಶಾತ್ಮಕ ಚಿಂತನೆ, ಅಂತರಶಾಸ್ತ್ರೀಯ ದೃಷ್ಟಿಕೋನ ಮತ್ತು ಸಮಾಜ-ಪರಿಸರದತ್ತ ಜವಾಬ್ದಾರಿ ಬೆಳೆಸುತ್ತದೆ
-
ಬೆಂಗಳೂರು: ಶಿಕ್ಷಣದಲ್ಲಿ ನೈತಿಕತೆ, ಜ್ಞಾನ ಮತ್ತು ಮಾನವೀಯತೆಯನ್ನು ಸಂಯೋಜಿಸು ವುದು ನಮ್ಮ ಮುಂದಿರುವ ಮಹತ್ವದ ಹಾದಿಯಾಗಿದೆ ಎಂದು ಎಐಸಿಟಿಇ ಅಧ್ಯಕ್ಷ ಡಾ. ಟಿ. ಜಿ. ಸಿತಾರಾಮ್ ಹೇಳಿದ್ದಾರೆ.
ಇಂಡಿಯನ್ ಕೌನ್ಸಿಲ್ ಫಾರ್ ಹೈಯರ್ ಎಜ್ಯುಕೇಶನ್ ನಿಂದ ಕೆಂಗೇರಿ ಬಳಿ ಇರುವ ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಶನ್ (ಎಐಎಂಎ) ಸಹಯೋಗದಲ್ಲಿ ಹಾಗೂ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಶನ್ (ಎಐಸಿಟಿಇ) ಆಯೋಜಿಸಿದ್ದ “ಮಂಥನ್: ಸಮಕಾಲೀನ ಉನ್ನತ ಶಿಕ್ಷಣದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯ ಸಂಯೋ ಜನೆ” ಕುರಿತ ವೈಸ್ ಚಾನ್ಸಲರ್ಸ್ ಕಾನ್ಕ್ಲೇವ್ ನಲ್ಲಿ ಮಾತನಾಡಿದ ಅವರು, ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಮಗ್ರ ಮತ್ತು ಅಂತರಶಾಸ್ತ್ರೀಯ ದೃಷ್ಟಿಕೋನವನ್ನು ಅಳವಡಿಸಿ ಕೊಳ್ಳುವ ಅಗತ್ಯವಿದೆ. ಭಾರತೀಯ ಜ್ಞಾನ ವ್ಯವಸ್ಥೆಯನ್ನು ನೈಜ ಶಿಕ್ಷಣದಡಿ ಜಾರಿ ಗೊಳಿಸುವುದೇ ದೊಡ್ಡ ಸವಾಲು ಎಂದು ಅವರು ಹೇಳಿದರು.
ಇದನ್ನೂ ಓದಿ: Bangalore Traffic:: ಬೆಂಗಳೂರಿನ ಟ್ರಾಫಿಕ್ ದಟ್ಟಣೆ ನಿವಾರಣೆಗೆ ʼಕೋಬ್ರಾ ಬೀಟ್ʼ, ಏನಿದು?
ಸಿಇಎಸ್ ಎಸ್ ಅಧ್ಯಕ್ಷ, ಶಿಕ್ಷಣ ತಜ್ಞ ಡಾ. ಎಂ. ಕೆ. ಶ್ರೀಧರ ಮಾತನಾಡಿ, ಭಾರತೀಯ ಜ್ಞಾನ ವ್ಯವಸ್ಥೆಯನ್ನು ಇಂದಿನ ಮತ್ತು ಭವಿಷ್ಯದ ಶಿಕ್ಷಣದ ಅಗತ್ಯತೆಗಳನ್ನು ಗಮನದಲ್ಲಿಟ್ಟು ಕೊಂಡು ಸಂಯೋಜಿಸಬೇಕು. ಈ ಕಾರ್ಯವನ್ನು ಸೂಕ್ಷ್ಮ ಹಂತದಲ್ಲಿ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.
ಐಸಿಎಫ್‌ಎಐ ಉಪಕುಲಪತಿ ಡಾ. ಟಿ ಕೋಟಿರೆಡ್ಡಿ ಮಾತನಾಡಿ, ವಸಾಹತುಶಾಹಿಯ ಪರಿಣಾಮದಿಂದ ಭಾರತೀಯ ಜ್ಞಾನ ವ್ಯವಸ್ಥೆಯ ಅಪಾರ ಸಂಪತ್ತನ್ನು ಪಕ್ಕಕ್ಕೆ ತಳ್ಳಲಾ ಗಿತ್ತು. ಐಕೆಎಸ್ ಅನ್ನು ಸಮಕಾಲೀನ ಶಿಕ್ಷಣದೊಂದಿಗೆ ಸಂಯೋಜಿಸುವುದು ಶಾಶ್ವತ ಶಿಕ್ಷಣದ ಮಾರ್ಗವಾಗಿದ್ದು, ಅದು ಜೀವನಪರ್ಯಂತ ಕಲಿಕೆ, ವಿಮರ್ಶಾತ್ಮಕ ಚಿಂತನೆ, ಅಂತರಶಾಸ್ತ್ರೀಯ ದೃಷ್ಟಿಕೋನ ಮತ್ತು ಸಮಾಜ-ಪರಿಸರದತ್ತ ಜವಾಬ್ದಾರಿ ಬೆಳೆಸುತ್ತದೆ ಎಂದರು.
ಐಎಫ್‌ಎಚ್‌ಸಿ ಉಪ ಕುಲಪತಿ ಡಾ. ಮುದ್ದು ವಿನಯ್ ಮಾತನಾಡಿ, ಭಾರತೀಯ ಜ್ಞಾನ ವ್ಯವಸ್ಥೆ ಕೃತಕ ಬುದ್ಧಿಮತ್ತೆ, ಶಿಕ್ಷಣ, ಸಂಶೋಧನೆಯ ಅಂಶಗಳನ್ನು ಒಳಗೊಂಡಿದೆ. ಅಪಾರ ಹಾಗೂ ಬಳಕೆಯಾಗದ ಸಂಪನ್ಮೂಲಗಳನ್ನು ಸಹ ಹೊಂದಿದೆ. ಪಾಶ್ಚಾತ್ಯ ಶೈಕ್ಷಣಿಕ ಮಾದರಿಗಳಿಗೆ ಮಾತ್ರ ಸೀಮಿತವಾಗದೆ, ನಿರ್ವಹಣೆ ಮತ್ತು ತಂತ್ರಜ್ಞಾನ ಶಿಕ್ಷಣ ದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದರು.
ಎಐಎಂಎ ನಿರ್ದೇಶಕ ಡಾ.ರೋಹಿತ್ ಸಿಂಗ್, ಐಐಎಫ್‌ಟಿ ಉಪಕುಲಪತಿ ಪ್ರೊ.ರಾಕೇಶ್ ಮೋಹನ್ ಜೋಶಿ, ಐಎಫ್‌ಎಚ್‌ಇ ಅಕಾಡೆಮಿಕ್ ಡೀನ್ ಡಾ. ವಿನಯ್ ಜೋಶಿ ಮತ್ತಿತರರು ಉಪಸ್ಥಿತರಿದ್ದರು.