ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸದನದಲ್ಲೂ ʼವಂದೇʼ ಕದನ

ರಾಜ್ಯ ಸರಕಾರದ ಆದೇಶ ದಂತೆ ಉಭಯ ಸದನದಲ್ಲಿ ಎರಡು ಚರಣ ಮಾತ್ರ ಸೀಮಿತಗೊಳಿಸಿ ವಂದೇ ಮಾತರಂ ಅನ್ನು ಹಾಡಲಾಯಿತು. ಆದರೆ ಕೇಂದ್ರ ಸರಕಾರದ ಆದೇಶದಂತೆ ಪೂರ್ಣ ಪಾಠವನ್ನು ಹಾಕಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದರು. ಇನ್ನುಳಿದ ಪಠ್ಯವನ್ನು ಹಾಡಿದ ಬಳಿಕ ಬಿಜೆಪಿ ನಾಯಕರು ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಸದನದಲ್ಲೂ ʼವಂದೇʼ ಕದನ

-

Profile
Ashok Nayak Sep 22, 2026 8:50 AM

2 ಚರಣಗಳಿಗೆ ನಿಂತ ಹಾಡು, ಬಿಜೆಪಿ ಆಕ್ಷೇಪ

ಪೂರ್ಣ 6 ಚರಣಗಳನ್ನು ಹಾಡಿದ ಕಮಲದಳ

ವಿಧಾನಸಭೆ/ವಿಧಾನಪರಿಷತ್: ಕಳೆದ ಕೆಲ ದಿನಗಳಿಂದ ಆಡಳಿತ-ಪ್ರತಿಪಕ್ಷ ನಾಯಕರ ನಡುವಿನ ‘ವಾಕ್ಸಮ’ರಕ್ಕೆ ಕಾರಣವಾಗಿದ್ದ ವಂದೇ ಮಾತರಂ ಗೀತೆಯ ಗಾಯನ ವಿವಾದ ಇದೀಗ ಸದನಕ್ಕೂ ಕಾಲಿಟ್ಟಿದೆ. ಕಸ್ತೂರಿ ರಂಗನ್, ಬರ ಪರಿಸ್ಥಿತಿ ಬಗ್ಗೆ ಚರ್ಚಿಸಲು ಸೋಮವಾರದಿಂದ ಆರಂಭ ವಾಗಿರುವ ಮೂರು ದಿನಗಳ ವಿಶೇಷ ಅಧಿವೇಶನದ ಮೊದಲ ದಿನ ವಂದೇ ಮಾತರಂ ಗೀತೆ ಹಾಕುವ ವಿಷಯದಲ್ಲಿ ಆಡಳಿತ-ಪ್ರತಿಪಕ್ಷಗಳ ನಡುವಿನ ಕಿತ್ತಾಟಕ್ಕೆ ಕಾರಣವಾಯಿತು.

ರಾಜ್ಯ ಸರಕಾರದ ಆದೇಶ ದಂತೆ ಉಭಯ ಸದನದಲ್ಲಿ ಎರಡು ಚರಣ ಮಾತ್ರ ಸೀಮಿತಗೊಳಿಸಿ ವಂದೇ ಮಾತರಂ ಅನ್ನು ಹಾಡಲಾಯಿತು. ಆದರೆ ಕೇಂದ್ರ ಸರಕಾರದ ಆದೇಶದಂತೆ ಪೂರ್ಣ ಪಾಠವನ್ನು ಹಾಕಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದರು. ಇನ್ನುಳಿದ ಪಠ್ಯವನ್ನು ಹಾಡಿದ ಬಳಿಕ ಬಿಜೆಪಿ ನಾಯಕರು ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಇದನೂ ಓದಿ: Vande Mataram: ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ಗೀತೆಯ ಮೊದಲ ಎರಡು ಚರಣ ಮಾತ್ರ ಹಾಡಲು ಆದೇಶ

ಉಭಯ ಸದನದಲ್ಲಿ ಎರಡು ಚರಣಗಳಿಗೆ ಸೀಮಿತಗೊಳಿಸುವುದನ್ನು ಮೊದಲೇ ಬಿಜೆಪಿ ನಾಯಕರು ಅರಿತಿದ್ದರಿಂದ ಭಾರತ ಮಾತೆಯ ಚಿತ್ರ ಹಾಗೂ ವಂದೇ ಮಾತರಂ ಪಠ್ಯವನ್ನು ಹೊಂದಿರುವ ಹಾಳೆಗಳನ್ನು ಎಲ್ಲ ಶಾಸಕರಿಗೆ ಹಂಚಲಾಗಿತ್ತು. ಮೈಕ್‌ನಲ್ಲಿ ಹಾಡು ನಿಲ್ಲುತ್ತಿದ್ದಂತೆ ಸಭಾಪತಿ ಹಾಗೂ ಸಭಾಧ್ಯಕ್ಷರು ಸಂವಿಧಾನ ಪೀಠಿಕೆ ಬೋಧಿಸಲು ಹಾಗೂ ಸಂತಾಪ ಸೂಚನೆ ಮಂಡಿಸಲು ಮುಂದಾದರು. ಆದರೆ ಬಿಜೆಪಿ ಶಾಸಕರು ವಂದೇ ಮಾತರಂ ಬಾಕಿ ಚರಣ ಗಳನ್ನು ಹಾಡಿದ್ದರಿಂದ ಕೆಲ ಕಾಲ ಗೊಂದಲ ಸೃಷ್ಟಿಯಾಗಿತ್ತು.

ಪರಿಷತ್‌ನಲ್ಲೂ ಗದ್ದಲ, ಪ್ರತಿಭಟನೆ ಇನ್ನು ವಿಧಾನಪರಿಷತ್‌ನಲ್ಲಿಯೂ ವಂದೇಮಾತರಂ ಗೀತೆ ಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸಿದ್ದನ್ನು ಖಂಡಿಸಿ ಬಿಜೆಪಿ ಸದಸ್ಯರು ಪೂರ್ಣ ಗೀತೆ ಹಾಡಿ, ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆ ಸಿದರು. ಕಲಾಪದ ಆರಂಭದಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಲಾಯಿತು. ಬಳಿಕ ಸಭಾಪತಿ ಸಂವಿಧಾನ ದ ಪೀಠಿಕೆಯನ್ನು ಓದಲು ಮುಂದಾದಾಗ, ಬಿಜೆಪಿ ಸದಸ್ಯರು ಎದ್ದು ನಿಂತು ವಂದೇ ಮಾತರಂ ಗೀತೆಯ ಉಳಿದ ಭಾಗವನ್ನು ಪೂರ್ಣಗೊಳಿಸಿದರು.

ಬಳಿಕ ಜೈ ಭಾರತ್ ಮಾತಾ, ಜೈ ಅಂಬೇಡ್ಕರ್, ಜೈ ಸಂವಿಧಾನ ಘೋಷಣೆಗಳನ್ನು ಕೂಗಿದರು. ಸರಕಾರದ ವಿರುದ್ಧವೂ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಈ ವೇಳೆ ಬಿಜೆಪಿಯ ರವಿಕುಮಾರ್ ಅವರು, ಈ ಹಿಂದೆ ಪೂರ್ಣಗೀತೆ ಹಾಕಲಾಗುತ್ತಿತ್ತು. ಆದರೀಗ ಎರಡು ಚರಣಗಳಿಗೆ ಏಕೆ ಮೊಟಕುಗೊಳಿ ಸಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಬಿ.ಕೆ.ಹರಿಪ್ರಸಾದ್, ‘ಮೊದಲಿ ನಿಂದಲೂ ಎರಡೇ ಚರಣ ಹಾಡಲಾಗುತ್ತಿತ್ತು’ ಎಂದು ತಿರುಗೇಟು ನೀಡಿದರು.

ಹಾಡಲು ಪರದಾಡಿದ ಕೆಲ ಬಿಜೆಪಿ ನಾಯಕರು ಎರಡು ಚರಣಕ್ಕೆ ವಂದೇ ಮಾತರಂ ರೆಕಾರ್ಡಿಂಗ್ ಹಾಡು ನಿಂತ ಬಳಿಕವೂ, ಬಿಜೆಪಿ ಶಾಸಕರು ಪೂರ್ಣ ಪಾಠವನ್ನು ಹಾಡಿದರು. ಸದನದಲ್ಲಿ ಹಾಜರಿದ್ದ ಬಿಜೆಪಿಯ 50ಕ್ಕೂ ಹೆಚ್ಚು ಶಾಸಕರಲ್ಲಿ 10ರಿಂದ 12 ಶಾಸಕರು ಮಾತ್ರ ಮುದ್ರಿತ ಪ್ರತಿಯನ್ನು ನೋಡದೇ ಹಾಡಿದರು. ಇನ್ನುಳಿದ ಶಾಸಕರು ವಂದೇ ನೋಡಿಕೊಂಡು ಹಾಡಿದರು. ಆಗಲೂ ಕೆಲ ಶಾಸಕರು ತಪ್ಪಾಗಿ ಹಾಡಿ ದ್ದರಿಂದ ಮುಜುಗರದ ಸನ್ನಿವೇಶ ಎದುರಾಯಿತು. ಪೂರ್ಣಪಾಠ ಹಾಡುತ್ತಿರುವಾಗಲೇ ವಿಧಾನಸಭಾಧ್ಯಕ್ಷರು ಸಂವಿಧಾನ ಪೀಠಿಕೆಯನ್ನು ಬೋಧಿಸಿ ದರು.