ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BC Patil: ನಾಲಿಗೆ ಬಿಗಿ ಹಿಡಿದು ಮಾತನಾಡಿ, ನಿಮ್ಮಂತವರಿಂದಲೇ ಬಿಜೆಪಿ ಹಾಳಾಗಿದೆ: ಈಶ್ವರಪ್ಪ ವಿರುದ್ಧ ಬಿ.ಸಿ.ಪಾಟೀಲ್‌ ಕಿಡಿ

ಇತ್ತೀಚಿಗೆ ಎಂಎಲ್‌ಸಿ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಬಗ್ಗೆ ಪ್ರತಿಕ್ರಿಯಿಸಿದ್ದ ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಅವರು, ಈ ಹಿಂದೆ 17 ಜನ ಕಾಂಗ್ರೆಸ್‌ ಶಾಸಕರನ್ನು ದುಡ್ಡು ಕೊಟ್ಟು ನಮ್ಮ ಪಕ್ಷಕ್ಕೆ ಕರೆದುಕೊಂಡಿದ್ದೆವು. ಅದರಿಂದ ಬಿಜೆಪಿ ಅಧಿಕಾರಕ್ಕೆ ಬಂತು. ನಂತರ ಪಕ್ಷ ಅವರಿಂದ ಹಾಳಾಗಿ ಹೋಯ್ತು ಎಂದು ಹೇಳಿದ್ದರು. ಇದಕ್ಕೆ ಮಾಜಿ ಸಚಿವ ಬಿ.ಸಿ.ಪಾಟೀಲ್‌ ಪ್ರತಿಕ್ರಿಯಿಸಿದ್ದಾರೆ.

ನಾಲಿಗೆ ಬಿಗಿ ಹಿಡಿದು ಮಾತನಾಡಿ: ಈಶ್ವರಪ್ಪ ವಿರುದ್ಧ ಬಿ.ಸಿ.ಪಾಟೀಲ್‌ ಕಿಡಿ

ಮಾಜಿ ಸಚಿವರಾದ ಬಿ.ಸಿ.ಪಾಟೀಲ್‌ ಮತ್ತು ಕೆ.ಎಸ್‌.ಈಶ್ವರಪ್ಪ. -

Prabhakara R
Prabhakara R Jun 23, 2026 7:51 PM

ಬೆಂಗಳೂರು: ಈ ಹಿಂದೆ ದುಡ್ಡು ಕೊಟ್ಟು ಕರೆತಂದ 17 ಕಾಂಗ್ರೆಸ್ ಶಾಸಕರಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೆ ನಂತರ ಅವರಿಂದಲೇ ಪಕ್ಷ ಹಾಳಾಯ್ತು ಎಂಬ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌ ಈಶ್ವರಪ್ಪ (K.S. Eshwarappa) ಅವರ ಹೇಳಿಕೆಗೆ ಮಾಜಿ ಸಚಿವ ಬಿ.ಸಿ.ಪಾಟೀಲ್‌ (BC Patil) ಅವರು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಈಶ್ವರಪ್ಪ ನಾಲಿಗೆ ಬಿಗಿ ಹಿಡಿದು ಮಾತನಾಡಿ, ನಮ್ಮಿಂದ ಬಿಜೆಪಿ ಹಾಳಾಗಲಿಲ್ಲ, ನಿಮ್ಮಂತವರಿಂದ ಬಿಜೆಪಿ ಹಾಳಾಗಿದೆ ಎಂದು ಕಿಡಿಕಾರಿದ್ದಾರೆ.

ನಾವೆಲ್ಲಾ ಬಿಜೆಪಿಗೆ ಬರುವಲ್ಲಿ ನಿಮ್ಮ ಯಾವ ಶ್ರಮವೂ ಇಲ್ಲ. ನಮ್ಮ ಶ್ರಮದಿಂದ ನೀವು ಮಂತ್ರಿಯಾಗಿ ಲಂಚ ಪಡೆದು ಬೆಳಗಾವಿ ವ್ಯಕ್ತಿಯ ಆತ್ಮಹತ್ಯೆಗೆ ಕಾರಣರಾದಿರಿ. ಈಗ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಿ, ನಮ್ಮಿಂದ ಬಿಜೆಪಿ ಹಾಳಾಗಲಿಲ್ಲ ನಿಮ್ಮಂತವರಿಂದ ಬಿಜೆಪಿ ಹಾಳಾಗಿದೆ. ನಾವು ಬರದೆ ಹೋಗಿದ್ದರೆ ನೀವು ಮಂತ್ರಿಯಾಗುತ್ತಿರಲಿಲ್ಲ, ಮಂತ್ರಿಯಾಗಿ ಎಲ್ಲ ಸೌಲಭ್ಯಗಳನ್ನು ಪಡೆದು ಈಗ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದೀರಿ. ಯಾವಾಗ, ಎಷ್ಟು ಹಣ ಕೊಟ್ಟಿದ್ದೀರಿ ಅದನ್ನು ಪ್ರೂವ್ ಮಾಡಬೇಕು, ಇಲ್ಲದೆ ಹೋದರೆ ರಾಜಕೀಯದಿಂದ ನಿವೃತ್ತಿ ಪೋಷಿಸಿ ಎಂದು ಬಿ.ಸಿ.ಪಾಟೀಲ್‌ ಆಗ್ರಹಿಸಿದ್ದಾರೆ.



ಕೆ.ಎಸ್‌. ಈಶ್ವರಪ್ಪ ಏನು ಹೇಳಿದ್ದರು?

ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಅವರು, ಇತ್ತೀಚಿಗೆ ಎಂಎಲ್‌ಸಿ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲಿ ಎಂಎಲ್‌ಸಿಗಳನ್ನು ಖರೀದಿ ಮಾಡುವ ಕೆಲಸ ನಡೆದಿದೆ. ಇದರಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಅಂತ ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ ಈ ಹಿಂದೆ 17 ಜನ ಕಾಂಗ್ರೆಸ್‌ ಶಾಸಕರನ್ನು ದುಡ್ಡು ಕೊಟ್ಟು ನಮ್ಮ ಪಕ್ಷಕ್ಕೆ ಕರೆದುಕೊಂಡಿದ್ದೆವು. ಅದರಿಂದ ಬಿಜೆಪಿ ಅಧಿಕಾರಕ್ಕೆ ಬಂತು. ನಂತರ ಪಕ್ಷ ಅವರಿಂದ ಹಾಳಾಗಿ ಹೋಯ್ತು. ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಅದು ಹೊರಗೆ ಬರಬೇಕು ಎಂದು ಹೇಳಿದ್ದರು.

ಧರ್ಮಸ್ಥಳ ಪವಿತ್ರವಾದ ಸ್ಥಳ, ಅಲ್ಲಿ ಆಣೆ ಪ್ರಮಾಣ ಬೇಡ. ವಿಜಯೇಂದ್ರ ಅವರು ತಕ್ಷಣ ತಮ್ಮ ನಿಲುವನ್ನ ಹಿಂಪಡೆಯಬೇಕು. ಭಕ್ತಿಯನ್ನು ಒರೆ ಹಚ್ಚುವುದಲ್ಲ, ಹಾಗಾಗಿ ಈ ನಿರ್ಧಾರ ಕೈಬಿಡಬೇಕು. ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿ ಅಣ್ಣಪ್ಪನ ಬಳಿ ಬಂದು ಕ್ಷಮೆ ಕೇಳ್ತಾರೆ. ಈ ಪದ್ಧತಿ ಒಳ್ಳೆಯದಲ್ಲ ಇದು ನನ್ನ ಸಲಹೆ ಎಂದಿದ್ದರು.

ಅಡ್ಡ ಮತದಾನದ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ: ಬಿ.ವೈ.ವಿಜಯೇಂದ್ರ

ಅಡ್ಡಮತದಾನದ ಭ್ರಷ್ಟಚಾರ ತನಿಖೆ ಆಗಬೇಕು. ಎಷ್ಟು ಹಣ ಕೊಟ್ಟಿದ್ದಾರೆ ಎಂಬುದು ಹೊರಬರಬೇಕು. ನಮ್ಮದೇ ಸರ್ಕಾರ ಇದ್ದಾಗ ದುಡ್ಡು ಕೊಟ್ಟು ಖರೀದಿ ಮಾಡಿ, ದುಡ್ಡು ಕೊಟ್ಟು ಗೆಲ್ಲಿಸಿದ್ವಿ. ಆದರೆ, ನಮ್ಮ ಸರ್ಕಾರ ನಂತರ ಅಧಿಕಾರಕ್ಕೆ ಬರಲಿಲ್ಲ. ಇದೇ ಪರಿಸ್ಥಿತಿ ಕಾಂಗ್ರೆಸ್‌ಗೂ ಬರಲಿದೆ ಎಂದು ಹೇಳಿದ್ದರು.