ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Jonty Rhodes: ಬೀದರ್‌ಗೆ ಖ್ಯಾತ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಭೇಟಿ; ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ

Bidar News: ಬೀದರ್‌ನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಮೂರು ದಿನಗಳ ಕಾಲ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟಕ್ಕೆ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರು ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಪೊಲೀಸ್ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಬೀದರ್‌ಗೆ ಖ್ಯಾತ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಭೇಟಿ

-

Prabhakara R
Prabhakara R Nov 25, 2026 3:57 PM

ಬೀದರ್: ದಕ್ಷಿಣ ಆಫ್ರಿಕಾದ ಖ್ಯಾತ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ (Jonty Rhodes) ಅವರು ಬೀದರ್‌ಗೆ (Bidar) ಬುಧವಾರ ಭೇಟಿ ನೀಡಿದ್ದರು. ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿರುವ 2026ರ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಅವರು ಆಕಾಶಕ್ಕೆ ಬಲೂನ್ ಮತ್ತು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.

Jonty Rhodes  (1)

ಬೀದರ್‌ನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಮೂರು ದಿನಗಳ ಕಾಲ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಪೊಲೀಸ್ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಮಾರಂಭದಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಮಾಜಿ ಸಚಿವ ರಹೀಂ ಖಾನ್ ಭಾಗಿಯಾಗಿದ್ದರು. ಎಸ್ಪಿ ಪ್ರದೀಪ್ ಗುಂಟಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Jonty Rhodes  (2)

ಕಾರ್ಯಕ್ರಮದಲ್ಲಿ ಮಾತನಾಡಿದ ಜಾಂಟಿ ರೋಡ್ಸ್ ಅವರು, ನನ್ನ ಮಗಳು ಮುಂಬೈನಲ್ಲಿ ಹುಟ್ಟಿದ ಕಾರಣ ಆಕೆಗೆ ‘ಇಂಡಿಯಾ’ ಎಂದು ಹೆಸರು ಇಟ್ಟಿದ್ದೇನೆ. ಭಾರತ ಬಹಳಷ್ಟು ಸುಂದರ ದೇಶವಾಗಿದೆ. ನನ್ನ ದೇಶಕ್ಕಿಂತ ಹೆಚ್ಚು ಭಾರತವನ್ನು ನೋಡಿದ್ದೇನೆ. ಅದಕ್ಕಾಗಿ ನಾನು ಇವತ್ತು ಇಂದು ಬೀದರ್‌ನಲ್ಲಿ ಇದ್ದೇನೆ. ನನ್ನನ್ನು ನೋಡಲು ಮಕ್ಕಳು ತಾಳ್ಮೆಯಿಂದ ಬಹಳಷ್ಟು ಕಾದಿದ್ದೀರಿ, ಧನ್ಯವಾದಗಳು ಎಂದು ತಿಳಿಸಿದ್ದಾರೆ.

Jonty Rhodes  (3)

ಈ ಪ್ರಜಾಪ್ರಭುತ್ವ ದೇಶ ಸುರಕ್ಷಿತವಾಗಿದೆ. ಪೋಲಿಸ್ ಸೇವೆಗೆ ನೀವು ಮೊದಲು ಧನ್ಯವಾದಗಳು ಹೇಳಿ. ಕ್ರೀಡೆ ಎನ್ನುವುದು ಒತ್ತಡಮುಕ್ತ ಜೀವನಕ್ಕೆ ಬಹಳ ಮುಖ್ಯವಾಗಿದೆ. ಇಂದಿನ ದಿನಗಳಲ್ಲಿ ಬಹಳಷ್ಟು ಮಕ್ಕಳು ಕ್ರಿಕೆಟ್ ಆಟವಾಡುತ್ತಿದ್ದಾರೆ. ನಾನು ಕ್ರಿಕೆಟ್ ಆಡಲು ಮತ್ತು ಕ್ರಿಕೆಟ್ ವೀಕ್ಷಿಸಲು ಭಾರತದಾದ್ಯಂತ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಕರ್ನಾಟಕಕ್ಕೆ ಮತ್ತು ಬೀದರಗೆ ಬರುತ್ತಿರುವುದು ಇದೇ ಮೊದಲು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಾವೆಲ್ಲರೂ ನೆರಳಿನಲ್ಲಿ ಕುಳಿತಿರುವಾಗ, ಭದ್ರತಾ ಪಡೆ ಸಿಬ್ಬಂದಿಗಳು ಬಿಸಿಲಿನಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಾರೆ. ಅವರ ತಾಳ್ಮೆ ಮತ್ತು ಬದ್ಧತೆ ಮೆಚ್ಚುವಂತಥದ್ದು. ಪೊಲೀಸ್ ವೃತ್ತಿ ಜೀವನವು ಅತ್ಯಂತ ಒತ್ತಡದಿಂದ ಕೂಡಿರುತ್ತದೆ. ಅವರ ನಿಸ್ವಾರ್ಥ ಸೇವೆಗೆ ನಾವುಗಳು ಕೃತಜ್ಞರಾಗಿರಬೇಕು ಎಂದು ತಿಳಿಸಿದ್ದಾರೆ.