Bidar Accident: ಬೀದರ್‌ನಲ್ಲಿ ಭೀಕರ ಅಪಘಾತ; ಬ್ರಿಡ್ಜ್‌ಗೆ ಸ್ಕೂಟಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರ ದುರ್ಮರಣ
ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ-ಬಿ ಬಳಿಯ ನಾಗಣ್ಣ ಕ್ರಾಸ್ ಬಳಿ ಅಪಘಾತ ನಡೆದಿದೆ. ಒಂದೇ ಕುಟುಂಬದ ನಾಲ್ವರು ಸ್ಕೂಟಿಯಲ್ಲಿ ಸಂಬಂಧಿಕರ ಮನೆಗೆ ಹೋಗಿ ಬರುವಾಗ ದುರಂತ ನಡೆದಿದೆ. ಅಪಘಾತದಲ್ಲಿ ಮೂವರು ಮೃತಪಟ್ಟು, ಒಬ್ಬ ಬಾಲಕ ಗಂಭಿರವಾಗಿ ಗಾಯಗೊಂಡಿದ್ದಾನೆ.
ಬೀದರ್ ಜಿಲ್ಲೆ ಹುಮನಾಬಾದ್ ಬಳಿ ಅಪಘಾತದಲ್ಲಿ ಮೃತರಾದವರು. -
ಬೀದರ್: ರಸ್ತೆ ಪಕ್ಕದ ಬ್ರಿಡ್ಜ್‌ಗೆ ಸ್ಕೂಟಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿರು ಘಟನೆ ಬೀದರ್ ಜಿಲ್ಲೆಯ (Bidar Accident) ಹುಮನಾಬಾದ್ ತಾಲೂಕಿನ ಹಳ್ಳಿಖೇಡ-ಬಿ ಬಳಿಯ ನಾಗಣ್ಣ ಕ್ರಾಸ್ ಬಳಿ ನಡೆದಿದೆ. ವೆಂಕಟ್ ಕರಟ್ಮಲ್ (40), ಪತ್ನಿ ಶಿಲ್ಪಾ (35), ಮಗಳು ರಕ್ಷಿತಾ (12) ಮೃತ ದುರ್ದೈವಿಗಳು. ಇವರು ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದವರು. ಮಗ ದಿಗಂಬರ್ (15) ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕುಟುಂಬ ಸಮೇತ ಬೀದರ್‌ಗೆ ಹೋಗಿ ವಾಪಸ್ ರಾಜೇಶ್ವರ ಗ್ರಾಮಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ. ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ ನಾಲ್ವರು ಸ್ಕೂಟಿಯಲ್ಲಿ ತೆರಳುತ್ತಿದ್ದರು. ಬೀದರ್‌ನಲ್ಲಿರುವ ಸೋದರ ಅಳಿಯನ ಮಗಳನ್ನು ಮಾತನಾಡಿಸೋಕೆ ಬಂದಿದ್ದರು. ವಾಪಸ್ ಹೋಗುವಾಗ ಸೇತುವೆಗೆ ಸ್ಕೂಟಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಮೂವರು ಕೊನೆಯುಸಿರೆಳೆದಿದ್ದಾರೆ.
ಹಳ್ಳಿಖೇಡ-ಬಿ ಪಟ್ಟಣದ ಶವಾಗಾರದಲ್ಲಿ ದಂಪತಿ ಮತ್ತು ಮಗಳ ಮೃತದೇಹ ಇಡಲಾಗಿದೆ. ಬ್ರಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕೋಲಾರದಲ್ಲಿ ಬೊಲೆರೋ ಪಲ್ಟಿಯಾಗಿ ಮೂವರು ಕಾರ್ಮಿಕರ ಸಾವು
ಕೋಲಾರ: ಬೊಲೆರೋ ವಾಹನ ಪಲ್ಟಿಯಾಗಿ ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಸಂಭವಿಸಿದೆ. ಆಂಧ್ರಪ್ರದೇಶದ ಮುನಿಯಮ್ಮ ವೆಂಕಟಪ್ಪ ಸೇರಿ ಮೂವರು ಸಾವನಪ್ಪಿದ್ದಾರೆ.
20 ರುಪಾಯಿ ಲಂಚ ಪ್ರಕರಣ: 30 ವರ್ಷಗಳ ನಂತರ ನಿರ್ದೋಷಿ ಎಂದ ಕೋರ್ಟ್, ಮರುದಿನವೇ ವ್ಯಕ್ತಿ ಸಾವು
ಅಪಘಾತದಲ್ಲಿ ಸುಮಾರು 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಆಂಧ್ರಪ್ರದೇಶದ ಮದನಪಲ್ಲಿ ಆಸ್ಪತ್ರೆಗೆ ಗಾಯಾಳಗಳನ್ನು ದಾಖಲಿಸಲಾಗಿದೆ. ಕೂಲಿ ಕೆಲಸ ಮುಗಿಸಿಕೊಂಡು ಹೋಗುವಾಗ ಈ ಒಂದು ದುರಂತ ಸಂಭವಿಸಿದೆ. ಅಪಘಾತದ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.