ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ICSE, ISC ಫಲಿತಾಂಶ ಪ್ರಕಟ: ಬಾಲಕರಿಗಿಂತ ಬಾಲಕಿಯರೇ ಮೇಲುಗೈ, ಎರಡೂ ಪರೀಕ್ಷೆಗಳಲ್ಲಿ ಶೇಕಡ 99ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ICSE, ISC results announced: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಏಪ್ರಿಲ್ 30ರ ಬೆಳಗ್ಗೆ 11 ಗಂಟೆಗೆ ಐಸಿಎಸ್ಇ (10ನೇ ತರಗತಿ) ಮತ್ತು ಐಎಸ್‍ಸಿ (12ನೇ ತರಗತಿ) ಫಲಿತಾಂಶಗಳನ್ನು ಘೋಷಿಸಿದೆ. ಎರಡೂ ಪರೀಕ್ಷೆಗಳಲ್ಲಿ ಬಾಲಕಿಯರು ಬಾಲಕರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ.

ICSE, ISC ಫಲಿತಾಂಶ ಪ್ರಕಟ: ಬಾಲಕಿಯರೇ ಮೇಲುಗೈ

ಸಾಂದರ್ಭಿಕ ಚಿತ್ರ -

Priyanka P
Priyanka P Apr 30, 2026 6:50 PM

ನವದೆಹಲಿ, ಏ. 30: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಏಪ್ರಿಲ್ 30ರ ಬೆಳಗ್ಗೆ 11 ಗಂಟೆಗೆ ಐಸಿಎಸ್ಇ (ICSE 10ನೇ ತರಗತಿ) ಮತ್ತು ಐಎಸ್‍ಸಿ (ISC 12ನೇ ತರಗತಿ) ಫಲಿತಾಂಶಗಳನ್ನು ಘೋಷಿಸಿದೆ. ಎರಡೂ ಹಂತಗಳಲ್ಲಿ ಅಸಾಧಾರಣ ಉತ್ತೀರ್ಣ ಶೇಕಡಾವಾರು ದಾಖಲಾಗಿದೆ. ಐಸಿಎಸ್ಇ ಒಟ್ಟಾರೆ ಶೇ. 99.18ರಷ್ಟು ಉತ್ತೀರ್ಣ ಫಲಿತಾಂಶವನ್ನು ದಾಖಲಿಸಿದರೆ, ಐಎಸ್‍ಸಿ ಫಲಿತಾಂಶ ಶೇ. 99.13ರಷ್ಟಿದೆ.

ಎರಡೂ ಪರೀಕ್ಷೆಗಳಲ್ಲಿ ಬಾಲಕಿಯರು ಬಾಲಕರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ. ಐಸಿಎಸ್‌ಇಯಲ್ಲಿ, ಬಾಲಕಿಯರು ಶೇಕಡಾ 99.46ರಷ್ಟು ಉತ್ತೀರ್ಣರಾಗಿದ್ದಾರೆ, ಬಾಲಕರಲ್ಲಿ ಇದು ಶೇಕಡಾ 98.93ರಷ್ಟಿದೆ. ಅದೇ ರೀತಿ, ಐಎಸ್‌ಸಿಯಲ್ಲಿ, ಹುಡುಗಿಯರು ಶೇಕಡಾ 99.48ರಷ್ಟು ಉತ್ತೀರ್ಣರಾಗಿದ್ದರೆ, ಹುಡುಗರು ಶೇಕಡಾ 98.81ರಷ್ಟಿದ್ದಾರೆ.

ಪ್ರದೇಶವಾರು ದಕ್ಷಿಣ ಪ್ರದೇಶವು ಐಎಸ್‌ಸಿಯಲ್ಲಿ ಶೇ. 99.87ರಷ್ಟು ಉತ್ತೀರ್ಣದೊಂದಿಗೆ ಅಗ್ರಸ್ಥಾನದಲ್ಲಿದೆ. ಪಶ್ಚಿಮ ಪ್ರದೇಶವು ಶೇ. 99.55ರಷ್ಟು ಉತ್ತೀರ್ಣತೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಐಸಿಎಸ್‌ಇ ಪರೀಕ್ಷೆಯಲ್ಲಿ ಪಶ್ಚಿಮ ಪ್ರದೇಶವು ಶೇ. 99.85ರಷ್ಟು ಮುನ್ನಡೆ ಸಾಧಿಸಿದರೆ, ದಕ್ಷಿಣ ಪ್ರದೇಶವು ಶೇ. 99.81ರಷ್ಟು ಫಲಿತಾಂಶದೊಂದಿಗೆ ಎರಡನೇ ಸ್ಥಾನದಲ್ಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ 45,415 ವಿದ್ಯಾರ್ಥಿಗಳು ಫೇಲ್: ಸಚಿವ ಮಧು ಬಂಗಾರಪ್ಪ

ಐಎಸ್‌ಸಿ (12ನೇ ತರಗತಿ) ಪರೀಕ್ಷೆಯನ್ನು 1,553 ಶಾಲೆಗಳಲ್ಲಿ ನಡೆಸಲಾಗಿದ್ದು, ಒಟ್ಟು 1,03,316 ಅಭ್ಯರ್ಥಿಗಳು ಹಾಜರಾಗಿದ್ದರು. ಇದರಲ್ಲಿ 54,118 ಬಾಲಕರು (ಶೇ. 52.38) ಮತ್ತು 49,198 ಬಾಲಕಿಯರು (ಶೇ. 47.62) ಸೇರಿದ್ದಾರೆ. ಈ ಮಧ್ಯೆ, ಐಸಿಎಸ್ಇ (10ನೇ ತರಗತಿ) ಪರೀಕ್ಷೆಯಲ್ಲಿ 2,957 ಶಾಲೆಗಳ 2,58,721 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 1,37,503 ಬಾಲಕರು (ಶೇ. 53.15), 1,21,218 ಬಾಲಕಿಯರು (ಶೇ. 46.85) ಪರೀಕ್ಷೆ ಬರೆದಿದ್ದರು.

ವಿದ್ಯಾರ್ಥಿಗಳು ಮೇ 1ರಿಂದ ಮೇ 4ರವರೆಗೆ ಸಿಐಎಸ್‍ಸಿಇ ಸೇವಾ ಪೋರ್ಟಲ್ ಮೂಲಕ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚುವರಿಯಾಗಿ, ತಮ್ಮ ಅಂಕಗಳನ್ನು ಸುಧಾರಿಸಲು ಬಯಸುವ ಅಭ್ಯರ್ಥಿಗಳು ಮೇ 8 ಮತ್ತು 2026ರ ಮೇ 14ರ ನಡುವೆ ಸುಧಾರಣಾ ಪರೀಕ್ಷೆಗಳಿಗೆ ನೋಂದಾಯಿಸಿಕೊಳ್ಳಬಹುದು.

ಸುಧಾರಣಾ ಪರೀಕ್ಷೆಗಳು ಜೂನ್ 15ರಿಂದ ಪ್ರಾರಂಭವಾಗಲಿದ್ದು, ಜುಲೈ ಕೊನೆಯ ವಾರದಲ್ಲಿ ಫಲಿತಾಂಶಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಸಿಐಎಸ್‌ಸಿಇಯ 2024ರ ನಂತರದ ಪರಿಷ್ಕೃತ ಮೌಲ್ಯಮಾಪನದಡಿ, ವಿದ್ಯಾರ್ಥಿಗಳು ಎರಡು ವಿಷಯಗಳವರೆಗೆ ಹಾಜರಾಗಲು ಅವಕಾಶವಿದೆ. ಅರ್ಹತೆ ಪಡೆಯಲು, ICSE ಅಭ್ಯರ್ಥಿಗಳು ಕನಿಷ್ಠ ಶೇಕಡ 33 ಅಂಕಗಳನ್ನು ಪಡೆಯಬೇಕು. ಆದರೆ ISC ಅಭ್ಯರ್ಥಿಗಳು ಕನಿಷ್ಠ ಶೇಕಡ 35 ಅಂಕಗಳನ್ನು ಪಡೆಯಬೇಕು.