ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Diesel Price: ತುಟ್ಟಿಯಾಯ್ತು ಬಲ್ಕ್‌ ಡೀಸೆಲ್‌, ಏರಲಿದೆಯಾ ಬಸ್‌ ಟಿಕೆಟ್‌ ದರ?

ಕೈಗಾರಿಕಾ ಉದ್ದೇಶಕ್ಕೆ ಬಳಸುವ ಬಲ್ಕ್ ಡಿಸೇಲ್ ದರ ಲೀಟರ್‌ಗೆ 22 ರೂ. ಏರಿಕೆಯಾಗಿದೆ. 87.67 ರೂಪಾಯಿ ಇದ್ದ ಬಲ್ಕ್ ಡಿಸೇಲ್ ದರ 109.59 ರೂಪಾಯಿಗೆ ಏರಿಕೆಯಾಗಿದೆ. ಸಾರಿಗೆ ನಿಗಮಗಳಿಂದಲೂ ಬಲ್ಕ್‌ನಲ್ಲೇ ಡೀಸೆಲ್ ಖರೀದಿ ಮಾಡಲಾಗುತ್ತದೆ. ಇದರಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಟಿಕೆಟ್ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ತುಟ್ಟಿಯಾಯ್ತು ಬಲ್ಕ್‌ ಡೀಸೆಲ್‌, ಏರಲಿದೆಯಾ ಬಸ್‌ ಟಿಕೆಟ್‌ ದರ?

ಸಾಂದರ್ಭಿಕ ಚಿತ್ರ -

ಹರೀಶ್‌ ಕೇರ
ಹರೀಶ್‌ ಕೇರ Mar 21, 2026 1:19 PM

ಬೆಂಗಳೂರು, ಮಾ. 21: ಇರಾನ್-‌ ಇಸ್ರೇಲ್-‌ ಅಮೆರಿಕ (Iran- israel war) ಯುದ್ಧದ ಪರಿಣಾಮ ತೈಲ ಬೆಲೆಗಳ ಮೇಲೆ ವ್ಯಾಪಕವಾಗಿ ಆಗತೊಡಗಿದೆ. ಗ್ಯಾಸ್ ಸಿಲಿಂಡರ್ ಪೂರೈಕೆ ಕೊರತೆ, ಹೊಟೆಲ್‌ಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಕೆ ವ್ಯತ್ಯಯಗಳ (LPG crisis) ಬೆನ್ನಲ್ಲೇ ಪ್ರೀಮಿಯಂ ಪೆಟ್ರೋಲ್ ಬೆಲೆಯಲ್ಲಿ (petrol price hike) ಭಾರಿ ಏರಿಕೆಯಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಬಲ್ಕ್ ಡೀಸೆಲ್ (Diesel Price hike) ಬೆಲೆಯಲ್ಲಿ ಬರೋಬ್ಬರಿ 22 ರೂಪಾಯಿ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಪ್ರಯಾಣ ದರ ದುಬಾರಿಯಾಗುವ ಸಾಧ್ಯತೆ ಗೋಚರಿಸಿದೆ.

ಕೈಗಾರಿಕಾ ಉದ್ದೇಶಕ್ಕೆ ಬಳಸುವ ಬಲ್ಕ್ ಡಿಸೇಲ್ ದರ ಲೀಟರ್‌ಗೆ 22 ರೂ. ಏರಿಕೆಯಾಗಿದೆ. 87.67 ರೂಪಾಯಿ ಇದ್ದ ಬಲ್ಕ್ ಡಿಸೇಲ್ ದರ 109.59 ರೂಪಾಯಿಗೆ ಏರಿಕೆಯಾಗಿದೆ. ಸಾರಿಗೆ ನಿಗಮಗಳಿಂದಲೂ ಬಲ್ಕ್‌ನಲ್ಲೇ ಡೀಸೆಲ್ ಖರೀದಿ ಮಾಡಲಾಗುತ್ತದೆ. ಇದರಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಟಿಕೆಟ್ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಸಾರಿಗೆ ಸಂಸ್ಥೆಗಳು ಪ್ರತಿ ದಿನ ಲಕ್ಷಾಂತರ ಲೀಟರ್ ಡೀಸೆಲ್ ಖರೀದಿ ಮಾಡುತ್ತದೆ. ಇಂದಿನಿಂದ ಬಲ್ಕ್ ಡಿಸೇಲ್ ದರ ಲೀ.ಗೆ 22 ರೂಪಾಯಿ ಏರಿಕೆಯಾಗಿರುವ ಹಿನ್ನಲೆಯಲ್ಲಿ ಟಿಕೆಟ್ ದರದಲ್ಲೂ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಸಾರಿಗೆ ನಿಮಗಳಿಗೆ ದರದಲ್ಲಿ ವಿನಾಯಿತಿ ನೀಡಿದರೆ ಟಿಕೆಟ್ ದರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇಲ್ಲ.

Electricity Bill: ಸದ್ಯದಲ್ಲೇ ಇನ್ನೊಂದು ದರ ಏರಿಕೆ ಶಾಕ್‌, ಎಸ್ಕಾಂಗಳಿಂದ ‌ಕರೆಂಟ್ ಬೆಲೆ ಏರಿಕೆಗೆ ಮನವಿ

ಪ್ರೀಮಿಯಂ ಪೆಟ್ರೋಲ್ ದರ ಏರಿಕೆ

ಮಧ್ಯಪ್ರಾಚ್ಯ ಯುದ್ಧದಿಂದ ಭಾರತದಲ್ಲಿ ಪ್ರೀಮಿಯಂ ಪೆಟ್ರೋಲ್ ದರದಲ್ಲಿ ಏರಿಕೆಯಾಗಿದೆ. ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆಯಲ್ಲಿ 2 ರೂಪಾಯಿ ಏರಿಕೆಯಾಗಿದೆ. ಇದರಿಂದ ಪೆಟ್ರೋಲ್ ಮತ್ತಷ್ಟು ದುಬಾರಿಯಾಗಿದೆ.. ಹೆಚ್ ಪಿ‌ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ ಪ್ರತಿ‌ಲೀಟರ್ ಗೆ 110.97 ರೂ.ಯಿಂದ 113.14 ರೂಪಾಯಿಗೆ ಏರಿಕೆಯಾಗಿದೆ.