ಹೊರ್ಮುಜ್ ಜಲಸಂಧಿ ಬಿಕ್ಕಟ್ಟಿನ ಮಧ್ಯೆ, ದುಬಾರಿ ಇಂಧನ ಪೂರೈಕೆ ಪರ್ಯಾಯಗಳನ್ನು ಹುಡುಕುತ್ತಿದೆಯೇ ಭಾರತ?
Strait of Hormuz crisis: ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷದ ಮಧ್ಯೆ ಹೊರ್ಮುಜ್ ಜಲಸಂಧಿಯಲ್ಲಿ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿರುವುದರಿಂದ, ಇಂಧನ ಪೂರೈಕೆಯನ್ನು ಸ್ಥಿರವಾಗಿಡಲು ದುಬಾರಿ ಪರ್ಯಾಯಗಳಿಗೆ ಸಿದ್ಧತೆ ನಡೆಸುತ್ತಿದೆ. ಭಾರತದ ಇಂಧನ ಅಗತ್ಯಗಳಲ್ಲಿ ಸುಮಾರು ಶೇ. 45 ರಷ್ಟು ಕೊಲ್ಲಿ ಮೂಲಕ ಹಾದುಹೋಗುವ ಸರಬರಾಜುಗಳ ಮೇಲೆ ಅವಲಂಬಿತವಾಗಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಮಾ.21: ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷದ (Iran-Israel-US war) ಮಧ್ಯೆ ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz crisis) ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿರುವುದರಿಂದ, ಭಾರತವು ಸಮಾಂತರ ಕ್ರಮಗಳನ್ನು ಕೈಗೊಂಡಿದೆ. ಸಮುದ್ರದಲ್ಲಿರುವ ತನ್ನ ಹಡಗುಗಳ ಭದ್ರತೆಗೆ ಕ್ರಮ ತೆಗೆದುಕೊಳ್ಳುವುದರ ಜೊತೆಗೆ, ಇಂಧನ ಪೂರೈಕೆಯನ್ನು ಸ್ಥಿರವಾಗಿಡಲು ದುಬಾರಿ ಪರ್ಯಾಯಗಳಿಗೆ ಸಿದ್ಧತೆ ನಡೆಸುತ್ತಿದೆ.
ಭಾರತದ ಇಂಧನ ಅಗತ್ಯಗಳಲ್ಲಿ ಸುಮಾರು ಶೇ. 45 ರಷ್ಟು ಕೊಲ್ಲಿ ಮೂಲಕ ಹಾದುಹೋಗುವ ಸರಬರಾಜುಗಳ ಮೇಲೆ ಅವಲಂಬಿತವಾಗಿದೆ. ಈ ಪರಿಸ್ಥಿತಿಯು ದೇಶದ ಇಂಧನ ಭದ್ರತೆಗೆ ನೇರ ಸವಾಲಾಗಿ ಪರಿಣಮಿಸಿದೆ.
ಭಾರತೀಯ ನೌಕಾಪಡೆಯು ಈ ಪ್ರದೇಶದಾದ್ಯಂತ ತನ್ನ ನಿಯೋಜನೆಯನ್ನು ವಿಸ್ತರಿಸಿದೆ. ಅರೇಬಿಯನ್ ಸಮುದ್ರ ಮತ್ತು ಓಮನ್ ಕೊಲ್ಲಿಯಲ್ಲಿ ಹೆಚ್ಚುವರಿ ಯುದ್ಧನೌಕೆಗಳನ್ನು ನಿಯೋಜಿಸಿದೆ.
ಮೂಲಗಳ ಪ್ರಕಾರ, ಬೆಂಗಾವಲು ಹಡಗುಗಳು ಸೇರಿದಂತೆ ಸುಮಾರು ಏಳು ಹಡಗುಗಳನ್ನು ಈಗ ನಿಯೋಜಿಸಲಾಗುತ್ತಿದೆ. ಇದು ಉತ್ತರ ಅರಬ್ಬಿ ಸಮುದ್ರದಿಂದ ಭಾರತೀಯ ಬಂದರುಗಳವರೆಗೆ ಹಡಗುಗಳಿಗೆ ಬೆಂಗಾವಲು ನೀಡಲು ಮೊದಲು ಕಳುಹಿಸಲಾದ ಎರಡು ಟಾಸ್ಕ್ ಫೋರ್ಸ್‌ಗಳ ಜೊತೆಗೆ ಹೆಚ್ಚುವರಿಯಾಗಿದೆ.
ಕೊನೆ ಹಂತಕ್ಕೆ ತಲುಪಿತಾ ಇರಾನ್- ಇಸ್ರೇಲ್- ಅಮೆರಿಕ ಯುದ್ಧ? ಟ್ರಂಪ್ ನೀಡಿದ ಆ ಸುಳಿವೇನು?
ಈ ನಿಯೋಜನೆಗಳು ಆಪರೇಷನ್ ಸಂಕಲ್ಪವನ್ನು ಆಧರಿಸಿವೆ. ಇದರ ಅಡಿಯಲ್ಲಿ ನೌಕಾ ಹಡಗುಗಳು 2019 ರಿಂದ ಓಮನ್ ಕೊಲ್ಲಿ ಮತ್ತು ಅಡೆನ್ ಕೊಲ್ಲಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಲ್‌ಪಿಜಿ ಮತ್ತು ಇಂಧನ ಸಾಗಣೆ ಮಾಡುವ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸುವುದು ಹಾಗೂ ಪರ್ಷಿಯನ್ ಕೊಲ್ಲಿ ಸಮೀಪ ಯಾವುದೇ ಉದ್ವಿಗ್ನತೆ ಹೆಚ್ಚಾದರೂ ಎದುರಿಸಲು ಸಿದ್ಧವಾಗಿರುವುದು ಇದರ ಉದ್ದೇಶವಾಗಿದೆ.
ಮೂರು ಭಾರತೀಯ ಎಲ್‌ಪಿಜಿ ಸಾಗಣೆ ಹಡಗುಗಳನ್ನು ಈಗಾಗಲೇ ಸುರಕ್ಷಿತವಾಗಿ ಭಾರತೀಯ ಬಂದರುಗಳಿಗೆ ಬೆಂಗಾವಲು ನೀಡಲಾಗಿದೆ. ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಹೊರ್ಮುಜ್ ಜಲಸಂಧಿಯ ಪಶ್ಚಿಮ ಭಾಗದಲ್ಲಿ ಇನ್ನೂ 20ಕ್ಕೂ ಹೆಚ್ಚು ಭಾರತೀಯ ವಾಣಿಜ್ಯ ಹಡಗುಗಳು ಉಳಿದಿವೆ. ಈ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಲು ಅಧಿಕಾರಿಗಳು ಟೆಹರಾನ್ ಜೊತೆ ಸಂಪರ್ಕದಲ್ಲಿದ್ದಾರೆ.
ಭಾರತವು ಹೊರ್ಮುಜ್ ಜಲಸಂಧಿಗೆ ತಕ್ಷಣದ ಪರ್ಯಾಯವನ್ನು ಹೊಂದಿಲ್ಲ ಎಂದು ಹಿರಿಯ ಕಡಲ ತಜ್ಞ ಕಮೋಡೋರ್ ರಂಜಿತ್ ರಾಯ್ ಹೇಳಿದ್ದಾರೆ. ಭಾರತವು ತನ್ನ ಇಂಧನ ಅಗತ್ಯಗಳಲ್ಲಿ ಶೇ. 45 ರಷ್ಟು ಗಲ್ಫ್ ಅನ್ನು ಅವಲಂಬಿಸಿದೆ ಎಂದು ಅವರು ಹೇಳಿದರು.
ʼʼಹೇಡಿಗಳುʼʼ: ಇರಾನ್ ಮೇಲಿನ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗರಂ
ರಷ್ಯಾದಿಂದ ಆಮದು ಹೆಚ್ಚಿಸುವುದು, ಅಮೆರಿಕ ಮತ್ತು ವೆನೆಜುವೆಲಾದಿಂದ ತೈಲವನ್ನು ಪಡೆಯುವುದು ಅಥವಾ ಸರಬರಾಜುಗಳನ್ನು ಮರುಮಾರ್ಗದಲ್ಲಿ ಬದಲಾಯಿಸುವುದು ಸೇರಿದಂತೆ ಸಂಭಾವ್ಯ ಪರ್ಯಾಯಗಳ ಬಗ್ಗೆ ಅವರು ಮಾತನಾಡಿದರು. ಆದರೆ, ಇವುಗಳ ವೆಚ್ಚ ದುಬಾರಿಯಾಗಿದೆ. ಗಲ್ಫ್‌ನಿಂದ ಬರುವ ಇಂಧನ ಅಗ್ಗವಾಗಿದೆ. ಪರ್ಯಾಯ ಮಾರ್ಗದಿಂದ ಖರೀದಿಸಬೇಕಾದರೆ ಅದು ಬಹಳ ದುಬಾರಿಯಾಗುತ್ತವೆ. ವಿಶೇಷವಾಗಿ ಸಾರಿಗೆಗೆ ಹೆಚ್ಚು ದುಬಾರಿ ಬೀಳುತ್ತದೆ ಎಂದು ಅವರು ಹೇಳಿದರು.
ಪರಿಗಣನೆಯಲ್ಲಿರುವ ಒಂದು ಆಯ್ಕೆ ಎಂದರೆ ಸೌದಿ ಅರೇಬಿಯಾದ ಜೆದ್ದಾಹ್‌ನಿಂದ ಭೂಮಾರ್ಗದ ಮೂಲಕ ತೈಲವನ್ನು ಸಾಗಿಸಿ, ನಂತರ ಅದನ್ನು ಅಡನ್ ಕೊಲ್ಲಿಯ ಮೂಲಕ ಹಡಗುಗಳ ಮೂಲಕ ಕಳುಹಿಸುವುದು. ಆದರೆ ಇದರ ಕಾರ್ಯಸಾಧ್ಯತೆ ಮತ್ತು ವೆಚ್ಚವು ಪ್ರಮುಖ ಚಿಂತೆಗಳಾಗಿವೆ.
ಹೊರ್ಮುಜ್ ಮಾರ್ಗದಿಂದ ಯಾವುದೇ ಬದಲಾವಣೆಯು ಬೆಲೆಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇದು ದೇಶೀಯ ಇಂಧನ ಪೂರೈಕೆಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಈ ಪ್ರದೇಶದಲ್ಲಿ ಹಡಗುಗಳ ಸಂಚಾರ ನಿರ್ಬಂಧಿತವಾಗಿರುವುದರಿಂದ ಭಾರತ ಈಗಾಗಲೇ ಎಲ್‌ಪಿಜಿ ಕೊರತೆಯನ್ನು ಎದುರಿಸುತ್ತಿದೆ.