ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gauribidanur News: ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಮಾಜಿ ಸಚಿವ ಎನ್ ಹೆಚ್ ಶಿವಶಂಕರ ರೆಡ್ಡಿ

ವಿದ್ಯಾರ್ಥಿಗಳು ಕೇವಲ ಎಂಬಿಬಿಎಸ್ ಅಥವಾ ಇನ್ನಿತರ ಉನ್ನತ ಪದವಿಗಳನ್ನು ಗಳಿಸಿದರೆ ಮಾತ್ರ ಜೀವನ ಸಾರ್ಥಕವಾಗುವುದಿಲ್ಲ. ಅನೇಕ ವಿದ್ಯಾರ್ಥಿಗಳು ಪದವಿಗಳಿಸಿದ ನಂತರ ಪೋಷಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಅವರನ್ನು ಪ್ರೀತಿಯಿಂದ ನಡೆಸಿಕೊಳ್ಳು ತ್ತಿಲ್ಲ. ಕುಟುಂಬದಲ್ಲಿ ಪ್ರೀತಿ, ಪ್ರೇಮ ಮತ್ತು ಅನ್ನೋನ್ಯತೆ ಮುಖ್ಯ, ಶಿಕ್ಷಣ ಎಂದರೆ ಕೇವಲ ಅಂಕ ಗಳಿಸುವುದು ಮಾತ್ರವಲ್ಲ, ಉತ್ತಮ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳುವುದೇ ನಿಜವಾದ ಶಿಕ್ಷಣ

ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

-

Profile
Ashok Nayak Jun 10, 2026 12:06 AM

ಗೌರಿಬಿದನೂರು: ಬರೀ ಪದವಿಗಳಿಸುವುದು ಮಾತ್ರ ಶಿಕ್ಷಣದ ಉದ್ದೇಶವಾಗಬಾರದು. ಅದರ ಜೊತೆಗೆ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಎಚ್.ಎನ್.ಪ್ರಾಧಿಕಾರದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ(N.H.Sivashankar Reddy) ತಿಳಿಸಿದರು.

ನಗರದ ಡಾ.ಎಚ್.ಎನ್.ಕಲಾಭವನದಲ್ಲಿ ತಾಲ್ಲೂಕು ರೆಡ್ಡಿ ಜನಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಾಧಿ ಹೇಮರೆಡ್ಡಿ ಮಲ್ಲಮ್ಮ ಜಯಂತೋತ್ಸವ ಹಾಗೂ ಸಮುದಾ ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಶ್ರೀ ವೇಮಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ಎಂಬಿಬಿಎಸ್ ಅಥವಾ ಇನ್ನಿತರ ಉನ್ನತ ಪದವಿಗಳನ್ನು ಗಳಿಸಿದರೆ ಮಾತ್ರ ಜೀವನ ಸಾರ್ಥಕವಾಗುವುದಿಲ್ಲ. ಅನೇಕ ವಿದ್ಯಾರ್ಥಿಗಳು ಪದವಿಗಳಿಸಿದ ನಂತರ ಪೋಷಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಅವರನ್ನು ಪ್ರೀತಿಯಿಂದ ನಡೆಸಿಕೊಳ್ಳು ತ್ತಿಲ್ಲ. ಕುಟುಂಬದಲ್ಲಿ ಪ್ರೀತಿ, ಪ್ರೇಮ ಮತ್ತು ಅನ್ನೋನ್ಯತೆ ಮುಖ್ಯ, ಶಿಕ್ಷಣ ಎಂದರೆ ಕೇವಲ ಅಂಕ ಗಳಿಸುವುದು ಮಾತ್ರವಲ್ಲ, ಉತ್ತಮ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳುವುದೇ ನಿಜವಾದ ಶಿಕ್ಷಣ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Gauribidanur News: ತೀರ್ಥಶಾಲೆಯಲ್ಲಿ ಡಾ.ಮಾಸ್ತಿ ಮತ್ತು ಡಾ.ಎಚ್.ನರಸಿಂಹಯ್ಯ ಜಯಂತಿ

ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಾವು ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದೇವೆ. ನಮ್ಮದು ಶ್ರೇಷ್ಠ, ನಿಮ್ಮದು ಕನಿಷ್ಠ ಎಂಬ ಭಾವನೆ ಸಮಾಜದಲ್ಲಿ ಆಶಾಂತಿಗೆ ಕಾರಣವಾಗುತ್ತಿದೆ, ಇಂತಹ ಭೇಧಭಾವಗಳನ್ನು ತೊರೆದು, ಮಾನವಿಯತೆಗೆ ಹೆಚ್ಚಿನ ಮಹತ್ವ ನೀಡುವ ಮನೋಭವ ಬೆಳಸಿಕೊಳ್ಳಬೇಕಿದೆ,ಇಂದಿನ ಪೀಳಿಗೆಯಲ್ಲಿ ಗುರು ಹಿರಿಯರು ಹಾಗೂ ಸಂಬಂಧಗಳ ಬಗ್ಗೆ ಇರಬೇಕಾದ ಭಕ್ತಿ ಮತ್ತು ಗೌರವದ ಮನೋಭಾವವು ಹಿಂದೆ ಇದ್ದಷ್ಟು ಪ್ರಮಾಣದಲ್ಲಿಲ್ಲ ಎಂಬುದು ವಿಷಾದನೀಯವಾಗಿದೆ, ಮಹನೀಯರ ಹೇಮರೆಡ್ಡಿ ಮಲ್ಲಮ್ಮ ನವರಂತಹ ಆದರ್ಶಗಳನ್ನು ನೆನಪಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಪ್ರೀತಿ, ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಮಾಜಿ ಶಾಸಕಿ ಎನ್.ಜ್ಯೋತಿ ರೆಡ್ಡಿ(Former MLA N.Jyothi Reddy) ಮಾತನಾಡಿ, ಈ ವರ್ಷ ಶೇ.85 ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡು ತ್ತಿದ್ದು, ಮುಂದಿನ ವರ್ಷದಿಂದ 75% ಇದ್ದವರಿಗೂ ಸಹಾ ನೀಡಲಾಗುವುದು, ಒಳ್ಳೆಯ ಬುದ್ದಿ ಇಲ್ಲದೆ ಇರುವ ವಿದ್ಯೆ ವ್ಯರ್ಥ ಆದುದರಿಂದ ಮಕ್ಕಳು ಒಳ್ಳೆಯ ಗುಣಗಳನ್ನು ಬೆಳೆಸಿ ಕೊಳ್ಳಬೇಕು ಎನ್ನುವುದೇ ವೇಮನ ಅವರ ಆಶಯವಾಗಿತ್ತು, ಪ್ರತಿಯೊಂದು ಕುಟುಂಬದಲ್ಲಿ ಇರುವ ಮಹಿಳೆಯರು ನಿಮ್ಮ ಕುಟುಂಬವನ್ನು ನಮ್ಮ ಹೇಮರೆಡ್ಡಿ ಮಲ್ಲಮ್ಮ ಅವರ ಆಶಯಗಳಂತೆ ನಡೆಸಿಕೊಳ್ಳಬೇಕು ಮುಂದಿನ ದಿನಗಳಲ್ಲಿ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮನ ಪುತ್ಥಳಿಯನ್ನು ನಾನೇ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

ಕೆಪಿಜೆ ರೆಡ್ಡಿ ಮಾತನಾಡಿ, ನನ್ನ ಕನಸು ಅಮೇರಿಕಾದ ಅಧ್ಯಕ್ಷ ಗಾದಿ ಮತ್ತು ಭಾರತದ ಪ್ರಧಾನಮಂತ್ರಿ ನಮ್ಮ ರೆಡ್ಡಿಯವರೇ ಹಾಗಬೇಕು ನಮ್ಮ ಡಿಎನ್ಎ ಯಾರಿಗೂ ಇಲ್ಲ ಅಷ್ಟು ಒಳ್ಳೆಯ ಡಿಎನ್ಎ ನಮ್ಮದು ಅಂತಹವರು ನಾವು ನಾವೆಲ್ಲರೂ ಎಚ್ಚೆತ್ತುಕೊಂಡು ದೇಶವನ್ನು ಸೂಪರ್ ಪವರ್ ಮಾಡಬೇಕು ಎಂಬುದು ನನ್ನ ಗುರಿ. ಇವತ್ತು ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು ಹೆಮ್ಮೆ ಪಡುವ ಅವಶ್ಯಕತೆ ಇಲ್ಲ ಒಳ್ಳೆಯ ಬುದ್ದಿಯನ್ನು ಕಲಿಯಿರಿ ನಮ್ಮ ದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಬುದ್ದಿ ಇರುವುದು ಬೇರೆ ಯಾವ ದೇಶದವ ರಿಗೂ ಇಲ್ಲ ಎಂದರು. ಇದೇ ವೇಳೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಸಂಘದ ನಿರ್ದೇಶಕ ವೆಂಕಟ ಶಿವಾರೆಡ್ಡಿ ಧನಂಜಯರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ತಾಲ್ಲೂಕು ರೆಡ್ಡಿ ಜನಸಂಘದ ಅಧ್ಯಕ್ಷ ಅಶ್ವತ್ಥರೆಡ್ಡಿ, ಮುಖಂಡರಾದ ಪ್ರಕಾಶ್ ರೆಡ್ಡಿ, ಹನುಮಂತ ರೆಡ್ಡಿ, ಗಿರೀಶ್ ರೆಡ್ಡಿ, ಪ್ರಭಾಕರ್ ರೆಡ್ಡಿ, ಶ್ರವಣ್ ರೆಡ್ಡಿ ಹಾಗೂ ಸಮುದಾ ಯದ ಭಾಂಧವರು, ವಿದ್ಯಾರ್ಥಿಗಳು ಇನ್ನಿತರರು ಭಾಗವಹಿಸಿದ್ದರು.