ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಭಾಗವಾಗಿ 22ನೇ ವಾರ್ಡ್ ವಿನಾಯಕ ಲೇಔಟ್ ಮನೆ ಮನೆ ಭೇಟಿ ಸಮಸ್ಯೆ ಆಲಿಸಿದ ಶಾಸಕ ಪ್ರದೀಪ್ ಈಶ್ವರ್

ಮಳೆ ಬಂದಾಗ ಈ ಪ್ರದೇಶ ಜಲಾವೃತವಾಗುವುದನ್ನು ನಿವಾಸಿಗಳಿಂದ ಮಾಹಿತಿ ಪಡೆದು ಕೂಡಲೇ ಇಲ್ಲಿ ರಸ್ತೆ , ಚರಂಡಿ ನಿರ್ಮಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಕುಡಿಯುವ ನೀರಿಗೆ ಬೋರ್ ವೆಲ್ ಹಾಕಿಕೊಡಬೇಕು ಎಂದು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕ ಪ್ರದೀಪ ಈಶ್ವರ ಮೂರು ಕೋಟಿ ವೆಚ್ಚದಲ್ಲಿ ಇಲ್ಲಿನ ಸಮಸ್ಯೆ ಪರಿಹರಿಸಿ ರಸ್ತೆಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸಂಕಲ್ಪ ಮಾಡಿದರು.

ಮನೆ ಮನೆ ಭೇಟಿ ಸಮಸ್ಯೆ ಆಲಿಸಿದ ಶಾಸಕ ಪ್ರದೀಪ್ ಈಶ್ವರ್

ನಗರದ 22ನೇ ವಾರ್ಡ್ ವಿನಾಯಕ ನಗರದಲ್ಲಿ ಶಾಸಕ ಪ್ರದೀಪ ಈಶ್ವರ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮವನ್ನು ನಡೆಸಿ ಮನೆ ಮನೆಗೆ ಭೇಟಿ ನೀಡಿದ್ದರು.

Profile Ashok Nayak Jul 20, 2025 11:08 PM

ಚಿಕ್ಕಬಳ್ಳಾಪುರ: ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮವನ್ನು ಮುಂದುವರಿಸಿರುವ ಶಾಸಕ ಪ್ರದೀಪ್ ಈಶ್ವರ್ ಭಾನುವಾರ 22ನೇ ವಾರ್ಡ್ ವಿನಾಯಕ ಲೇಔಟ್ ನಲ್ಲಿ ಮನೆ ಮನೆಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. 

ಭಾನುವಾರ ನಗರ ಆಡಳಿತ ಮತ್ತು ತಾಲೂಕು ಆಡಳಿತದ 33 ಇಲಾಖೆಗಳ ಅಧಿಕಾರಿಗಳೊಟ್ಟಿಗೆ ವಿನಾಯಕ ನಗರದ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿ ಪರಿಹಾರ ಸೂತ್ರಗಳನ್ನು ಹೆಣೆದರು. 

ಇಲ್ಲಿನ ನಿವಾಸಿಗಳ ಭೂಮಿ ಅಗಲ ಗುರ್ಕಿ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು ಇದನ್ನು ನಗರ ವ್ಯಾಪ್ತಿಗೆ ಸೇರಿಸಿ ನಗರದ ಸೌಕರ್ಯಗಳನ್ನು ಒದಗಿಸಲು ಆಯುಕ್ತರು, ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ:Chikkaballapur News: ಅದ್ಧೂರಿಯಾಗಿ ನಡೆದ ಶ್ರೀಶರಭಯೋಗೀಂದ್ರರ 307ನೇ ಆರಾಧನಾ ಮಹೋತ್ಸವ

ಮಳೆ ಬಂದಾಗ ಈ ಪ್ರದೇಶ ಜಲಾವೃತವಾಗುವುದನ್ನು ನಿವಾಸಿಗಳಿಂದ ಮಾಹಿತಿ ಪಡೆದು ಕೂಡಲೇ ಇಲ್ಲಿ ರಸ್ತೆ , ಚರಂಡಿ ನಿರ್ಮಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಕುಡಿಯುವ ನೀರಿಗೆ ಬೋರ್ ವೆಲ್ ಹಾಕಿಕೊಡಬೇಕು ಎಂದು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕ ಪ್ರದೀಪ ಈಶ್ವರ ಮೂರು ಕೋಟಿ ವೆಚ್ಚದಲ್ಲಿ ಇಲ್ಲಿನ ಸಮಸ್ಯೆ ಪರಿಹರಿಸಿ ರಸ್ತೆಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸಂಕಲ್ಪ ಮಾಡಿದರು. 

ವೇಳೆ ಮಾತನಾಡಿದ ಅವರು ಕೆಲವರು ಅಧಿಕಾರಕ್ಕಾಗಿ ದೇವರನ್ನು ಬೇಡಿಕೊಳ್ಳುತ್ತಾರೆ. ಆದರೆ ನಾನು ದೇವರೇ ಕಳಿಸಿರುವ ಶಾಸಕನಾಗಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಸರ್ವ ಜನರ ಒಳಿತಿ ಗಾಗಿ ಪ್ರಾಮಾಣಿಕವಾಗಿ ಪರಿಶ್ರಮಿಸುತ್ತೇನೆ. ಕ್ಷೇತ್ರದ ನಾಗರೀಕರ ಆರೋಗ್ಯ ಸುಧಾರಣೆಗಾಗಿ 10 ಆಂಬುಲೆನ್ಸ್ ಗಳನ್ನು ಉಚಿತವಾಗಿ ಸೇವೆಗೆ ಒದಗಿಸಲಾಗಿದೆ. ಮಾಹೆಯಾನ ಇದಕ್ಕಾಗಿ 15ಲಕ್ಷ ಖರ್ಚಾಗುತ್ತದೆ. ಆದರೂ ಸ್ವಾರ್ಥಿಯಾಗಿ ಚಿಂತಿಸದೆ ಕಷ್ಟದಲ್ಲಿರುವವರ ಸೇವೆಗೆ ಇವುಗಳನ್ನು ಒದಗಿಸಿದ್ದೇನೆ ಎಂದರು. 

1000739104 PE

ಮೂರನೇ ವರ್ಷದ ವರಮಹಾಲಕ್ಷ್ಮಿ ಹಬ್ಬಕ್ಕೆ ಹೆಣ್ಣು ಮಕ್ಕಳಿಗೆ ಬಾಗಿನ ನೀಡುವ ಕಾರ್ಯಕ್ರಮಕ್ಕೆ ಕೆಲವೇ ದಿನಗಳಲ್ಲಿ ಚಾಲನೆ ನೀಡಲಾಗುವುದು. ಸೂರತ್ ನಲ್ಲಿ ಮಳೆ ಹೆಚ್ಚಾಗಿರುವ ಕಾರಣ ಸೀರೆಗಳು ಬರುವುದು ತಡವಾಗಿದೆ. ಈ ವಾರದಲ್ಲಿಯೇ ಸೀರೆ ವಿತರಣೆಗೆ ಕ್ರಮ ವಹಿಸಲಾಗುವುದು ಎಂದರು. 

ಮುಖ್ಯಮಂತ್ರಿಗಳು 224 ವಿಧಾನಸಭಾ ಕ್ಷೇತ್ರದ ಎಲ್ಲಾ ಶಾಸಕರಿಗೆ 50 ಕೋಟಿ ಅನುದಾನ ನೀಡಿದ್ದಾರೆ. ಇದನ್ನು ಬಳಸಿಕೊಂಡು ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಒತ್ತನ್ನು ನೀಡಲಾಗುವುದು. ಅನುದಾನದ ವಿಚಾರದಲ್ಲಿ ಬಿಜೆಪಿಯವರ ಟೀಕೆ ಸರಿ ಇಲ್ಲ. ಅವರು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಶಾಸಕರಿಗೆ ಹೇಗೆ ಅನುದಾನ ಹಂಚುತ್ತಿದ್ದರು ಎಂಬುದನ್ನು ಒಮ್ಮೆ ಅವಲೋಕಿಸಿ ಮಾತನಾಡಲಿ ಎಂದರು.

ಈವರೆಗೆ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ನೂರ ತೊಂಬತ್ತು ಹಳ್ಳಿಗಳನ್ನು ಸುತ್ತಿದ್ದು ಅಲ್ಲಿನ ಸಮಸ್ಯೆಗಳಿಗೆ ಕೂಡಲೇ ಸ್ಪಂದನೆ ನೀಡಿದ್ದೇನೆ . ನಗರ ಸಭೆಯಲ್ಲೂ ಕೂಡ ಬಹುತೇಕ ವಾರ್ಡ್ಗಳನ್ನು ಮುಗಿಸಿದ್ದೇನೆ. ನಾನು ಎಲ್ಲಿಗೆ ಭೇಟಿ ನೀಡಿದರು ಅನುದಾನ ಇಟ್ಟುಕೊಂಡೆ ಹೋಗುತ್ತಿದ್ದೇನೆ. ಹೀಗಾಗಿ ಜನತೆ ನನ್ನ ಮೇಲೆ ಹೆಚ್ಚಿನ ಒಲವು ಹೊಂದಿದ್ದಾರೆ. ಯಾರೋ ಏನೋ ಹೇಳುತ್ತಾರೆ ಎಂದು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಇದ್ದಷ್ಟು ಕಾಲ ಒಳ್ಳೆಯ ಕೆಲಸ ಕಾರ್ಯ ಗಳನ್ನು ಮಾಡಿ ಮುಂದೆ ಸಾಗುತ್ತೇನೆ. ನನ್ನದೇ ನಾಯಕತ್ವಬೇಕೆಂದರೆ ಮತದಾರರು ಬೆಂಬಲಿಸು ತ್ತಾರೆ. ಇಲ್ಲವಾದರೆ ಇಲ್ಲ ಅಧಿಕಾರದ ಹಿಂದೆ ಓಡುವವನು ನಾನಲ್ಲ ಎಂದು ಹೇಳಿದರು. 

ನಂದಿ ದೇವಾಲಯಕ್ಕೆ ಯುನೆಸ್ಕೊ ಮಾನ್ಯತೆ ದೊರಕಿಸಲು ಪ್ರಯತ್ನಿಸಲಾಗಿದೆ. ಎಂಟನೇ ಶತಮಾನದ ಇತಿಹಾಸವುಳ್ಳ ಯೋಗ ನಂದೀಶ್ವರ, ಭೋಗ ನಂದೀಶ್ವರ ದೇವಾಲಯಗಳನ್ನು ಹೆರಿಟೇಜ್ ದೇವಾಲಯಗಳು ಎಂದು ಘೋಷಣೆ ಮಾಡಿದರೆ ಅಂತರಾಷ್ಟ್ರೀಯ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ .ಪರಿಣಾಮವಾಗಿ ತಾನಾಗಿಯೇ ಮೆಟ್ರೋ ರೈಲು ಚಿಕ್ಕಬಳ್ಳಾಪುರಕ್ಕೆ ಬರಲಿದೆ. ಈ ದಿಸೆಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಲಾಗಿದೆ. ಯುನೆಸ್ಕೋ ಬೆಂಬಲ ಪಡೆಯಲು ಸದ್ಗುರುಗಳ ಮಾರ್ಗದರ್ಶನ ಅಗತ್ಯವಿದೆ. ನನ್ನ ದೂರ ದೃಷ್ಟಿ 15 ವರ್ಷಗಳ ನಂತರ ಗೊತ್ತಾಗಲಿದೆ ಎಂದರು 

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್ ಮುಖಂಡ ಡ್ಯಾನ್ಸ್ ಶ್ರೀನಿವಾಸ್, ಡೈರಿ ಗೋಪಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆಎಮ್ ಮುನೇಗೌಡ, ಮಂಡಿಕಲ್ ಕುಪೇಂದ್ರ, ನಾಯನಹಳ್ಳಿ ನಾರಾಯಣಸ್ವಾಮಿ, ಅಣ್ಣಮ್ಮ, ಪೆದ್ದನ್ನ, ಉಮೇಶ್, ನಾರಾಯಣಮ್ಮ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿ ವರ್ಗ ಇದ್ದರು.