ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gauribidanur News: ಸಾಮಾಜಿಕ ಅನಿಷ್ಟಗಳ ವಿರುದ್ಧ ಸಮರ ಸಾರಿದ್ದವರು ಬಸವಣ್ಣ: ಮಹೇಂದ್ರ

ವೀರಶೈವ ಸಮಾಜದ ಮುಖಂಡರಾದ ಮೃತ್ಯುಂಜಯ ಮಾತನಾಡಿ ಕಾಯಕವೇ ಕೈಲಾಸ ಎಂದು ಸಮಾಜಕ್ಕೆ ಮಾರ್ಗದರ್ಶನ ಮಾಡಿದ ಅಣ್ಣ ಬಸವಣ್ಣ ಅವರ ಜೀವನ ಸಕಲರಿಗೂ ಆದರ್ಶ. ಬಸವೇಶ್ವ ರರ ವಚನ ಸಾಹಿತ್ಯದ ಸಿರಿಯನ್ನು ಸಕಲರೂ ಅಧ್ಯಯನ ಮಾಡಿದರೆ ಇಂದು ನಾವುಗಳು ಸಮಾಜದಲ್ಲಿ ಎದುರಿಸುತ್ತಿರುವ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸಬಹುದು

ಸಾಮಾಜಿಕ ಅನಿಷ್ಟಗಳ ವಿರುದ್ಧ ಸಮರ ಸಾರಿದ್ದವರು ಬಸವಣ್ಣ: ಮಹೇಂದ್ರ

ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಅತ್ಯಂತ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು. -

Profile
Ashok Nayak Apr 20, 2026 9:52 PM

ಗೌರಿಬಿದನೂರು: 12ನೇ ಶತಮಾನದಲ್ಲಿಯೇ ಬಸವೇಶ್ವರರು ಸಮಾಜದಲ್ಲಿನ ಸಾಮಾಜಿಕ ಅನಿಷ್ಠ ಗಳಾದ ಜಾತಿ ವ್ಯವಸ್ಥೆ ,ಮೂಢ ನಂಬಿಕೆ, ಕಂದಾಚಾರದ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿ ಸಲು ಸಾಕಷ್ಟು ಶ್ರಮಿಸಿದ್ದರು ಎಂದು ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಮಹೇಂದ್ರ ತಿಳಿಸಿದರು.  

ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಅತ್ಯಂತ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು. 12ನೇ ವಚನ ಸಾಹಿತ್ಯ ಸಮಾಜದಲ್ಲಿ ಜಾಗೃತಿಯ ಕ್ರಾಂತಿಯನ್ನೇ ಉಂಟು ಮಾಡಿತ್ತು. ಬಸವಣ್ಣ ನವರ ಮಾರ್ಗ ದರ್ಶನದಲ್ಲಿ ನಾವು ಸಾಗಿದರೆ ಸಮ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದು ಆಶಿಸಿದರು.

ಇದನ್ನೂ ಓದಿ: Gauribidanur News: ನಾರೀ ಶಕ್ತಿ ವಂದನಾ ಮಸೂದೆಗೆ ಸೋಲು: ರೂಪಾ ಅನಂತರಾಜು ತೀವ್ರ ಆಕ್ರೋಶ

ವೀರಶೈವ ಸಮಾಜದ ಮುಖಂಡರಾದ ಮೃತ್ಯುಂಜಯ ಮಾತನಾಡಿ ಕಾಯಕವೇ ಕೈಲಾಸ ಎಂದು ಸಮಾಜಕ್ಕೆ ಮಾರ್ಗದರ್ಶನ ಮಾಡಿದ ಅಣ್ಣ ಬಸವಣ್ಣ ಅವರ ಜೀವನ ಸಕಲರಿಗೂ ಆದರ್ಶ. ಬಸವೇಶ್ವರರ ವಚನ ಸಾಹಿತ್ಯದ ಸಿರಿಯನ್ನು ಸಕಲರೂ ಅಧ್ಯಯನ ಮಾಡಿದರೆ ಇಂದು ನಾವುಗಳು ಸಮಾಜದಲ್ಲಿ ಎದುರಿಸುತ್ತಿರುವ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶಿಲ್ದಾರ್ ಆಶಾ, ಕಂದಾಯ ನಿರೀಕ್ಷಕರಾದ ಖಾದರ್, ಅಮರನಾಥ್ ,ರವಿಕುಮಾರ್, ಜಯಪ್ರಕಾಶ್, ಶಿವಪ್ರಸಾದ್ ಮುಖಂಡರಾದ ಹೀರೆಬಿದನೂರು ರಾಜಣ್ಣ , ನಟರಾಜು, ಶಿವಶಂಕರ್ ಆರಾಧ್ಯ, ಸತೀಶ್, ಗಿರೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.