Gauribidanur News: ಕಾಚಮಾಚೇನಹಳ್ಳಿ ಸಹಕಾರ ಸಂಘದ ಅಧ್ಯಕ್ಷರಾಗಿ ಬೊಮ್ಮಣ್ಣ, ಉಪಾಧ್ಯಕ್ಷರಾಗಿ ನಂಜುಂಡಪ್ಪ ಆಯ್ಕೆ
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೊಮ್ಮಣ್ಣ ಮಾತನಾಡಿ, ಶಾಸಕರು ಹಾಗೂ ನಮ್ಮ ಮುಖಂಡರಾದ ಕೆಎಚ್ ಪುಟ್ಟಸ್ವಾಮಿಗೌಡರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರರು ನಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಸೊಸೈಟಿಯಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ಜನರ ಋಣ ತೀರಿಸುವುದಾಗಿ ತಿಳಿಸಿದರು.
-
ಗೌರಿಬಿದನೂರು: ತಾಲೂಕಿನ ಕಾಚಮಾಚೇನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಾಸಕ ಕೆಎಚ್.ಪುಟ್ಟಸ್ವಾಮಿಗೌಡ(MLA KH.Puttaswamygowda)ರ ಬಣದ ಬೊಮ್ಮಣ್ಣ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ನಂಜುಂಡಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ಕಾಚಮಾಚೇನಹಳ್ಳಿ ವಿಎಸ್ಎಸ್ಎನ್ ಸೊಸೈಟಿಯ ನಿರ್ದೇಶಕರ ಆಯ್ಕೆಗಾಗಿ ನಡೆದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರ ಬಣದ ಹನ್ನೊಂದು ಮಂದಿ ನಿರ್ದೇಶಕರು ಆಯ್ಕೆಯಾಗುವ ಮೂಲಕ ಮೇಲುಗೈ ಸಾಧಿಸಿದ್ದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೊಮ್ಮಣ್ಣ ಮಾತನಾಡಿ, ಶಾಸಕರು ಹಾಗೂ ನಮ್ಮ ಮುಖಂಡರಾದ ಕೆಎಚ್ ಪುಟ್ಟಸ್ವಾಮಿಗೌಡರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರರು ನಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಸೊಸೈಟಿಯಲ್ಲಿ ಉತ್ತಮ ಆಡಳಿತವನ್ನು ನೀಡುವ ಮೂಲಕ ಜನರ ಋಣ ತೀರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೆಎಚ್ʼಕೆ ಬಣದ ಮುಖಂಡರಾದ ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟ ರಮರೆಡ್ಡಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಚಂದ್ರಣ್ಣ,ಮುಖಂಡರಾದ ಬಲರಾಮ್ ,ನಗರಸಭೆ ಮಾಜಿ ಸದಸ್ಯ ಕೆಎಸ್ ಅನಂತ ರಾಜ್, ವೀರಶೈವ ಮಹಾಸಭಾ ಅಧ್ಯಕ್ಷ ಮಹೇಂದ್ರ, ಚಂದ್ರಣ್ಣ, ನಾಗೇಶ್, ಶಿವಾನಂದ ರೆಡ್ಡಿ, ಗಿರೀಶ್, ಶ್ರೀನಿವಾಸ್, ಗಂಗಾಧರಪ್ಪ, ಲಕ್ಷ್ಮೀನಾರಾಯಣ್, ಮಂಜುನಾಥ್, ಲಿಂಗಣ್ಣ, ಶ್ರೀನಿವಾಸ್ , ಗಂಗಾಧರಪ್ಪ, ಮಂಜುನಾಥ್, ಲಕ್ಷ್ಮೀನಾರಾಯಣ್ ಹಾಗೂ ಇನ್ನಿತರರು ಹಾಜರಿದ್ದರು.