Chikkaballapur News: ಹೋಳಿ ಯುಗಾದಿ ರಂಜಾನ್ ಹಬ್ಬಗಳು ಭಾವೈಕ್ಯತೆಯಿಂದ ಆಚರಿಸಿ: ಡಿವೈಎಸ್‌ಪಿ ಮುರಳೀಧರ್
ಸಾಮಾಜಿಕ ತಾಣಗಳಲ್ಲಿ ಒಂದು ಮೆಸೇಜ್‌ನ್ನು ಪ್ರಚಾರ ಮಾಡುವ ಮುನ್ನ 10 ಬಾರಿ ಯೋಚಿಸ ಬೇಕು. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವವರ ಪಟ್ಟಿಯನ್ನು ತಯಾರಿಸಲಾಗುವುದು. ಯಾವಾಗಲದರೂ ಏನಾದರೂ ಘಟನೆಗಳ ನಡೆದರೆ ಪಟ್ಟಿಯಲ್ಲಿರುವವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು
-
ಚಿಕ್ಕಬಳ್ಳಾಪುರ: ಮುಂಬರುವ ಮಾ.3ರ ಹೋಳಿ, ಮಾ.19 ರಂದು ಯುಗಾದಿ, ಮಾ.21ರಂದು ರಂಜಾನ್ ಹೀಗೆ ಸರಣಿ ಹಬ್ಬಗಳು ಬಂದಿರುವುದರಿಂದ ಹಿಂದೂ, ಮುಸ್ಲಿಂ, ಸಮುದಾಯದವರು ಭಾವೈಕ್ಯತೆಯಿಂದ, ಸಡಗರಸಂಭ್ರಮದ, ಶಾಂತಿಯುತವಾಗಿ ಆಚರಿಸಬೇಕು ಎಂದು ಡಿವೈಎಸ್ಪಿ ವಿ.ಮುರಳೀಧರ್(DySP Muralidhar) ಮನವಿ ಮಾಡಿದರು.
ಹಬ್ಬಗಳ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ ದರು.
ಹಿಂದು-ಮುಸ್ಲಿಂ ಎರಡು ಕೋಮಿನವರು ಸಹಕಾರ ನೀಡಬೇಕು. ಹೋಳಿ ದಿನ ಬಣ್ಣ ಎರಚುವುದು ರೂಡಿಯಲ್ಲಿದೆ. ಆದರೆ ಪಿಯುಸಿ ಪರೀಕ್ಷೆ ಬರೆಯುವವರು ಹೋಗುತ್ತಿರುತ್ತಾರೆ. ರಂಜಾನ್ ನಮಾಜ್ ಗೆ ದೇವಸ್ಥಾನಗಳಿಗೆ, ಆಸ್ಪತ್ರೆಗೆ ಹೋಗುತ್ತಿರುತ್ತಾರೆ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಆಚರಿಸ ಬೇಕು. ರಂಜಾನ್ ಹಬ್ಬದ ಉಪವಾಸ ಬಿಡುವ ಸಮಯದಲ್ಲಿ ಸಂಚಾರಿ ವ್ಯವಸ್ಥೆ ಕಾಪಾಡಲು ಮಸೀದಿಗಳ ಹತ್ತಿರ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುತ್ತದೆ ಎಂದರು.
ಇದನ್ನೂ ಓದಿ: Chikkaballapur News: “ವಿಶ್ವದ ಸಮಸ್ಯೆಗಳಿಗೆ ಭಾರತೀಯ ಸಂಸ್ಕೃತಿ ಆಚಾರ–ವಿಚಾರಗಳೇ ಏಕೈಕ ಪರಿಹಾರ” : ಸಂತೋಷ್ ಕುಮಾರ್ ಕಾರ್ಲೇಟಿ
ರಂಜಾನ್ 26ನೇ ದಿನ(ಮಾ.16ರಂದು) ಜಾಗರಣೆ ಇರುತ್ತಾರೆ. ಜಾಗರಣೆ ಹಿನ್ನಲೆಯಲ್ಲಿ ರಾತ್ರಿಯಲ್ಲಿ ವೀಲಿಂಗ್, ತ್ರಿಬಲ್ ರೈಡಿಂಗ್, ರಸ್ತೆಗಳಲ್ಲಿ ಕೂಗಾಡುವುದು,ಲೈಟ್ ಗಳನ್ನು ಒಡೆಯುವುದು ಮುಂತಾದ ಕೆಲಸಗಳನ್ನು ಮಾಡಬಾರದು.ಈ ಬಗ್ಗೆ ಮಸೀದಿಗಳಲ್ಲಿ ಹುಡುಗರಿಗೆ ಸೂಚನೆ ನೀಡಿ ಜಾಗೃತಿಗೊಳಿಸಬೇಕು. ಅಂತಹ ಘಟನೆಗಳು ಕಂಡುಬಂದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುದು ಎಂದು ಎಚ್ಚರಿಸಿದರು.
ಸಂಚಾರಿ ನಿಯಮಗಳನ್ನು, ಅಪರಾಧ ತಡೆ ನಿಯಂತ್ರದ ಕುರಿತು ಎಷ್ಟು ಹೇಳಿದರೂ ಸಾಕಾಗುತ್ತಿಲ್ಲ, ಹೆಲ್ಮೆಟ್ ಧರಿಸದಿರುವುದು, ಸಂಚಾರಿ ನಿಯಮಗಳ ಉಲ್ಲಂಘನೆ, ತ್ರಿಬಲ್ ರೈಡಿಂಗ್ ಮತ್ತಿತರ ಅಪರಾಧಗಳನ್ನು ತೀವ್ರವಾಗಿ ಪರಿಗಣಿಸಲಾಗುವುದು.
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನು ಹಾಕುವ ಕುರಿತು ಸಾಕಷ್ಟು ಬಾರಿ ಎಚ್ಚರಿಕೆ ವಹಿಸಬೇಕು. ನಿಜವೇ, ಸುಳ್ಳೆ ಎಂದು ಪರಿಗಣಿಸಿ ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕ ಬೆಳೆಸ ಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ತಾಣಗಳಲ್ಲಿ ಒಂದು ಮೆಸೇಜ್‌ನ್ನು ಪ್ರಚಾರ ಮಾಡುವ ಮುನ್ನ 10 ಬಾರಿ ಯೋಚಿಸ ಬೇಕು. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವವರ ಪಟ್ಟಿಯನ್ನು ತಯಾರಿಸ ಲಾಗುವುದು. ಯಾವಾಗಲದರೂ ಏನಾದರೂ ಘಟನೆಗಳ ನಡೆದರೆ ಪಟ್ಟಿಯಲ್ಲಿರುವವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸ ಬೇಕು ಎಂದರು.
ಎರಡು ಕೋಮಿನ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.